ಭೀಮಾ ಕೋರೆಗಾಂವ್‌ ಯುದ್ಧದ ವಿಚಾರವನ್ನು ಪಠ್ಯಪುಸ್ತಕಕ್ಕೆ ಸೇರಿಸಿ

KannadaprabhaNewsNetwork |  
Published : Jan 03, 2026, 01:15 AM IST
12 | Kannada Prabha

ಸಾರಾಂಶ

ಮೈಸೂರು ವಿವಿ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿದಲಿತ ವಿದ್ಯಾರ್ಥಿ ಪರಿಷತ್, ದಲಿತ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಸಂಯುಕ್ತ

ಕನ್ನಡಪ್ರಭ ವಾರ್ತೆ ಮೈಸೂರುಭೀಮಾ ಕೋರೆಗಾಂವ್‌ ಯುದ್ಧದ ವಿಚಾರವನ್ನು ಪಠ್ಯಪುಸ್ತಕಕ್ಕೆ ಸೇರಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದರು.ಮೈಸೂರು ವಿವಿ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ದಲಿತ ವಿದ್ಯಾರ್ಥಿ ಪರಿಷತ್, ದಲಿತ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಸಂಯುಕ್ತವಾಗಿ ಶುಕ್ರವಾರ ಸಂಜೆ ಆಯೋಜಿಸಿದ್ದ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ಕೋರೆಗಾಂವ್‌ ಯುದ್ಧದ ವಿಚಾರವನ್ನು ಪಠ್ಯಪುಸ್ತಕಕ್ಕೆ ಸೇರಿಸುವ ಸಂಬಂಧ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.ಡಾ.ಬಿ.ಆರ್. ಅಂಬೇಡ್ಕರ್‌ ಅವರು ನೀವು ಈ ದೇಶದ ಆಳುವ ದೊರೆಯಾಗಬೇಕು ಎಂದು ಸಂದೇಶ ನೀಡಿದ್ದರು. ಆದರೆ, ನಾವು ವಿದ್ಯಾವಂತರಾದರೂ ಗುಲಾಮರಾಗಿದ್ದೇವೆ. ಅವರ ಮಾರ್ಗದಲ್ಲಿ ಸಾಗುತ್ತಿಲ್ಲ. ಅಂಬೇಡ್ಕರ್‌ ಅವರನ್ನು ಅನುಸರಿಸಿದಾಗ ಆಳುವ ದೊರೆಯಾಗುತ್ತೇವೆ ಎಂದು ಅವರು ಹೇಳಿದರು.ಇಂದು ನಾವು ಬೇಡುವ ಭಿಕ್ಷುಕರಾಗಿ ಉಳಿದಿದ್ದೇವೆ. ಹೆಸರಿಗೆ ಬಹುಸಂಖ್ಯಾತರಾಗಿದ್ದು, ಸಂಕುಚಿತ ಭಾವನೆ ನಮ್ಮನ್ನು ಗುಲಾಮಗಿರಿಗೆ ದೂಡುತ್ತಿದೆ. ಮಹಾರ್ ಸೈನಿಕರ ಹೋರಾಟದಿಂದ ಸ್ಫೂರ್ತಿ ಪಡೆದು, ರಾಜಕೀಯ ಸ್ಥಾನಮಾನ ಪಡೆಯಬೇಕು ಎಂದು ಅವರು ಕರೆ ನೀಡಿದರು.ನಟ ದುನಿಯಾ ವಿಜಯ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ಬಿ. ಹರ್ಷವರ್ಧನ್, ಚಿಂತಕ ಬಿ.ಆರ್‌. ರಂಗಸ್ವಾಮಿ, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌. ನಾಗರಾಜ, ಸಿಂಡಿಕೇಟ್ ಸದಸ್ಯ ಶಿವಶಂಕರ್, ಮಾಜಿ ಸದಸ್ಯ ಜಟ್ಟಿಹುಂಡಿ ಬಸವರಾಜ್, ತರಬೇತುದಾರ ದೇವರಾಜ ಒಡೆಯರ್‌, ತಾಪಂ ಮಾಜಿ ಸದಸ್ಯ ಸುರೇಶ್‌, ಮುಖಂಡರಾದ ಮಣಿಯಯ್ಯ, ಮರಿದೇವಯ್ಯ, ಚಂದ್ರನಾಯಕ, ಶಿವಸ್ವಾಮಿ, ವಿಶ್ವಪ್ರಸಾದ್, ಲಿಂಗರಾಜು ಮೊದಲಾದವರು ಇದ್ದರು.ಇದಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿನಿಲಯದಿಂದ ಮಾನಸಗಂಗೋತ್ರಿಯ ಅಂಬೇಡ್ಕರ್ ಪ್ರತಿಮೆವರೆಗೆ ಭೀಮಾ ಕೋರೆಗಾಂವ್ ವಿಜಯಸ್ತಂಭದ ಮೆರವಣಿಗೆ ಮಾಡಲಾಯಿತು.----ಬಾಕ್ಸ್... ಸರ್ಕಾರಿ ಶಾಲೆಗಳ ಮುಂದೆ ಕೋರೆಗಾಂವ್‌ವಿಜಯಸ್ತಂಭ ಮಾಡಿ- ದುನಿಯಾ ವಿಜಯ್‌ಸರ್ಕಾರಿ ಶಾಲೆಗಳ ಮುಂದೆ ಕೋರೆಗಾಂವ್‌ವಿಜಯಸ್ತಂಭ ಮಾಡಿ, ಎಳೆಯದರಲ್ಲೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ನಟ ದುನಿಯಾ ವಿಜಯ್‌ಹೇಳಿದರು.ಸಂವಿಧಾನದ ಸಮಾನತೆ ಬೇಕು ಎಂಬ ವಿಚಾರ ಇರಿಸಿಕೊಂಡು ಲ್ಯಾಂಡ್‌ ಲಾರ್ಡ್‌ಚಿತ್ರ ನಿರ್ಮಿಸಿದ್ದು, ಜ.23 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ. ಪ್ರತಿ ಹಳ್ಳಿಗೂ ಸಂವಿಧಾನದ ವಿಚಾರ ತಲುಪಬೇಕು. ಒಬ್ಬ ವಿದ್ಯಾವಂತನಿಗಿರುವ ಬೆಲೆ ಬೇರೆ ಯಾವ ಕ್ಷೇತ್ರದವರಿಗೂ ಇಲ್ಲ. ನಾನು ಮಾಡುವ ಎಲ್ಲಾ ಸಿನಿಮಾದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ವಿಚಾರ ಅಳವಡಿಸಿಕೊಂಡಿದ್ದು, ಅದೇ ಕಾರಣಕ್ಕೆ ಕೆಲವರಲ್ಲಿ ಅಸೂಯೆಯೂ ಇದೆ. ಡಾ. ಅಂಬೇಡ್ಕರ್‌ವಿಚಾರಗಳನ್ನು ಪಾಲಿಸಿದರೆ ಬದುಕಿನಲ್ಲಿ ಜಯಿಸಬಹುದು ಎಂದು ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ