ಡಾ.ಪ್ರವೀಣ ಭಜಂತ್ರಿ ಮನೆಗೆ ಭೇಟಿ ಭಾಗವತ್‌ ಭೇಟಿ

KannadaprabhaNewsNetwork |  
Published : Jul 15, 2026, 03:00 AM IST
ಕಲಾದಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಲಾದಗಿರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿನ ಸ್ವಯಂಸೇವಕ ಡಾ.ಪ್ರವೀಣ ಅವರ ಮನೆಗೆ ಭೇಟಿ ನೀಡಿ ತುಸು ಹೊತ್ತು ತಂಗಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿನ ಸ್ವಯಂಸೇವಕ ಡಾ.ಪ್ರವೀಣ ಅವರ ಮನೆಗೆ ಭೇಟಿ ನೀಡಿ ತುಸು ಹೊತ್ತು ತಂಗಿದರು.

ಬೆಳಗಾವಿಯಿಂದ ಗದ್ದನಕೇರಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಮೋಹನ್ ಭಾಗವತ್ ಅವರು ಮಾರ್ಗ ಮಧ್ಯೆ ಕಲಾದಗಿ ಗ್ರಾಮದ ಹೆಸ್ಕಾಂ ಹತ್ತಿರ ಡಾ.ಪ್ರವೀಣ ಭಜಂತ್ರಿಯವರ ಮನೆಗೆ ಭೇಟಿ ನೀಡಿ ತುಸು ಹೊತ್ತು ವಿಶ್ರಾಂತಿ, ಮನೆಯ ಕುಟುಂಬ ಸದಸ್ಯರೊಡನೆ ಕುಶಲೋಪರಿ ಮಾತು, ಸ್ವಯಂಸೇವಕ ಯುವಕರೊಡನೆ ಪರಿಚಯ ಮಾತು ಮಾತನಾಡಿ, ಮುಂದೆ ವಿಜಯಪುರಕ್ಕೆ ತೆರಳಿದರು. ಕಲಾದಗಿಯಲ್ಲಿ 20 ನಿಮಿಷ ಕಾಲ ಕಳೆದರು.

ಸೂಕ್ತ ಬಂದೋಬಸ್ತ್‌: ಆರ್.ಎಸ್.ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಅವರು ಭೇಟಿ ಹಿನ್ನೆಲೆ ಕಲಾದಗಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನೆರವಿಗೆ ಬಾರದೇ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ: ನಿಖಿಲ್‌ ಕುಮಾರಸ್ವಾಮಿ
ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖ