ಭಾನುವಳ್ಳಿ ರೈತರ ₹4.12 ಕೋಟಿ ಬಾಕಿ: ಪ್ರತಿಭಟನೆ

KannadaprabhaNewsNetwork |  
Published : Oct 07, 2026, 01:45 AM IST
6ಕೆಡಿವಿಜಿ3-ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಹರಿಹರ ತಾ. ಭಾನುವಳ್ಳಿ ಗ್ರಾಮದ ರೈತರ 4.12 ಕೋಟಿ ರು.ಗಳನ್ನು ವರ್ತಕನಿಂದ ಕೊಡಿಸುವಂತೆ ರೈತ ಸಂಘ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ಮನವಿ ಅರ್ಪಿಸಿದರು. ..................6ಕೆಡಿವಿಜಿ4-ದಾವಣಗೆರೆ ಡಿಸಿ ಕಚೇರಿ ಬಳಿ ಹರಿಹರ ತಾ. ಭಾನುವಳ್ಳಿ ಗ್ರಾಮದ ರೈತರು ತಮಗೆ ಮಲೆಬೆನ್ನೂರಿನ ವರ್ತಕನಿಂದ ಬರಬೇಕಾದ 4.12 ಕೋಟಿ ರು.ಗಳನ್ನು ಕೊಡಿಸುವಂತೆ ರೈತ ಸಂಘ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಹರಿಹರ ತಾಲೂಕು ಭಾನುವಳ್ಳಿ ಗ್ರಾಮದ 167 ರೈತರಿಂದ ಬತ್ತ ಖರೀದಿಸಿ, 10 ತಿಂಗಳಾದರೂ ₹4.12 ಕೋಟಿ ಬಾಕಿ ಹಣವನ್ನು ಖರೀದಿದಾರ ಇನ್ನೂ ನೀಡಿಲ್ಲ. ಆದ್ದರಿಂದ ಶೀಘ್ರ ಅಷ್ಟೂ ಹಣವನ್ನು ರೈತರಿಗೆ ಕೊಡಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಆಮ್ ಆದ್ಮಿ ಪಕ್ಷದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

- ಭತ್ತ ಮಾರಿದ 167 ರೈತರಿಗೆ ಹಣ ನೀಡದ ಮಲೇಬೆನ್ನೂರು ಗ್ರಾಮದ ಧನಲಕ್ಷ್ಮೀ ಟ್ರೇಡರ್ಸ್ ಮಾಲೀಕನ ವಿರುದ್ಧ ಆಕ್ರೋಶ

- ರೈತ ಸಂಘ, ಹಸಿರು ಸೇನೆ ಹೋರಾಟಕ್ಕೆ ಎಎಪಿ ಸಾಥ್‌ । ಡಿಸಿ ಎಸ್‌ಪಿ ಕ್ರಮ ಜರುಗಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ತಾಲೂಕು ಭಾನುವಳ್ಳಿ ಗ್ರಾಮದ 167 ರೈತರಿಂದ ಬತ್ತ ಖರೀದಿಸಿ, 10 ತಿಂಗಳಾದರೂ ₹4.12 ಕೋಟಿ ಬಾಕಿ ಹಣವನ್ನು ಖರೀದಿದಾರ ಇನ್ನೂ ನೀಡಿಲ್ಲ. ಆದ್ದರಿಂದ ಶೀಘ್ರ ಅಷ್ಟೂ ಹಣವನ್ನು ರೈತರಿಗೆ ಕೊಡಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಆಮ್ ಆದ್ಮಿ ಪಕ್ಷದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಬಳಿ ಪ್ರತಿಭಟನೆ ನಡೆಸಿದ ಮುಖಂಡರು, ಬತ್ತ ಖರೀದಿಸಿದ ವ್ಯಕ್ತಿಯಿಂದ ಶೀಘ್ರ ಹಣ ಕೊಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.

ಸಂಘದ ಹಾವೇರಿ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ತಿ.ಹುಚ್ಚಣ್ಣನವರ ಮಾತನಾಡಿ, ಮಲೆಬೆನ್ನೂರು ಗ್ರಾಮದ ಧನಲಕ್ಷ್ಮೀ ಟ್ರೇಡರ್ಸ್ ಮಾಲೀಕ ಸಿ.ಬಿ.ರಮೇಶ ಎಂಬಾತ ಭಾನುವಳ್ಳಿಯ 167 ರೈತರಿಂದ ಬತ್ತ ಖರೀದಿಸಿದ್ದರು. ಆದರೆ, ಈ ವ್ಯಕ್ತಿ 10 ತಿಂಗಳಾದರೂ ರೈತರಿಗೆ ಕೊಡಬೇಕಾದ ₹4.12 ಕೋಟಿ ಬಾಕಿ ಕೊಡದೇ ಸತಾಯಿಸುತ್ತಿದ್ದಾರೆ. ಮಳೆ, ಬೆಳೆ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ರೈತರಿಗೆ ತೊಂದರೆ ನೀಡುತ್ತಿರುವ ರಮೇಶ್‌ ಅವರಿಂದ ತಕ್ಷಣ ಹಣ ಕೊಡಿಸಬೇಕು ಎಂದು ಮನವಿ ಮಾಡಿದರು.

ಬತ್ತ ಮಾರಿದ ಹಣ ರೈತರ ಕೈ ಸೇರದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಹಿನ್ನೆಲೆ 167 ರೈತರೂ ಬಾಕಿ ಹಣ ಬರದ ಹಿನ್ನೆಲೆ ದಯಾಮರಣಕ್ಕೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡುತ್ತಿದ್ದಾರೆ. ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೈತರಿಗೆ ನೆರವಾಗುತ್ತಾರೆ, ಬಾಕಿ ಹಣ ವರ್ತಕನಿಂದ ಕೊಡಿಸುತ್ತಾರೆಂಬ ವಿಶ್ವಾಸ- ನಂಬಿಕೆಯಿಂದ ನಿಮಗೆ ಮನವಿ ಮಾಡುತ್ತಿದ್ದೇವೆ ಎಂದರು.

ಕೈಗಡ, ಬಡ್ಡಿಗೆ ಸಾಲ ತಂದು, ಬೆಳೆ ಬೆಳೆದಿದ್ದ ರೈತರ ಪರಿಸ್ಥಿತಿ ಹೇಳತೀರವಾಗಿದೆ. ಸಾಲ ಕೊಟ್ಟವರು, ಬೀಜ, ಗೊಬ್ಬರ ಕೊಟ್ಟವರಿಗೆ ಹಣ ಮರಳಿಸಲಾಗದೇ ರೈತರು ತೀವ್ರ ತೊಂದರೆಗೆ ಈಡಾಗಿದ್ದಾರೆ. ಧನಲಕ್ಷ್ಮೀ ಟ್ರೇಡರ್ಸ್ ಮಾಲೀಕ ಸಿ.ಬಿ.ರಮೇಶ ಅವರನ್ನು ಡಿಸಿ, ಎಸ್ಪಿ ಕರೆಸಿಕೊಂಡು, ರೈತರಿಗೆ ಬರಬೇಕಾದ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಅನೇಕ ರೈತ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮಕ್ಕಳ ಶಾಲಾ-ಕಾಲೇಜು ಶುಲ್ಕ ಕಟ್ಟಲಾಗದೇ, ಕುಟುಂಬ ಸದಸ್ಯರ ಆಸ್ಪತ್ರೆ ಖರ್ಚು, ವೆಚ್ಚ ಭರಿಸಲು ಪರದಾಡುವಂತಾಗಿದೆ. ಭಾನುವಳ್ಳಿ ಗ್ರಾಮದ 167 ರೈತರ ಸಂಕಷ್ಟ, ಸಮಸ್ಯೆಗಳನ್ನು ಅರಿತು, ಆದ್ಯತೆ ಮೇಲೆ ಸಿ.ಬಿ.ರಮೇಶ್‌ ಕಡೆಯಿಂದ ರೈತರಿಗೆ ಬರಬೇಕಾದ ಹಣ ಕೊಡಿಸಬೇಕು. ಆ ಮೂಲಕ ನೊಂದ ರೈತರಿಗೆ ನ್ಯಾಯ ಕೊಡಿಸುವಂತೆ ಒಕ್ಕೊರಲಿನಿಂದ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.

ರೈತಪರ ಹೋರಾಟ ಬೆಂಬಲಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಶಿವಕುಮಾರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಕೆ. ಆದಿಲ್ ಖಾನ್, ಶಿಡ್ಲಪ್ಪ ಸುರೇಶ ಬೆಂಬಲಿಸಿ, ಹೋರಾಟಕ್ಕೆ ಕೈ ಜೋಡಿಸಿದ್ದರು. ರೈತ ಮುಖಂಡರಾದ ರೇವಣಸಿದ್ದಪ್ಪ, ಪಾಲಾಕ್ಷಪ್ಪ, ವೀರಭದ್ರಪ್ಪ, ಮಂಜುನಾಥ, ಚಂದ್ರಪ್ಪ ಭಾನುವಳ್ಳಿ, ಬೀರಪ್ಪ, ಕುಬೇಂದ್ರಪ್ಪ, ರವಿ, ಬಿ.ವಿ.ಪ್ರವೀಣ, ಹನುಮಂತಪ್ಪ ಕಬ್ಬಾರ, ಬಸವರಾಜ ಮೇಗಳಗೇರಿ, ಚಂದ್ರಪ್ಪ ವಿಠಲಾಪಿ, ಎಚ್.ಪಿ.ಮಂಜುನಾಥ, ರೇವಣಸಿದ್ದಪ್ಪ ಅಣಬಕ್ಕ, ಚಂದ್ರಪ್ಪ ಕುಂದುಪರ, ಬೀರಪ್ಪ ಕುಂಬಳೂರು, ಎಚ್.ಗೋವಿಂದರಾಜ, ರವಿ ಪವಾಡಿ, ಕುಬೇರಪ್ಪ ಪವಾಡಿ, ಡಿ.ಕೆ.ಪಾಲಾಕ್ಷಿ, ಚಂದ್ರಪ್ಪ ಭಾನುವಳ್ಳಿ, ಚಂದ್ರಪ್ಪ ವಿಠಲಪ್ಪ, ರಾಕೇಶ ಕೊತ್ತಂಬರಿ, ಎನ್.ಜಿ.ನವೀನ, ಡಿ.ಜಿ.ಮಂಜುನಾಥ, ದಿಳ್ಯಪ್ಪ, ವಿ.ಪಿ.ಪ್ರವೀಣ ಇತರರು ಇದ್ದರು.

- - -

-6ಕೆಡಿವಿಜಿ3, 4.:

ಹರಿಹರ ತಾಲೂಕಿನ ಭಾನುವಳ್ಳಿ ರೈತರಿಗೆ ಬತ್ತದ ವರ್ತಕ ರಮೇಶ್‌ ಎಂಬವರಿಂದ ಬಾಕಿ ಬರಬೇಕಾದ ₹4.12 ಕೋಟಿಯನ್ನು ಶೀಘ್ರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರು ದಾವಣಗೆರೆಯಲ್ಲಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ