ಕಾರಟಗಿ: ಪಟ್ಟಣದಲ್ಲಿ ಗ್ರಾಮದೇವತೆ ದ್ಯಾವಮ್ಮದೇವಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಇಲ್ಲಿನ ಭಜಂತ್ರಿ ಸಮಾಜದಿಂದ ಸಂಗ್ರಹಿಸಲಾದ ₹೧.೨೮ ಲಕ್ಷ ವಂತಿಗೆಯನ್ನು ಯೋಜನೆಯ ಉಸ್ತುವಾರಿ, ಮಾಜಿ ಸಚಿವ ನಾಗಪ್ಪ ಸಾಲೋಣಿ ಅವರಿಗೆ ಸಮಾಜದ ಮುಖ್ಯಸ್ಥರು ಹಸ್ತಾಂತರಿಸಿದರು.
ಇಲ್ಲಿನ ಕೋಟೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣದ ಸ್ಥಳದಲ್ಲಿ ಇತ್ತೀಚೆಗೆ ಭಜಂತ್ರಿ ಸಮಾಜದವರು ಸೇರಿ ತಮ್ಮ ಸಮಾಜದಿಂದ ಸಂಗ್ರಹಿಸಿದ ದೇಣಿಗೆ ಹಣ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವಂತೆ ಸಲ್ಲಿಸಿದರು.ಹಣ ಸ್ವೀಕರಿಸಿದ ನಿಯೋಜಿತ ಯೋಜನೆಯ ಉಸ್ತುವಾರಿ ಮಾಜಿ ಸಚಿವ ನಾಗಪ್ಪ ಸಾಲೋಣಿ ಮಾತನಾಡಿ, ಪಟ್ಟಣದ ಸರ್ವ ಸಮಾಜಗಳ ಸಹಾಯ, ಸಹಕಾರದಿಂದ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸುಮಾರು ₹೪ ಕೋಟಿ ವೆಚ್ಚದಲ್ಲಿ ದೇವಸ್ಥಾನ ಪುನರ್ ನಿರ್ಮಾಣ ಕಾರ್ಯವಾಗಲಿದೆ. ಪ್ರಾಥಮಿಕ ಹಂತ ಕೆಲಸ ತಯಾರಿ ನಡೆದಿದ್ದು, ಸುಮಾರು ೨ ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಕಾಲಮಿತಿ ಇಟ್ಟುಕೊಳ್ಳಲಾಗಿದೆ. ಪಟ್ಟಣದ ಮಧ್ಯಭಾಗದಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. ಈಗಾಗಲೇ ಗ್ರಾಮದೇವತೆ ದೇವಸ್ಥಾನ ಕಾರ್ಯಚಟುವಟಿಕೆ ಪ್ರಾರಂಭಕ್ಕೆ ಟ್ರಸ್ಟ್ ಸಹ ರಚಿಸಲಾಗಿದೆ ಎಂದು ನಾಗಪ್ಪ ಸಾಲೋಣಿ ಹೇಳಿದರು.
ಇದಕ್ಕೂ ಮುಂಚೆ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿದರು.ಈ ವೇಳೆ ಉದ್ಯಮಿ ಪಿ. ಗೋವಿಂದರಾಜ್ ಶ್ರೇಷ್ಠಿ, ಸಣ್ಣ ವೀರೇಶಪ್ಪ ಚಿನಿವಾಲ್, ನ್ಯಾಯವಾದಿ ಶಿವರೆಡ್ಡಿ ನಾಯಕ ಮತ್ತು ಭಜಂತ್ರಿ ಸಮಾಜದ ಅಧ್ಯಕ್ಷ ನಾಗರಾಜ ಭಜಂತ್ರಿ, ಗೌರವಾಧ್ಯಕ್ಷ ಲಕ್ಷ್ಮಣ ಭಜಂತ್ರಿ, ಉಪಾಧ್ಯಕ್ಷ ಹುಲ್ಲೇಶ್ ಬೇವುರು, ಮರಿಯಪ್ಪ ಮೆದಿಕಿನಾಳ, ದುರಗೇಶ್ ಚಿಟ್ಟಿ, ವಿಜಯಕುಮಾರ್, ಯಲ್ಲಪ್ಪ ದುರಗಪ್ಪ, ರವಿಕುಮಾರ ಉಳೆನೂರು, ದೊಡ್ಡವೀರಣ್ಣ, ಹನುಮಂತಪ್ಪ ಚನ್ನಳ್ಳಿ, ಶೇಖರಪ್ಪ ಗಣೇಕಲ್, ನಾಗಪ್ಪ, ದಾನಪ್ಪ, ಚಿರಂಜೀವಿ, ಹುಚ್ಚಪ್ಪ, ನರಸಪ್ಪ ಚೀಟ್ಟಿ, ಹನುಮೇಶ, ಮೌನೇಶ್, ಅರ್ಚಕ ವೀರಭದ್ರಪ್ಪ ಬಡಿಗೇರ್, ಸೂಗುರೇಶ್ವರ ವಿಶ್ವಕರ್ಮ ಮತ್ತು ತಿಪ್ಪಣ್ಣ ಮೂಲಿಮನಿ ಇದ್ದರು.