ಕನ್ನಡ ಸಾಹಿತ್ಯಕ್ಕೆ ಭೈರಪ್ಪ ಕೊಡುಗೆ ಅಪಾರ: ಭಿಕ್ಷವರ್ತಿಮಠ್

KannadaprabhaNewsNetwork |  
Published : Oct 07, 2025, 01:02 AM IST
06 HRR. 04ಹರಿಹರದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಹಿರಿಯ ಸಾಹಿತಿಗಳಾದ ಎಸ್.ಎಲ್. ಬೈರಪ್ಪ, ಮಾವಳ್ಳಿ ಗಣೇಶ, ಚುಟುಕು ಸಾಹಿತ್ಯದ ರಾಜಶೇಖರ ಗುಂಡಗಟ್ಟಿ ಯವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಅರ್ಪಿಸುವ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಕನ್ನಡದ ಆಧುನಿಕ ಕಾದಂಬರಿಕಾರ, ಸಾಮಾಜಿಕ ಚಿಂತಕ, ತತ್ವಜ್ಞಾನಿ, ಚಿತ್ರಕಥೆಗಾರರಾಗಿದ್ದ ಎಸ್ .ಎಲ್. ಬೈರಪ್ಪನವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಎಸ್.ಎ.ಭಿಕ್ಷವರ್ತಿಮಠ್ ಹೇಳಿದರು.

ಹರಿಹರ: ಕನ್ನಡದ ಆಧುನಿಕ ಕಾದಂಬರಿಕಾರ, ಸಾಮಾಜಿಕ ಚಿಂತಕ, ತತ್ವಜ್ಞಾನಿ, ಚಿತ್ರಕಥೆಗಾರರಾಗಿದ್ದ ಎಸ್ .ಎಲ್. ಬೈರಪ್ಪನವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕ ಎಸ್.ಎ.ಭಿಕ್ಷವರ್ತಿಮಠ್ ಹೇಳಿದರು.

ನಗರದ ಗುರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ನಡೆದ ಕನ್ನಡ ಸಾರಸ್ವತ ಲೋಕದ ಮಹಾನ್ ಚೇತನ, ಹಿರಿಯ ಸಾಹಿತಿಗಳಾದ ಎಸ್.ಎಲ್. ಬೈರಪ್ಪ, ಮಾವಳ್ಳಿ ಗಣೇಶ, ಚುಟುಕು ಸಾಹಿತ್ಯದ ರಾಜಶೇಖರ ಗುಂಡಗಟ್ಟಿ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಅರ್ಪಿಸುವ ಸಮಾರಂಭದಲ್ಲಿ ಮಾತನಾಡಿದರು.

ಎಸ್.ಎಲ್.ಬೈರಪ್ಪನವರು ಪರ್ವ, ವಂಶವೃಕ್ಷ, ದಾಟು, ಗೃಹಭಂಗ, ಸಾರ್ಥ, ಅನ್ವೇಷಣೆ, ತಬ್ಬಲಿ ನಿನಾದೆ ಮಗನೆ, ಧರ್ಮಶ್ರೀ, ಭಿತ್ತಿ, ನಾಯಿನೆರಳು, ನೆಲೆ ಸಾಕ್ಷಿ ಮುಂತಾದ ಕಾದಂಬರಿ ಮೂಲಕ ಜನಪ್ರಿಯತೆ ಗಳಿಸಿದ್ದರು, ಅವರ ಕೃತಿಗಳು ಭಾರತೀಯ ಮತ್ತು ವಿದೇಶಿ ಭಾಷೆಗಳಾಗಿ ಅನುವಾದಗೊಂಡಿವೆ ಎಂದರು.

ಮಹಿಳಾ ಘಟಕದ ಅಧ್ಯಕ್ಷೆ ಕೆ.ಟಿ.ಗೀತಾ ಕೊಂಡಜ್ಜಿ, ಮಾಜಿ ದೂಡ ಸದಸ್ಯ ಎಚ್‌ ನಿಜಗುಣ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ಟಪ್ಪ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಿ‌.ಎಂ. ಮಂಜುನಾಥಯ್ಯ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿಗಳಾದ ಬಿ.ಬಿ. ರೇವಣನಾಯ್ಕ್, ಎಂ. ಚಿದಾನಂದ ಕಂಚಿಕೇರಿ, ಶಿಕ್ಷಕ ವಿ.ಬಿ. ಕೊಟ್ರೇಶಪ್ಪ, ವಿಜಯಕುಮಾರ್ ಓಲೇಕಾರ, ಪರಮೇಶ್ವರಪ್ಪ ಕತ್ತಿಗೆ, ಸುಬ್ರಹ್ಮಣ್ಯ ನಾಡಿಗೇರ, ಜಿಗಳಿ ಪ್ರಕಾಶ್, ಯಕ್ಕೆಗೊಂದಿ ರುದ್ರೇಗೌಡ, ಉಮೇಶ್, ಶ್ವೇತಾ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ