ಮಕ್ಕಳಿಗೆ ಭಾರತೀ ಉತ್ಸವ ಉತ್ತಮ ವೇದಿಕೆ: ಮಧು ಮಾದೇಗೌಡ

KannadaprabhaNewsNetwork |  
Published : Sep 17, 2026, 01:45 AM IST
16ಕೆಎಂಎನ್ ಡಿ19 | Kannada Prabha

ಸಾರಾಂಶ

ಕಳೆದ ಒಂದೂವರೇ ದಶಕಗಳ ಹಿಂದೆ ಆರಂಭವಾದ ಭಾರತೀ ಉತ್ಸವ ವಿದ್ಯಾರ್ಥಿಗಳಿಗಷ್ಟೆ ಮನರಂಜನೆಯಾಗದೇ ಜನತೆಗೆ ಉತ್ತಮ ಮನರಂಜನೆ ನೀಡಿ ಜನಪ್ರಿಯಗೊಳ್ಳುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಕಾಲೇಜಿಗೆ ಆಗಮಿಸಿ ಸಾಂಸ್ಕೃತಿಕ ರಸದೌತಣ ಸವಿಯುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮೈಸೂರು ಪ್ರಾಂತ್ಯದಲ್ಲಿ ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮವು ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.

ಭಾರತೀ ವಿದ್ಯಾಸಂಸ್ಥೆಯಿಂದ ಭಾರತೀ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಉತ್ಸವದ ಸಮಾರೋಪದಲ್ಲಿ ಮಾತನಾಡಿ, ಕಳೆದ ಒಂದೂವರೇ ದಶಕಗಳ ಹಿಂದೆ ಆರಂಭವಾದ ಭಾರತೀ ಉತ್ಸವ ವಿದ್ಯಾರ್ಥಿಗಳಿಗಷ್ಟೆ ಮನರಂಜನೆಯಾಗದೇ ಜನತೆಗೆ ಉತ್ತಮ ಮನರಂಜನೆ ನೀಡಿ ಜನಪ್ರಿಯಗೊಳ್ಳುತ್ತಿದೆ ಎಂದರು.

ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಕಾಲೇಜಿಗೆ ಆಗಮಿಸಿ ಸಾಂಸ್ಕೃತಿಕ ರಸದೌತಣ ಸವಿಯುತ್ತಾರೆ ಎಂದರು.

ಈ ವೇಳೆ ಸಂಸ್ಥೆ ಮುಖ್ಯಕಾರ್ಯನಿರ್ವಾಣಾಧಿಕಾರಿ ಆಶಯ್ ಮಧು, ಭಾರತೀ ಉತ್ಸವದ ಪ್ರಧಾನ ಸಂಚಾಲಕರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ.ಎಸ್.ನಾಗರಾಜು, ಡಾ.ತಮೀಜ್‌ಮಣಿ, ಸಂಚಲಕ ಕೆ.ಸಿ.ಸುಂದ್ರೇಶ್, ಸಹ ಸಂಚಾಲಕ ಬಿ.ಕೆ. ಕೃಷ್ಣ, ಅರ್ಚನಾ ಸೇರಿದಂತೆ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳು ಮುಖ್ಯಸ್ಥರು ಉಪಸ್ಥಿತರಿದ್ದರು.

ಹುಚ್ಚೆದ್ದು ಕುಣಿದ ಯುವ ಮನಸ್ಸುಗಳು:

ಮೂರು ದಿನಗಳ ಭಾರತೀ ಉತ್ಸವ ಸಾಂಸ್ಕೃತಿಕ ಸಂಭ್ರಮದಲ್ಲಿ ಯುವ ಮನಸ್ಸುಗಳು ಹುಚ್ಚೆದ್ದು ಕುಣಿದರು. ನೂರಾರು ವಿದ್ಯಾರ್ಥಿ ಕಲಾವಿದರಿಗೆ ಭಾರತೀ ವಿದ್ಯಾ ಸಂಸ್ಥೆ ವೇದಿಕೆ ಕಲ್ಪಿಸಿ ಮನರಂಜನೆಯ ರಸದೌತಣ ನೀಡಿತು.

ಭಾರತೀ ಸ್ಕೂಲ್ ಅಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳು ಪುಟಾಣಿ ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ರಂಗಿತರಂಗ ಮತ್ತು ಕಾಂತಾರ ಚಿತ್ರದ ಭೂತಾರಾಧನೆ ಸೇರಿದಂತೆ ಹತ್ತಾರು ಸುಂದರ ವೈವಿಧ್ಯಮಯ ಹಾಡಿಗೆ ಭರತನಾಟ್ಯದ ಮೂಲಕ ಎಲ್ಲರನ್ನು ಮನರಂಜಿಸಿತು.

ಕರ್ನಾಟಕ ಜನಪದ ವೈವಿಧ್ಯತೆ ಮತ್ತು ಪರಂಪರೆ, ರಾಜ್ಯದ ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯ ಪ್ರಕಾರ, ಕನ್ನಡ ಸಿನಿಮಾಧಾರಿತ ಆಧುನಿಕ ನೃತ್ಯ ಪ್ರಕಾರಗಳು ಕರ್ನಾಟಕ ವೈಭವ ಸಾರುವಂತ ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿತ್ತು.ಸೆ.19 ರಂದು ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಸಭೆ: ಜಿ.ಈ.ರವಿಕುಮಾರ್

ಪಾಂಡವಪುರ:ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸೆ.19ರಂದು ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಈ.ರವಿಕುಮಾರ್ ತಿಳಿಸಿದರು.

ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿ, ಸಹಕಾರ ನಿಯಮದ ಪ್ರಕಾರ ಎಲ್ಲಾ ಸಹಕಾರ ಸಂಘಗಳ ಸರ್ವ ಸದಸ್ಯರ ಮಹಾಸಭೆಯನ್ನು ಸೆಪ್ಟಂಬರ್ ತಿಂಗಳ ಒಳಗಾಗಿ ಮುಕ್ತಾಯ ಮಾಡಬೇಕಾಗಿದೆ. ಅದಕ್ಕಾಗಿ ನಮ್ಮ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಕುಳಿತು ಚರ್ಚಿಸಿ ಸೆ.19ರಂದು ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಸದಸ್ಯರು ಸಭೆಗೆ ಹಾಜರಾಗಬೇಕು. ಜೊತೆಗೆ ಸಂಘದ ಅಭಿವೃದ್ಧಿಗೆ ಪೂರಕ ಸಲಹೆ ಸಹಕಾರ ನೀಡಬೇಕೆಂದು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಪುಟ್ಟಬಸವೇಗೌಡ, ಎಚ್.ಎನ್.ದಯಾನಂದ್, ಎಚ್.ಪಿ.ಶಿವಕುಮಾರ್, ಬಾಲರಾಜು, ಕಾರ್ಯದರ್ಶಿ ಎಚ್.ಎಸ್.ಪ್ರಕಾಶ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ವಿಶ್ವಕರ್ಮ ಮಹೋತ್ಸವ ಆಚರಣೆಗೆ ಸಿದ್ಧತೆ
ರೈಲ್ವೆ ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ ಆರೋಪ