ಭಕ್ತ ಕನಕದಾಸರು ಸರ್ವ ಕಾಲಕ್ಕೂ ಶ್ರೇಷ್ಠರು: ಟಿ.ಎಸ್.ಅನೂಪ್

KannadaprabhaNewsNetwork |  
Published : Nov 23, 2024, 12:32 AM IST
ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜದ ಆಂಕು, ಡೊಂಕುಗಳನ್ನು ತಿದ್ದಿದ ಮಹಾಸಂತರು ಶ್ರೀ ಭಕ್ತ ಕನಕದಾರು, ಸರ್ವಕಾಲಕ್ಕೂ ಶ್ರೇಷ್ಠರು ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಟಿ. ಎಸ್. ಅನೂಪ್ ಹೇಳಿದರು.

- ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ: ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜದ ಆಂಕು, ಡೊಂಕುಗಳನ್ನು ತಿದ್ದಿದ ಮಹಾಸಂತರು ಶ್ರೀ ಭಕ್ತ ಕನಕದಾರು, ಸರ್ವಕಾಲಕ್ಕೂ ಶ್ರೇಷ್ಠರು ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಟಿ. ಎಸ್. ಅನೂಪ್ ಹೇಳಿದರು.

ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಶಾಲಾ ಆವರಣದಲ್ಲಿ 537ನೇ ಶ್ರೀ ಭಕ್ತ ಕನಕದಾಸರ ಜಯಂತಿಯಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು. ದಾಸ ಶ್ರೇಷ್ಠ ಕನಕದಾಸರು ದಾಸ ಸಾಹಿತ್ಯವನ್ನು ಅತ್ಯಂತ ಶ್ರೀಮಂತ ಗೊಳಿಸಿದ ಯುಗಪುರುಷರು. ಕನ್ನಡ ನಾಡು ಕಂಡ ಶ್ರೇಷ್ಠರಲ್ಲಿ ಒಬ್ಬರು, ಅಂದಿನ ಕಾಲದಲ್ಲಿದ್ದ ಅಸಮಾನತೆ ವಿರುದ್ಧ ಬಂಡೆದ್ದ ಹರಿಭಕ್ತ ಕನಕದಾಸರು ಎಂದು ತಿಳಿಸಿ ಭಕ್ತ ಕನಕದಾಸರು ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಜನೆಗಳಲ್ಲಿ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಂದೇಶಾತ್ಮ ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರು ಶ್ರೀ ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ರೀತಿ ನಿಜಕ್ಕೂಅನನ್ಯ. ಜಾತ್ಯಾತೀತತೆ ಪ್ರತಿಬಿಂಬಿಸಿದ ಮಹಾನ್ ದಾಸ ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಮಾತನಾಡಿ ಕೀರ್ತನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ರಚಿಸಿ ಎಲ್ಲಾ ಕಾಲಕ್ಕೂ ಸಲ್ಲುವಂತೆ ಮಾಡಿದ್ದಾರೆ. ಜಾತಿಗಳ ಸಂಕೋಲೆಗಳನ್ನು ಕಿತ್ತು ಎಲ್ಲರೂ ಸಮಾನರೇ ಎಂದು ಸಾರಿದ ಚಿಂತನೆಗಳು ಮನುಕುಲಕ್ಕೆ ಮಾರ್ಗದರ್ಶನ. ಇವರ ನಳಚರಿತ್ರೆ, ಹರಿಭಕ್ತಸಾರ, ನೃಸಿಂಹಾವತಾರ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಸೇರಿದಂತೆ ಅನೇಕ ಕೃತಿ ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಸಂಸ್ಥೆ ಆಡಳಿತ ಮಂಡಳಿ ಸದಸ್ಯರು, ಪೋಷಕರು,ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.22ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ವತಿಯಿಂದ ನಡೆದ ಶ್ರೀ ಭಕ್ತ ಕನಕದಾಸರ ಜಯಂತಿಯಲ್ಲಿ ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಟಿ.ಎಸ್.ಅನೂಪ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!