ಭಾವರಾಮಾಯಣ ರಾಮಾವತರಣ ಕೃತಿ ಲೋಕಾರ್ಪಣೆ

KannadaprabhaNewsNetwork |  
Published : Jun 30, 2024, 02:07 AM ISTUpdated : Jun 30, 2024, 11:49 AM IST
‘ಭಾವರಾಮಾಯಣ ರಾಮಾವತರಣ’ ಕೃತಿಯನ್ನು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹಾಗೂ ವಿವಿಧ ಕ್ಷೇತ್ರಗಳ ನೂರಾರು ಗಣ್ಯರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಸೇತುವೆ, ವಿಮಾನ ನಿಲ್ದಾಣ ಮುಂತಾದವುಗಳು ಕುಸಿದು ಬೀಳಲು ಆ ಯೋಜನೆಯ ಬಗ್ಗೆ ಶ್ರದ್ಧೆ ಇಲ್ಲದಿರುವುದು ಮತ್ತು ಲೋಕ ಕಲ್ಯಾಣದ ಬದಲು ಹಣದ ಹಿಂದೆ ಬಿದ್ದಿರುವುದೇ ಕಾರಣ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

  ಬೆಂಗಳೂರು :  ಸೇತುವೆ, ವಿಮಾನ ನಿಲ್ದಾಣ ಮುಂತಾದವುಗಳು ಕುಸಿದು ಬೀಳಲು ಆ ಯೋಜನೆಯ ಬಗ್ಗೆ ಶ್ರದ್ಧೆ ಇಲ್ಲದಿರುವುದು ಮತ್ತು ಲೋಕ ಕಲ್ಯಾಣದ ಬದಲು ಹಣದ ಹಿಂದೆ ಬಿದ್ದಿರುವುದೇ ಕಾರಣ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಭಾನುವಾರ ನಗರದ ಪಿಇಎಸ್ ಕಾಲೇಜಿನ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳ ನೂರಾರು ಗಣ್ಯರೊಂದಿಗೆ ಸ್ವರಚಿತ ‘ಭಾವರಾಮಾಯಣ ರಾಮಾವತರಣ’ ಕೃತಿ ಬಿಡುಗಡೆಗೊಳಿಸಿ ಸ್ವಾಮೀಜಿ ಮಾತನಾಡಿದರು.

ರಾಮಾಯಣದ ಅಯೋಧ್ಯೆಯನ್ನು ಸುಂದರವಾಗಿ ನಿರ್ಮಿಸಲಾಗಿತ್ತು. ಏಕೆಂದರೆ, ನಿರ್ಮಾತೃಗಳು ಅದನ್ನು ಶ್ರದ್ಧೆಯಿಂದ ಹೃದಯದಲ್ಲಿ ನಿರ್ಮಿಸಿ ನಂತರ ಕೃತಿಗೆ ಇಳಿಸಿದ್ದರು. ಆ ಪರಿಕಲ್ಪನೆ ಎಂದೆಂದಿಗೂ ಪ್ರಸ್ತುತವಾಗಿದೆ. ಅದರಿಂದ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯಲು ಸಾಧ್ಯ. ಆದರೆ, ಬರೀ ಹಣದ ಕಡೆ ಹೋದರೆ ಏನಾಗುತ್ತದೆ ಎಂಬುದು ಇತ್ತೀಚೆಗೆ ಬಿದ್ದಿರುವ ಸೇತುವೆಗಳು, ವಿಮಾನ ನಿಲ್ದಾಣ ಉದಾಹರಣೆ ಎಂದು ಸ್ವಾಮೀಜಿ ನುಡಿದರು.

ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮಾತನಾಡಿ, ಇದೊಂದು ಅತ್ಯಂತ ಸರಳವಾದ, ನೇರವಾಗಿ ಜನರ ಹೃದಯ ತಲುಪುವ ದೈವೀಶಕ್ತಿ ಪುಸ್ತಕವಾಗಿದೆ ಎಂದರು.

ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ ಮಾತನಾಡಿ, ರಾಮಾಯಣವು ಯಾವುದೇ ಒಂದು ಜನಾಂಗವನ್ನು ಶೋಷಣೆಗೆ ಒಳಪಡಿಸುವ, ಜಾತಿ ಪ್ರಧಾನ್ಯತೆ ತೋರಿಸುವುದಿಲ್ಲ. ಸಮುದಾಯದ ಉತ್ತಮ ವ್ಯಕ್ತಿಗಳ ವ್ಯಕ್ತಿತ್ವ ಅನಾವರಣಗೊಳಿಸುತ್ತದೆ. ರಾಮನ ಆದರ್ಶ ಗುಣಗಳನ್ನು ಜಗತ್ತಿಗೆ ಸಾರುವ ಉತ್ತಮ ಅಂಶಗಳ ಅದ್ಭುತ ಕೃತಿಯಾಗಿದೆ ಎಂದರು.

ಇತ್ತೀಚೆಗೆ ನಮ್ಮಲ್ಲಿ ದೇಶಪ್ರೇಮ ಉಳಿಯುತ್ತಿಲ್ಲ. ಹೆತ್ತ ತಾಯಿಯನ್ನು ಮರೆಯುತ್ತಿದ್ದೇವೆ. ರಾಜಕಾರಣಿಗಳು ಮತ ಚಲಾವಣೆಗೆ ಮುಂಚೆ ಮತದಾರರೇ ದೇವರು ಎನ್ನುತ್ತಾರೆ. ಮತದಾನದ ನಂತರ ಜನರ ಗೊಡವೆಗೆ ಹೋಗುವುದಿಲ್ಲ ಎಂದು ಬೇಸರಿಸಿದರು.

ಕಾರ್ಯಕ್ರಮದಲ್ಲಿ ಪಿಇಎಸ್ ಸಂಸ್ಥೆಯ ಸೂರ್ಯಪ್ರಸಾದ್, ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಯಜ್ಞೋಪವಿತ ಧಾರಣೆಯಿಂದ ಮಾನಸಿಕ, ದೈಹಿಕ ಆರೋಗ್ಯ-ಬಾಲಚಂದ್ರಶಾಸ್ತ್ರಿ
ಗಜೇಂದ್ರಗಡ ತಹಸೀಲ್ದಾರ್ ಕಾರ್ಯಾಲಯಕ್ಕೆ ಮಳೆ ನೀರಿನ ಕಾಟ!