ಕನ್ನಡಪ್ರಭ ವಾರ್ತೆ ಭಟ್ಕಳ
ಮಂಗಳೂರಿನ ಫಾದರ್ ಮುಲ್ಲಾರ್ ಇಂಡೋರ್ ಸ್ಟೇಡಿಯಂನಲ್ಲಿ ರಾಜ್ಯ ಮಟ್ಟದ ಖೇಲ್ ಇಂಡಿಯಾ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ತಾಲೂಕಿನ ಕಿಕ್ ಬಾಕ್ಸಿಂಗ್ ವಿದ್ಯಾರ್ಥಿನಿಯರು ಭಾಗವಹಿಸಿ ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಹಾಗೂ ಕಂಚಿನ ಪದಕ ಗಳಿಸಿ ಎರಡನೇ ರನ್ನರ್ ಅಪ್ ಟ್ರೋಫಿ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.7- 9 ವರ್ಷದ -18ಕೆಜಿ ವಿಭಾಗದಲ್ಲಿ ವೈಷ್ಣವಿ ಜಗದೀಶ ನಾಯ್ಕ ಚಿನ್ನದ ಪದಕ, 24 ಕೆಜಿಯಲ್ಲಿ ಜನನಿ ಭಾಸ್ಕರ ನಾಯ್ಕ ಬೆಳ್ಳಿಯ ಪದಕ, 33 ಕೆಜಿಯಲ್ಲಿ ಜನ್ಯಾ ಜಗದೀಶ ನಾಯ್ಕ ಬೆಳ್ಳಿಯ ಪದಕ, 10- 12 ವರ್ಷದ -42 ಕೆಜಿ ವಿಭಾಗದಲ್ಲಿ ಮನಾಲಿ ರಾಜು ನಾಯ್ಕ ಬೆಳ್ಳಿಯ ಪದಕ, 13-15 ವರ್ಷದ - 32 ಕೆಜಿ ವಿಭಾಗದಲ್ಲಿ ಅಂಕಿತಾ ನಾಗಪ್ಪ ನಾಯ್ಕ ಬೆಳ್ಳಿಯ ಪದಕ, 37ಕೆಜಿಯಲ್ಲಿ ಆಶಿತಾ ಉದಯ ನಾಯ್ಕ ಬೆಳ್ಳಿಯ ಪದಕ ಸಮೀಕ್ಷಾ ಗೊಂಡ ಕಂಚಿನ ಪದಕ ಪಡೆದರು.
46 ಕೆಜಿಯಲ್ಲಿ ಸೇಜಲ್ ದಾಮೋದರ್ ಶಾನಭಾಗ್ ಕಂಚಿನ ಪದಕ,16- 18 ವರ್ಷದ -45 ಕೆಜಿ ವಿಭಾಗದಲ್ಲಿ ಲಿಖಿತಾ ಶಂಕರ ನಾಯ್ಕ ಚಿನ್ನದ ಪದಕ, ಸಿಂಚನಾ ವಿ ಮೊಗೇರ ಕಂಚಿನ ಪದಕ, 19- 40 ವರ್ಷದ - 45ಕೆಜಿ ವಿಭಾಗದಲ್ಲಿ ಅಖಿಲಾ ನಾಯಕ್ ಕಂಚಿನ ಪದಕ ಗಳಿಸಿದ್ದಾರೆ. ಹತ್ತು ವರ್ಷ ಮೇಲ್ಪಟ್ಟ ಪದಕ ಗೆದ್ದ ವಿದ್ಯಾರ್ಥಿನಿಯರು ಬರುವ ಮಾರ್ಚ್ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಸೌತ್ ಜೋನ್ ಅಸ್ಮಿತಾ ಖೇಲೊ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಯ 350ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಉತ್ತರ ಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಈಶ್ವರ ಎನ್ ನಾಯ್ಕ ಮತ್ತು ಪ್ರಧಾನ ಕಾರ್ಯದರ್ಶಿ ನಾಗಶ್ರೀ ನಾಯ್ಕ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.