ತುಮಕೂರು: ಕಾರ್ಗಿಲ್ ವಿಜಯೋತ್ಸವದ 26ನೇ ವರ್ಷದ ಅಂಗವಾಗಿ ಭಗತ್ ಕ್ರಾಂತಿ ಸೇನೆಯಿಂದ ಶನಿವಾರ ನಗರದ ಬಿಜಿಎಸ್ ವೃತ್ತದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿ, ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ತ್ಯಾಗ, ಬಲಿದಾನದ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೆಲವರು ಸೆಲೆಬ್ರಿಟಿಗಳನ್ನು ವೈಭವೀಕರಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆದರೆ ಭಗತ್ ಕ್ರಾಂತಿ ಸೇನೆಯವರು ದೇಶ ರಕ್ಷಿಸುವ ನಮ್ಮ ಯೋಧರ ಸೇವೆ ಗೌರವಿಸುವ, ಯುವಜನರಲ್ಲಿ ದೇಶಾಭಿಮಾನ ಮೂಡಿಸುವಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಸೈನಿಕ ಸಿದ್ಧಗಂಗಯ್ಯ ಅವರಿಗೆ ಭಗತ್ ಕ್ರಾಂತಿ ಸೇನೆಯಿಂದ ‘ವೀರ ಯೋಧ’ ಬಿರುದನ್ನು ಶಾಸಕರು ಪ್ರದಾನ ಮಾಡಿ ಸನ್ಮಾನಿಸಿದರು.ಮಾಜಿ ಸೈನಿಕರಾದ ಆನಂದ್, ಬಾಲಕೃಷ್ಣ, ನಾಗೇಂದ್ರ ಅವರನ್ನು ಸನ್ಮಾನಿಸಿ ದೇಶ ರಕ್ಷಣೆಯಲ್ಲಿ ಮಾಡಿದ ಅವರ ಸೇವೆಯನ್ನು ಗೌರವಿಸಲಾಯಿತು.
ಭಗತ್ ಕ್ರಾಂತಿ ಸೇನೆ ಮುಖಂಡರಾದ ನವಚೇತನ್, ಶ್ರೀನಿವಾಸಗೌಡ, ಬಟವಾಡಿ ರಘು, ಮಂಚಲದೊರೆ ಆರಾಧ್ಯ, ಎಚ್.ರಾಕೇಶ್, ಹೇಮಂತ್, ಅಂಜನ್, ಪ್ರವೀಣ್, ರಾಕೇಶ್, ಅಭಿಷೇಕ್, ನಗರಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಧನುಷ್, ಬಂಬೂ ಮೋಹನ್, ಕೆ.ಎಂ.ಶಿವಕುಮಾರ್(ಆಟೋ ಯಡಿಯೂರಪ್ಪ), ಪ್ರೀತಮ್ ಮೊದಲಾದವರು ಭಾಗವಹಿಸಿದ್ದರು.