ಜೀವ ಸಂಕುಲದ ದಾಹ ತೀರಿಸಿದ ಭಗೀರಥ ವಿಶ್ವ ಮಾನವ: ಸಹಜಾನಂದ ಸ್ವಾಮೀಜಿ

KannadaprabhaNewsNetwork | Published : May 25, 2024 12:51 AM

ಸಾರಾಂಶ

ಭಗೀರಥ ಮಹರ್ಷಿ ಘೋರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಶಿವನಿಂದ ವರ ಪಡೆದು ಗಂಗೆಯನ್ನು ಧರೆಗಿಳಿಸಿ ಧರೆಯ ಮೇಲಿನ ಜನರ ನೀರಿನ ದಾಹ ತೀರಿಸಿದ ವಿಶ್ವ ಮಾನವ ಎಂದು ಸ್ಥಳೀಯ ಬ್ರಹ್ಮ ವಿದ್ಯಾಶ್ರಮ ಸಿದ್ದರೂಢ ಮಠದ ಸಹಜಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಭಗೀರಥ ಮಹರ್ಷಿ ಘೋರ ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ಶಿವನಿಂದ ವರ ಪಡೆದು ಗಂಗೆಯನ್ನು ಧರೆಗಿಳಿಸಿ ಧರೆಯ ಮೇಲಿನ ಜನರ ನೀರಿನ ದಾಹ ತೀರಿಸಿದ ವಿಶ್ವ ಮಾನವ ಎಂದು ಸ್ಥಳೀಯ ಬ್ರಹ್ಮ ವಿದ್ಯಾಶ್ರಮ ಸಿದ್ದರೂಢ ಮಠದ ಸಹಜಾನಂದ ಸ್ವಾಮೀಜಿ ಹೇಳಿದರು.

ಸ್ಥಳೀಯ ಕೆಂಗೇರಿ ಮಡ್ಡಿಯಲ್ಲಿರುವ ಭಗೀರಥ ಮಹರ್ಷಿ ದೇವಸ್ಥಾನ ಸಭಾಂಗಣದಲ್ಲಿ ಜರುಗಿದ ಮಹರ್ಷಿ ಭಗೀರಥ ಜಯಂತಿ ಹಾಗೂ ಮಂದಿರದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ಭಗೀರಥ ಮಹರ್ಷಿ ಕಠೋರ ತಪಸ್ಸು ಮಾಡಿ ಗಂಗೆಯನ್ನು ಧರೆಗೆ ಇಳಿಸಿ ಸಕಲ ಜೀವ ಸಂಕುಲವನ್ನು ರಕ್ಷಿಸಿದ ಸಕಲರಿಗೂ ಲೆಸನ್ನೇ ಬಯಸಿದ ಜಗತ್ತಿನ ಮಹಾನ್‌ ವ್ಯಕ್ತಿ ಎಂದರು.

ಚಿಮ್ಮಡದ ವೀರಕ್ತ ಮಠದ ಪ್ರಭು ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಭಗೀರಥ ಮಹರ್ಷಿಯವರು ಇಡೀ ಮನಕುಲದ ನೀರಿನ ದಾಹ ತೀರಿಸಿದ ಮಹಾಪುರಷರಾಗಿದ್ದರು. ಅವರ ಮಹಾನ್‌ ಶಿವ ಭಕ್ತರಾಗಿದ್ದರು. ಘೋರ ತಪ್ಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದರು ಎಂದರು.

ಬೆಳಗಲಿಯ ಸಿದ್ದರಾಮ ಶಿವಯೋಗಿ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿ, ಭಗೀರಥ ಸಮಾಜ ಯುವ ಜನತೆ ವ್ಯಸನಮುಕ್ತರಾಗಿ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು. ಇತರೆ ಸಮುದಾಯದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಸಮಾಜದ ಏಳಿಗೆಗೆ ಮುಂದಾಗಬೇಕು ಎಂದರು.

ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು, ಮಾರುತಿ ಕರೋಶಿ, ಅಲ್ಲಪ್ಪ ದಡ್ಡಿಮನಿ, ಪರಪ್ಪ ಬ್ಯಾಕೋಡ, ಯಮನಪ್ಪ ಉಪ್ಪಾರ, ರಮೇಶ ಲಾತುರ ವೇದಿಕೆಯ ಉಪಸ್ಥಿತರಿದ್ದರು.

ಸ್ಥಳೀಯ ಉಪ್ಪಾರ ಸಮಾಜದ ಅಧ್ಯಕ್ಷ ಮಹಾಲಿಂಗಪ್ಪ ಲಾತೂರ ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರ್ಕಾರವೇ ಭಗೀರಥ ಜಯಂತಿ ಆಚರಿಸುತ್ತಿರುವುದು ಉಪ್ಪಾರ ಸಮಾಜಕ್ಕೆ ಸಿಕ್ಕ ಅತೀ ದೊಡ್ಡ ಗೌರವ ಎಂದ ಅವರು, ಸಮಾಜ ಸಂಘಟಿತವಾಗಿರುವುದು ಗೌರವದ ಸಂಕೇತ ಎಂದು ಹೇಳಿದರು.

ಮೆರವಣಿಗೆ : ಮಹಾಲಿಂಗಪುರದ ಮಹಾಲಿಂಗೇಶ್ವರ ಸಿದ್ದಸಂಸ್ಥಾನ ಮಠದ ಶಿವಯೋಗಿ ರಾಜೇಂದ್ರ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಕುಂಭ ಹಾಗೂ ಮೆರವಣಿಗೆಗೆ ಚಾಲನೆ ನೀಡಿದರು. ಸಕಲ ಮಂಗಲ ವಾದ್ಯಗಳೊಂದಿಗೆ ಕುಂಭ ಮತ್ತು ಭಗೀರಥರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ಕೆಂಗೇರಿಮಡ್ಡಿಯಲ್ಲಿರುವ ಭಗೀರಥ ದೇವಸ್ಥಾನ ಬಂದು ತಲುಪಿತು.

ಕಾರ್ಯಕ್ರಮದಲ್ಲಿ ನಾಯಕರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಅಶೋಕ ಅಂಗಡಿ, ಈರಪ್ಪ ಡಿನ್ನಮನಿ, ಮಹಾಲಿಂಗಪ್ಪ ಜಕ್ಕಣ್ಣವರ, ಸಮಾಜದ ಮುಖಂಡರಾದ ಪಾಂಡು ಸಿದ್ದಾಪುರ, ಭೀಮಶಿ ಪಾಟೀಲ, ಹಣಮಂತ ಉಪ್ಪಾರ, ಮುತ್ತಪ್ಪ ಲಾತೂರ, ಬಸವರಾಜ ಮುಗಳಖೊಡ, ಶಂಕರ ಮುಗಳಖೊಡ, ಲಕ್ಷ್ಮಣ ಮುಗಳಖೊಡ, ಭೀಮಪ್ಪ ಪೂಜೇರಿ, ಮಲ್ಲಪ್ಪ ಮುದಕಪ್ಪಗೋಳ, ರಾಜು ಮುದಕಪ್ಪಗೋಳ, ವಿಜಯ ಲಾತೂರ, ಲಕ್ಷ್ಮಣ ಮೇನ್ನಿಕೇರಿ, ಭೀಮಶಿ ಸಸಾಲಟ್ಟಿ, ಅಲ್ಲಪ್ಪ ದಡ್ಡಿಮನಿ ಸೇರಿದಂತೆ ನಗರದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಅನೇಕ ಸಮಾಜ ಬಾಂಧವರು, ಗುರು ಹಿರಿಯರು, ಯುವಕ ಸಂಘದ ಸದಸ್ಯರು ಭಾಗವಹಿಸಿದ್ದರು. ವಿವಿಧ ಸಮಾಜದ ಗಣ್ಯರನ್ನು, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಹಣಮಂತ ಲಾತೂರ ನಿರೂಪಿಸಿ ವಂದಿಸಿದರು.

Share this article