-ಮಾಜಿ ಶಾಸಕ ಎಸ್ ವಿ ರಾಮಚಂದ್ರ ಹುಟ್ಟುಹಬ್ಬ । ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕನ್ನಡಪ್ರಭವಾರ್ತೆ ಜಗಳೂರು
ಮಾಜಿ ಶಾಸಕ ರಾಮಚಂದ್ರಪ್ಪ ಅವರು ಜಗಳೂರು ಕ್ಷೇತ್ರದ 57 ಕೆರೆಗಳನ್ನು ತುಂಬಿಸಲು ಶ್ರಮಿಸಿದ ಬರದ ನಾಡಿನ ಭಗೀರಥ ಎಂದು ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧರ್ಮನಾಯ್ಕ್ ಹೇಳಿದರು.ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರ ಹುಟ್ಟು ಹಬ್ಬದ ಹಿನ್ನೆಲೆ ಹುಚ್ಚಂಗಿಪುರ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ, ವಿವಿಧ ಮಹನೀಯರ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.ಎಸ್.ವಿ.ರಾಮಚಂದ್ರ ಜನ್ಮದಿನದ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಗಣ್ಯರ ಶುಭಕೋರಿಕೆ: ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹುಟ್ಟುಹಬ್ಬಕ್ಕೆ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಮುಖಂಡರಾದ ಗಾಯಿತ್ರಿ ಸಿದೇಶ್ವರ್, ಮಾಡಾಳ ಮಲ್ಲಿಕಾರ್ಜುನ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಗಳೂರು ಮಂಡಲ ಅಧ್ಯಕ್ಷ ಸೊಕ್ಕೆ ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ವಿ.ಶಾಂತಕುಮಾರಿ ಶಶಿಧರ್, ಜಿ.ಪಂ.ಸದಸ್ಯರಾದ ವಿಜಯಲಕ್ಷ್ಮಿ ಮಹೇಶ್, ನಾಗರಾಜ್ ಅನೇಕ ಗಣ್ಯರು, ಅಧಿಕಾರಿಗಳು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಶುಭಕೋರಿದರು.ಈ ಸಂದರ್ಭದಲ್ಲಿ ಪ.ಪಂ ಮಾಜಿ ಅಧ್ಯಕ್ಷ ಜೆ.ವಿ ನಾಗರಾಜ್,ಮಂಡಲ ಮಾಜಿ ಅಧ್ಯಕ್ಷ ಡಿ.ವಿ ನಾಗಪ್ಪ, ಪ.ಪಂ.ಸದಸ್ಯರಾದ ಪಾಪಲಿಂಗಪ್ಪ, ಮುಖಂಡರಾದ ಶಿವು ಲ್ಯಾಬ್, ಯೋಗನಂದ, ರಮೇಶ್, ಬಾಲರಾಜ್, ರವಿ ಯು.ಸಿ ಹುಚ್ಚಂಗಿಪುರ, ರುದ್ರೇಶ್ ಇದ್ದರು.---
16 ಜೆ.ಜಿ.ಎಲ್.1ಮಾಜಿ ಶಾಸಕ ಎಸ್. ವಿ. ರಾಮಚಂದ್ರ ಹುಟ್ಟುಹಬ್ಬದ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮಾಜಿ ಶಾಸಕರ ಎಸ್.ವಿ.ಆರ್ ಅಭಿಮಾನಿ ಬಳಗ, ಬಿಜೆಪಿ ಘಟಕದ ಜಗಳೂರು ಪದಾಧಿಕಾರಿಗಳು, ಮುಖಂಡರಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.