ಸಂಘರ್ಷಗಳಿಗೆ ಭಗವದ್ಗೀತೆಯೇ ದಿವ್ಯೌಷಧಿ

KannadaprabhaNewsNetwork |  
Published : Nov 21, 2023, 12:45 AM IST
ಫೋಟೋ : 20ಕೆಎಂಟಿ_ಎನ್ ಒವಿ_ಕೆಪಿ1 : ಹೆಗಡೆಯಲ್ಲಿ ಜಿಲ್ಲಾ ಭಗವದ್ಗೀತೆ ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಮುರಲೀಧರ ಪ್ರಭು ಮಾತನಾಡಿದರು. ನಾಗೇಶ ಶಾನಭಾಗ, ರಾಜೇಂದ್ರ ಭಟ್ಟ, ಆನಂದ ನಾಯ್ಕ, ರಮೇಶ ಉಪಾಧ್ಯಾಯ ಇದ್ದರು. | Kannada Prabha

ಸಾರಾಂಶ

ಬದುಕಿನಲ್ಲಿ ಕಷ್ಟಸುಖಗಳ ಬಂದಾಗ ನಾವು ಸ್ಥಿತಪ್ರಜ್ಞರಾಗಿಬೇಕು. ಕಷ್ಟಕ್ಕೆ ಕುಗ್ಗದೇ ಸುಖಕ್ಕೆ ಹಿಗ್ಗದೇ ಸಮಾನ ಮನಸ್ಥಿತಿ ಸಾಧಿಸಿದವರು ದುಃಖದಿಂದ ಮುಕ್ತರಾಗಿರುತ್ತಾರೆ. ಸ್ಥಿತಿಪ್ರಜ್ಞೆಯೇ ಬದುಕಿನ ಸಾಧನೆಗೆ ಸಹಕಾರಿ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದಾರೆ ಎಂದು ಬಿಇಒ ರಾಜೇಂದ್ರ ಭಟ್ ಹೇಳಿದರು. ಕುಮಟಾ ತಾಲೂಕಿನ ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಜರುಗಿದ ಜಿಲ್ಲಾ ಭಗವದ್ಗೀತಾ ಅಭಿಯಾನ ಪ್ರಾರಂಭದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.

ಕುಮಟಾ: ಭಗವದ್ಗೀತೆಯಲ್ಲಿರುವ ಉತ್ತಮ ಜೀವನ ಪಾಠಗಳನ್ನು ಭಾರತೀಯರಾದ ನಾವು ಅನೇಕ ಪೀಳಿಗೆಗಳಿಂದ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಂಡಿದ್ದೇವೆ ಎಂದು ಬಿಇಒ ರಾಜೇಂದ್ರ ಭಟ್ ಹೇಳಿದರು.

ತಾಲೂಕಿನ ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಜರುಗಿದ ಜಿಲ್ಲಾ ಭಗವದ್ಗೀತಾ ಅಭಿಯಾನ ಪ್ರಾರಂಭದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಭಾರತದಲ್ಲಿಂದು ವಿಭಕ್ತ ಕುಂಟುಂಬಗಳು ಹೆಚ್ಚಾಗುತ್ತಿವೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿದ್ದರಿಂದ ಅನೇಕ ಸಂಬಂಧಗಳನ್ನು ಮರೆಯುವಂತಾಗಿದೆ. ಮನೆ ಚಿಕ್ಕದಾದಂತೆ ಮನಸ್ಸೂ ಚಿಕ್ಕದಾಗಿ ಸಂಕುಚಿತಗೊಂಡಿದೆ. ಅವಿಭಕ್ತ ಕುಟುಂಬಗಳಲ್ಲಿ ಹಿರಿಯರಿಂದ ಬರುಬಹುದಾಗಿದ್ದ ಅನುಭವ, ಸಂಸ್ಕಾರಗಳನ್ನು ಪ್ರತಿಯೊಂದು ಕುಟುಂಬವೂ ಕಳೆದುಕೊಳ್ಳುತ್ತಿದೆ. ಇಂಥ ಸಂಘರ್ಷಗಳಿಗೆ ಭಗವದ್ಗೀತೆಯೇ ದಿವ್ಯೌಷಧಿ. ಬದುಕಿನಲ್ಲಿ ಕಷ್ಟಸುಖಗಳ ಬಂದಾಗ ನಾವು ಸ್ಥಿತಪ್ರಜ್ಞರಾಗಿಬೇಕು. ಕಷ್ಟಕ್ಕೆ ಕುಗ್ಗದೇ ಸುಖಕ್ಕೆ ಹಿಗ್ಗದೇ ಸಮಾನ ಮನಸ್ಥಿತಿ ಸಾಧಿಸಿದವರು ದುಃಖದಿಂದ ಮುಕ್ತರಾಗಿರುತ್ತಾರೆ. ಸ್ಥಿತಿಪ್ರಜ್ಞೆಯೇ ಬದುಕಿನ ಸಾಧನೆಗೆ ಸಹಕಾರಿ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದಾರೆ ಎಂದರು.

ಉತ್ತರ ಕನ್ನಡ ಜಿಲ್ಲಾ ಹಾಗೂ ಕುಮಟಾ ತಾಲೂಕು ಭಗವದ್ಗೀತೆ ಅಭಿಯಾನ-೨೦೨೩ನ್ನು ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾಗೇಶ ಬಿ. ಶಾನಭಾಗ ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಅಭಿಯಾನದ ಜಿಲ್ಲಾ ಅಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಇಂದು ಎಲ್ಲ ಸುಖ-ಭೋಗ, ಐಶ್ವರ್ಯ ಗಳಿಸಿದ್ದರೂ ಹಿಂದಿನವರಲ್ಲಿ ಇದ್ದಂಥ ಶಾಂತಿ ಇಲ್ಲ. ಬದುಕಿನಲ್ಲಿ ಶಾಂತಿ-ನೆಮ್ಮದಿಗೆ ಭಗವದ್ಗೀತೆಯನ್ನು ಅರಿತು ಅನುಸರಿಸಬೇಕು ಎಂದರು.

ತಾಲೂಕು ಭಗವದ್ಗೀತಾ ಅಭಿಯಾನದ ಅಧ್ಯಕ್ಷ ರಮೇಶ ಉಪಾಧ್ಯಾಯ ಸ್ವಾಗತಿಸಿದರು. ಸಂಚಾಲಕ ಆನಂದ ವೈ. ನಾಯ್ಕ ಪ್ರಸಕ್ತ ವರ್ಷದ ಅಭಿಯಾನದ ಸಮಗ್ರ ವಿವರ ನೀಡಿದರು. ಗಣೇಶ ಭಟ್ಟ ಮತ್ತು ಜಯಾ ಶಾನಭಾಗ ಭಗವದ್ಗೀತೆಯ ೧೦ನೇ ಅಧ್ಯಾಯ ಪಠಿಸಿದರು. ನಾಗರಾಜ ಹೆಗಡೆ ವಂದಿಸಿದರು. ಎಸ್.ವಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ