ಭರತನಾಟ್ಯ ಕಲೆಯು ಭಾರತೀಯ ಸಂಸ್ಕೃತಿಯ ಪ್ರತೀಕ

KannadaprabhaNewsNetwork |  
Published : Feb 27, 2024, 01:30 AM IST
ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಭರತ ನಾಟ್ಯ ಕಲಾವಿದರ ನಾಗಮಂಡಲ ಚಾರಿಟಿ ಶೋ ಕಾರ್ಯಕ್ರಮವನ್ನು  ಚಿತ್ತ ಪ್ರಕಾಶನಂದ ಸ್ವಾಮೀಜಿ ಉದ್ಘಾಟಿಸಿದರು | Kannada Prabha

ಸಾರಾಂಶ

ಬೆಳಗಾವಿ: ಭರತನಾಟ್ಯ ಕಲೆಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ನಾಟ್ಯ ಕಲೆಯಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ಹೀಗಾಗಿ, ನಮ್ಮ ಮಕ್ಕಳಿಗೆ ಭಾರತೀಯ ಪರಂಪರೆಗಳ ಕಲೆಗಳನ್ನು ಕಲಿಸಬೇಕಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಚಿತ್ತ ಪ್ರಕಾಶನಂದ್ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭರತನಾಟ್ಯ ಕಲೆಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ನಾಟ್ಯ ಕಲೆಯಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ಹೀಗಾಗಿ, ನಮ್ಮ ಮಕ್ಕಳಿಗೆ ಭಾರತೀಯ ಪರಂಪರೆಗಳ ಕಲೆಗಳನ್ನು ಕಲಿಸಬೇಕಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಚಿತ್ತ ಪ್ರಕಾಶನಂದ್ ಸ್ವಾಮೀಜಿ ಹೇಳಿದರು. ಇಲ್ಲಿನ ಕೆಎಲ್‌ಇ ಡಾ. ರಾಜಶೇಖರ ಸಭಾಂಗಣದಲ್ಲಿ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾದ ಪುಣ್ಯಾ ನೃತ್ಯ ಕಂಪನಿಯ ಬೆಂಗಳೂರವರ ಅಂತಾರಾಷ್ಟ್ರೀಯ ಭರತ ನಾಟ್ಯ ಕಲಾವಿದರ ನಾಗಮಂಡಲ ಚಾರಿಟಿ ಶೋ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಉತ್ತಮ ಆರೋಗ್ಯಕ್ಕೆ ಭರತನಾಟ್ಯ ಪೂರಕವಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ಭರತನಾಟ್ಯ ಎಂಬುದು ಕೇವಲ ಒಂದು ನೃತ್ಯ ಕಲೆಯಲ್ಲ. ಅದೊಂದು ದಿವ್ಯವಾದ ಸಮಗ್ರ ಅಭಿವ್ಯಕ್ತಿ. ಭರತನಾಟ್ಯ ಕಲೆಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ನಿರಂತರ ಸಮಾಜ ಸೇವೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ, ಮಕ್ಕಳಿಗಾಗಿ ಭರತನಾಟ್ಯದ ಅಂತಾರಾಷ್ಟ್ರೀಯ ಕಲಾವಿದರಾದಂತ ಆದಿತ್ಯ ಪಿವಿ, ಶೃತಿ ಗೋಪಾಲ ಮತ್ತು ಪಾರ್ಶ್ವನಾಥ ಉಪಾಧ್ಯಯರಿಂದ ಆಗಮಿಸಿ ಪ್ರದರ್ಶನ ನೀಡಿರುವುದು ನಮ್ಮೆಲ್ಲರ ಪುಣ್ಯ ಎಂದರು.

ಭರತ ನಾಟ್ಯ ಅಂತಾರಾಷ್ಟ್ರೀಯ ಕಲಾವಿದರಾದಂತ ಆದಿತ್ಯ ಪಿವಿ, ಶೃತಿ ಗೋಪಾಲ ಮತ್ತು ಪಾರ್ಶ್ವನಾಥ ಉಪಾಧ್ಯಯರಿಂದ ಅರ್ಷ್ ವಿದ್ಯಾಆಶ್ರಮದ ಮಕ್ಕಳ ಶಿಕ್ಷಣಕ್ಕಾಗಿ ಚಾರಿಟಿ ಶೋ ಏರ್ಪಡಿಸಲಾಗಿತ್ತು. ಪ್ರದರ್ಶನ ಬಳಿಕ ಕಲಾವಿದರಿಗೆ ಸನ್ಮಾನಿಸಲಾಯಿತು.

ಕ್ರಾಂತಿ ಮಹಿಳಾ ಮಂಡಳ , ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆ ಅವರು, ಅರ್ಷ್ ವಿದ್ಯಾ ಆಶ್ರಮದ ಮಕ್ಕಳನ್ನು ದತ್ತು ಪಡೆದು, ವಿದ್ಯಾ ಆಶ್ರಮಕ್ಕೆ ನೇರವಾದರು. ಕಾರ್ಯದರ್ಶಿ ರೇಣುಕಾ ಕಾಂಬಳೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಈ ವೇಳೆ ಸಂಸದೆ ಮಂಗಲ ಅಂಗಡಿ, ಅಭಿನವ ವೆಂಕಟೇಶ್ ಮಹಾರಾಜ್ ಸ್ವಾಮೀಜಿ, ಮಾತೆ ವಾಗ್ದೇವಿ, ಮಾತೆ ಕುಮುದಿನಿ, ಕೆಎಲ್‌ ಇ ವೈದ್ಯ ಡಾ. ಎಚ್‌.ಬಿ.ರಾಜಶೇಖರ್‌, ಡಾ.ಅರವಿಂದ್ ಕುಲಕರ್ಣಿ, ನ್ಯಾಯವಾದಿ ಎಂ.ಬಿ ಜಿರಲಿ, ಡಾ. ರಾಜೇಂದ್ರ ಮಠದ ಮೊದಲಾದವರು ಇದ್ದರು. ಅಧ್ಯಕ್ಷೆ ಮಂಗಲ ಮಠದ ಸ್ವಾಗತಿಸಿದರು. ಅಕ್ಷತಾ ಪಾಟೀಲ್ ಮತ್ತು ಅಶ್ವಿನಿ ನವಲೆ ಕಾರ್ಯಕ್ರಮ ನಿರೂಪಿಸಿದರು. ದೀಪ್ತಿ ಕಗ್ವಾಡ್ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...