ಭಾವೈಕ್ಯ ಬೆಳೆಸುವ ಭಾರತ ಸೇವಾದಳ: ಮಾಳಪ್ಪ ಬಾಬಾ ಪೈ

KannadaprabhaNewsNetwork |  
Published : Feb 08, 2024, 01:32 AM IST
ಫೋಟೋ : ೬ಕೆಎಂಟಿ_ಎಫ ಇಬಿ_ಕೆಪಿ1 : ಮಣಕಿ ಮೈದಾನದಲ್ಲಿ ಮಂಗಳವಾರ ಭಾರತ ಸೇವಾದಲದ ತಾಲೂಕು ಮಕ್ಕಳ ಸಮ್ಮೇಳನಕ್ಕೆ ಎಂ.ಬಿ.ಪೈ ಚಾಲನೆ ನೀಡಿದರು. ಯೋಗೀಶ ರಾಯ್ಕರ, ಜೆ.ಎಸ್.ನಾಯ್ಕ, ಎನ್.ಎನ್. ಪಟಗಾರ, ಸಂತೋಷ ನಾಯ್ಕ, ಬಿಇಒ ರಾಜೇಂದ್ರ ಭಟ್, ಎಸ್. ಬಿ. ನಾಯ್ಕ, ವಿನಾಯಕ ವೈದ್ಯ, ಪಾಂಡುರಂಗ ವಾಗ್ರೇಕರ, ರಾಘವ ಮುಕ್ರಿ, ನಾಗರಾಜ ಪಟಗಾರ, ಶೈಲಾ ನಾಯ್ಕ  ಇತರರು ಇದ್ದರು. | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಪರಿಶ್ರಮ ಸಲ್ಲಿಸಿ ಶತಮಾನೋತ್ಸವ ಕಂಡ ಭಾರತ ಸೇವಾದಳ ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ ಹಾಗೂ ಭಾವೈಕ್ಯತೆ ಬೆಳೆಸುವ ಕೆಲಸ ಮಾಡುತ್ತಿದೆ.

ಕುಮಟಾ:

ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಪರಿಶ್ರಮ ಸಲ್ಲಿಸಿ ಶತಮಾನೋತ್ಸವ ಕಂಡ ಭಾರತ ಸೇವಾದಳ ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ ಹಾಗೂ ಭಾವೈಕ್ಯತೆ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಸೇವಾದಳದ ಕೇಂದ್ರ ಸಮಿತಿ ಸದಸ್ಯ ಮಾಳಪ್ಪ ಬಾಬಾ ಪೈ ಹೇಳಿದರು.ಪಟ್ಟಣದ ಮಣಕಿ ಮಹಾತ್ಮ ಗಾಂಧಿ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತ ಸೇವಾದಳದ ತಾಲೂಕು ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಇಂಥ ಮೇಳ ಆಯೋಜಿಸಲಾಗುತ್ತಿದೆ. ಆದರೆ ಸರ್ಕಾರ ಸ್ಕೌಟ್ಸ್‌ ಹಾಗೂ ಗೈರ್ಡ್‌ಗಳಿಗೆ ನೀಡಿದಷ್ಟು ಅನುದಾನವನ್ನು ಭಾರತ ಸೇವಾದಳಕ್ಕೆ ನೀಡುತ್ತಿಲ್ಲ. ಹಾಗೆಯೇ ಜಿಲ್ಲಾ ಕಾರ್ಯಾಲಯಕ್ಕೆ ಸ್ವಂತ ನಿವೇಶನ ಮಂಜೂರಿ ನೀಡಬೇಕಿದೆ ಎಂದರು.ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದ ಸೇವಾದಳದ ಜಿಲ್ಲಾಧ್ಯಕ್ಷ ಯೋಗೀಶ ರಾಯ್ಕರ, ಸೇವಾದಳದ ಕಾರ್ಯಗಳಿಗೆ ಸರ್ಕಾರ ಹಾಗೂ ಇಲಾಖೆ ಸಹಕಾರ ಹೆಚ್ಚು ಬೇಕು. ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಜಿಲ್ಲಾ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಸ್ಥಳ ಮಂಜೂರಿಗೆ ಸಲ್ಲಿಸಿದ ಪ್ರಸ್ತಾವನೆಗೆ ಶೀಘ್ರ ಮಂಜೂರಿ ದೊರೆಯಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಸೇವಾದಳದ ರಾಜ್ಯ ಸಮಿತಿ ನಿವೃತ್ತ ದಳಪತಿ ಜೆ.ಎಸ್. ನಾಯ್ಕ, ಜಿಲ್ಲಾ ಸಮಿತಿ ಸದಸ್ಯ ಎನ್.ಎನ್. ಪಟಗಾರ, ತಾಲೂಕಾಧ್ಯಕ್ಷ ಸಂತೋಷ ನಾಯ್ಕ, ಬಿಇಒ ರಾಜೇಂದ್ರ ಭಟ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ನಾಯ್ಕ, ಅಕ್ಷರದಾಸೋಹ ಅಧಿಕಾರಿ ವಿನಾಯಕ ವೈದ್ಯ, ಪಾಂಡುರಂಗ ವಾಗ್ರೇಕರ, ರಾಘವ ಮುಕ್ರಿ, ನಾಗರಾಜ ಪಟಗಾರ, ಶೈಲಾ ನಾಯ್ಕ ಇದ್ದರು.ಸರ್ವಧರ್ಮ ಪ್ರಾರ್ಥನೆ ಮತ್ತು ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಮೇಶ ನಾಯ್ಕ ಸ್ವಾಗತಿಸಿದರು. ಎಂ.ಎಂ. ನಾಯ್ಕ ನಿರ್ವಹಿಸಿದರು. ಮಕ್ಕಳಿಂದ ಆಕರ್ಷಕ ಪಥಸಂಚಲನ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ