ವಿಕಾಸಶೀಲ ಮತ್ತು ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಸಮುದಾಯ ಅಭಿವೃದ್ಧಿ ಸಾಮಾಜಿಕ ಸಾಮರಸ್ಯ, ಕ್ರೀಡೆ, ಫಿಟ್ನೆಸ್ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಯುವಜನರನ್ನು ಸಬಲೀಕರಣಗೊಳಿಸಿ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಪ್ರತಿ ಗ್ರಾಪಂ ಮತ್ತು ನಗರ ವಾರ್ಡ್ ಗಳಲ್ಲಿ ಸಶಕ್ತ ಯುವ ಜನತೆಯನ್ನೊಳಗೊಂಡ ಬಲಿಷ್ಠ ಸಮುದಾಯಗಳನ್ನು ಒಂದುಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಅನುಷ್ಠಾನಗೊಳಿಸಬೇಕಾಗಿದೆ.
-ಪ್ರತೀ ನಗರಸಭೆ, ಗ್ರಾಪಂ, ಪ.ಪಂ ವ್ಯಾಪ್ತಿಯಲ್ಲಿ ಅನುಷ್ಠಾನ
------
ಕನ್ನಡ್ರಭ ವಾರ್ತೆ ರಾಯಚೂರು
ವಿಕಾಸಶೀಲ ಮತ್ತು ಸೌಹಾರ್ದಶೀಲ ಕರ್ನಾಟಕ ನಿರ್ಮಾಣಕ್ಕಾಗಿ ಸಮುದಾಯ ಅಭಿವೃದ್ಧಿ ಸಾಮಾಜಿಕ ಸಾಮರಸ್ಯ, ಕ್ರೀಡೆ, ಫಿಟ್ನೆಸ್ ಮತ್ತು ಕೌಶಲ್ಯಾಭಿವೃದ್ಧಿಯ ಮೂಲಕ ಯುವಜನರನ್ನು ಸಬಲೀಕರಣಗೊಳಿಸಿ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಪ್ರತಿ ಗ್ರಾಪಂ ಮತ್ತು ನಗರ ವಾರ್ಡ್ ಗಳಲ್ಲಿ ಸಶಕ್ತ ಯುವ ಜನತೆಯನ್ನೊಳಗೊಂಡ ಬಲಿಷ್ಠ ಸಮುದಾಯಗಳನ್ನು ಒಂದುಗೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘಗಳನ್ನು ಅನುಷ್ಠಾನಗೊಳಿಸಬೇಕಾಗಿದೆ.
ಪ್ರತಿ ಸಂಘಕ್ಕೆ ವಾರ್ಷಿಕವಾಗಿ ಒಟ್ಟು 10 ಲಕ್ಷ ರು. ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು. ಸಮಿತಿಯ ಅವಧಿ 2 ವರ್ಷಗಳಾಗಿದ್ದು, ಯಾವುದೇ ಸದಸ್ಯರು ಮುಂದಿನ ಅವಧಿಗೆ ಪುನರಾವರ್ತನೆಯಾಗಲು ಅವಕಾಶವಿರುವುದಿಲ್ಲ.
ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಸಂಘ, ಪ್ರತಿ ಪಪಂ ವ್ಯಾಪ್ತಿಯಲ್ಲಿ 4,000 ಜನಸಂಖ್ಯೆಗೆ ಒಂದು ಸಂಘ, ಪುರಸಭೆಯಲ್ಲಿ 6,000 ಜನಸಂಖ್ಯೆಗೆ ಒಂದು ಸಂಘ, ನಗರಸಭೆಯಲ್ಲಿ 8,000 ಜನಸಂಖ್ಯೆಗೆ ಒಂದು ಸಂಘ, ಮಹಾನಗರ ಪಾಲಿಕೆಯಲ್ಲಿ 10,000 ಜನಸಂಖ್ಯೆಗೆ ಒಂದು ಸಂಘವನ್ನು ಸ್ಥಾಪಿಸತಕ್ಕದ್ದು. 16 ವರ್ಷದಿಂದ 35 ವರ್ಷ ವಯೋಮಿತಿ ಒಳಗಿನವರು ಅರ್ಹರಾಗಿದ್ದು 35 ವರ್ಷ ನಂತರ ಸಂಘದ ಸದಸ್ಯತ್ವವು ಸ್ವಯಂ ರದ್ದಾಗುವುದು. ಸಂಘದ ನೋಂದಣಿಯನ್ನು ವೆಬ್ಸೈಟ್ ವಿಳಾಸ: bjys.karnataka.gov.in ನಲ್ಲಿ ನೊಂದಣಿ ಮಾಡಬಹುದು. ಮಾಹಿತಿಗೆ ಸಂಬಂಧಪಟ್ಟ ಗ್ರಾಪಂ, ಪಪಂ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಯವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.