ಕನ್ನಡಪ್ರಭ ವಾರ್ತೆ ಭಟ್ಕಳ
ವೆಂಕಟಾಪುರದ ಖಾಜಿಯ ಮೈದಾನದಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ಹಮ್ಮಿಕೊಂಡ ಭಟ್ಕಳ ಉತ್ಸವ-೨೫ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಕುಮಟಾ, ಕಾರವಾರ, ಶಿರಸಿ ಹಾಗೂ ಇತರ ಕಡೆ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಭಟ್ಕಳ ತಾಲೂಕಿನಲ್ಲಿ ಸಾಂಸ್ಕೃತಿಕ ಕಾಯಕ್ರಮಕ್ಕೆ ಹಿನ್ನಡೆಯಿದೆ ಎಂಬ ಅಪವಾದಕ್ಕೆ ಪೂರಕವಾಗಿ ಭಟ್ಕಳ ಉತ್ಸವವನ್ನು ಅದ್ಧೂರಿಯಾಗಿ ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಕ್ರಿಯಾಶೀಲ ಗೆಳೆಯರ ಸಂಘ ಹೆಚ್ಚಿಸಿದೆ. ಭಟ್ಕಳ ಇತಿಹಾಸದಲ್ಲಿ ಪ್ರಥಮವಾಗಿ ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಿ ಯಶಸ್ವಿಯಾಗಿದೆ. ಕಾರ್ಯಕ್ರಮ ನಡೆಸುವುದು ತುಂಬ ಕಷ್ಟಕರ ಕೆಲಸ. ಈ ಸಂಘವು ಸಾಂಸ್ಕೃತಿಕ ಪ್ರೋತ್ಸಾಹದ ಜೊತೆಗೆ ಕೊರೋನಾ ಸಮಯದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದೆ ಎಂದರು. ಪಶ್ವಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಉದ್ಯಮಿ ಕೇದಾರ ಕೊಲ್ಲೆ, ಶಿಕ್ಷಕ ಪ್ರಕಾಶ ಶಿರಾಲಿ, ಶೈಲೇಂದ್ರ ಜೈನ್, ಭಟ್ಕಳ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಕಾಂತ ನಾಯ್ಕ ಮಾತನಾಡಿದರು. ಉತ್ಸವ ಸಮಿತಿಯ ಸಹ ಸಂಚಾಲಕ ಮನಮೋಹನ ನಾಯ್ಕ ಸ್ವಾಗತಿಸಿದರು.ವಿಶ್ವಕರ್ಮ ಸಮಾಜದ ಅಧ್ಯಕ್ಷ ಗಜಾನನ ಆಚಾರ್ಯ, ಖಾರ್ವಿ ಸಮಾಜದ ಅಧ್ಯಕ್ಷ ಗೋವಿಂದ ಖಾರ್ವಿ ,ಸಂತ ರೋಹಿದಾಸ ಸಮಾಜದ ಮುಖಂಡರಾದ ಮೋಹನ ಶಿರಾಲಿಕರ, ಕ್ರಿಯಾಶೀಲ ಸಂಘದ ಕಾರ್ಯದರ್ಶಿ ಅರುಣ ನಾಯ್ಕ, ಭಟ್ಕಳದ ಉತ್ಸವದ ಮೇಳದ ಸಂಯೋಜಕ ಶ್ರೀಧರ ಮರವಂತೆ ಮುಂತಾದವರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಸಾಧಕರಾದ ನಾಗೆಂದ್ರ ಅಣ್ಣಪ್ಪ ನಾಯ್ಕ, ಬೆಳಕೆ(ಡಿಸ್ಕಸ್ ಥ್ರೋ) ದರ್ಶನ್ ನಾಯ್ಕ ಜಾಲಿ,(ಪೇಂಟಿಂಗ) ನಾಗಶ್ರೀ ನಾಯ್ಕ, ಭಟ್ಕಳ.(ಕರಾಟೆ) ರೂಪಾ ಖಾರ್ವಿ (ಉತ್ತಮ ಶಿಕ್ಷಕಿ) ಭವ್ಯ ದೇವಾಡಿಗ, ಕಾಯ್ಕಿಣಿ (ಎತ್ತರ ಜಿಗಿತ), ರಶ್ಮಿತ ದೇವಾಡಿಗ, ಮುರುಡೇಶ್ವರ,(ಎತ್ತರಜಿಗಿತ) ಅವರನ್ನು ಸನ್ಮಾನಿಸಲಾಯಿತು. ಶ್ರಿಕ್ಷಕ ಶ್ರೀಧರ ಶೇಟ್ ಹಾಗೂ ಪೂರ್ಣಿಮಾ ಕರ್ಕಿಕರ ನಿರೂಪಿಸಿದರು. ಪಾಂಡುರಂಗ ನಾಯ್ಕ ವಂದಿಸಿದರು.