ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಚುನಾವಣಾ ಅಕ್ರಮದ ಬಗ್ಗೆ ತಹಸೀಲ್ದಾರ್‌ಗೆ ದೂರು

KannadaprabhaNewsNetwork |  
Published : Dec 17, 2024, 12:47 AM IST
ಸುದ್ದಿ ಚಿತ್ರ ೧ ಚುನಾವಣೆಯಲ್ಲಿ ಸೋತ ಚಿದಾನಂದ ಮೂರ್ತಿ  ಅವರು ತಹಶೀಲ್ದಾರ್ ಸ್ವಾಮಿಗೆ ಸೋಮವಾರ ದೂರು ನೀಡಿದರು | Kannada Prabha

ಸಾರಾಂಶ

ತಾಲೂಕು ಕಚೇರಿಯಲ್ಲಿ ಭಕ್ತರಹಳ್ಳಿ ಗ್ರಾಮದ ಚಿದಾನಂದ ಮೂರ್ತಿ ಅವರು ಕೆಲವು ಮತದಾರರು ಅಕ್ರಮವಾಗಿ ಮತದಾನ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಿ ಮರು ಚುನಾವಣೆಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಪತ್ರಗಳನ್ನು ಹೊರತಂದು ಅಕ್ರಮವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಸೋಮವಾರ ಚುನಾವಣಾ ಅಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಪರಾಜಿತ ಅಭ್ಯರ್ಥಿ ಚಿದಾನಂದ ಮೂರ್ತಿ ದೂರು ನೀಡಿದರು.

ನಗರದ ತಾಲೂಕು ಕಚೇರಿಯಲ್ಲಿ ಭಕ್ತರಹಳ್ಳಿ ಗ್ರಾಮದ ಚಿದಾನಂದ ಮೂರ್ತಿ ಅವರು ಕೆಲವು ಮತದಾರರು ಅಕ್ರಮವಾಗಿ ಮತದಾನ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಿ ಮರು ಚುನಾವಣೆಗೆ ಅವಕಾಶ ಮಾಡಿಕೊಡಿ ಎಂದು ಸೋತ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಮನವಿ ಸಲ್ಲಿಸಿದರು.ನಂತರ ತಹಸೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಚುನಾವಣೆಯಲ್ಲಿ ಅಕ್ರಮ ಆಗಿದೆ ಎಂದು ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಈಗಾಗಲೇ ಚುನಾವಣೆ ನಡೆದು ಎಣಿಕೆಯಾಗಿ ಅಧಿಕ ಮತಗಳು ಗಳಿಸಿರುವ ವ್ಯಕ್ತಿಯನ್ನು ಚುನಾವಣಾ ಅಧಿಕಾರಿ ಘೋಷಣೆ ಮಾಡಿದ್ದಾರೆ. ಗ್ರಾಮಸ್ಥರು ನನಗೂ ಹಾಗೂ ಚುನಾವಣಾ ಅಧಿಕಾರಿಗೂ ಲಿಖಿತವಾಗಿ ದೂರು ನೀಡಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಮೂರು ಮತ ವ್ಯತ್ಯಾಸ ಆಗಿದಿಯೋ, ಆ ಮತಗಳು ಯಾರೋ ಅಕ್ರಮ ಮಾಡಿದ್ದಾರೆ. ಅವುಗಳು ಇದ್ದಿದ್ದರೆ ನಾನು ಗೆಲ್ಲುತ್ತಿದ್ದೆ ಹಾಗೂ 18 ಮಾದರಿ ಮತಪತ್ರಗಳನ್ನು ಹೆಚ್ಚುವರಿಯಾಗಿ ಹಾಕಿದ್ದಾರೆ. ಅವುಗಳನ್ನು ಯಾರು ಹಾಕಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ. ಮುನೇಗೌಡ, ಕೋಟೆ ಚನ್ನೇಗೌಡ, ನಂಜುಂಡ ಆರಾಧ್ಯ ಸ್ವಾಮಿ, ಲಕ್ಷ್ಮಿನಾರಾಯಣ ಸಿಲ್ಕ್, ಹಾಲೇರಿ ಮಧುಗೌಡ, ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್, ಪ್ರತೀಶ್, ಮುನಿಶಾಮಿ, ಬಾಬು ಹಾಗೂ ಇತರರು ಹಾಜರಿದ್ದರು.ಸುದ್ದಿ ಚಿತ್ರ ೧

ಚುನಾವಣೆಯಲ್ಲಿ ಸೋತ ಚಿದಾನಂದ ಮೂರ್ತಿ ಅವರು ತಹಸೀಲ್ದಾರ್ ಸ್ವಾಮಿಗೆ ಸೋಮವಾರ ದೂರು ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ