ಕನ್ನಡಪ್ರಭ ವಾರ್ತೆ ಶಿರಾಕೋರೆಗಾಂವ್ ಯುದ್ದವು ಹಣ, ಅಂತಸ್ತು, ಸಾಮ್ರಾಜ್ಯಕ್ಕಾಗಿ ನಡೆಯಲಿಲ್ಲ. ಈ ಯುದ್ಧದ ಹಿಂದೆ ಇದ್ದದ್ದು ಅಸ್ಪೃಶ್ಯತೆ ಆಚರಣೆ ವಿರುದ್ಧದ ಕಿಚ್ಚು. ಅದು ಅಸ್ಪೃಶ್ಯತೆ ಆಚರಣೆಯ ಸಂಕೋಲೆಯಿಂದ ಬಿಡುಗಡೆಯ ಕ್ರಾಂತಿಯಾಗಿತ್ತು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಂಗಾವ್ ವಿಜಯೋತ್ಸವ ಹಾಗೂ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಕೇವಲ ಕೋರೆಗಾಂವ್ ವಿಜಯೋತ್ಸವ ಆಚರಿಸಿದರೆ ಸಾಕಾಗಲ್ಲ. ಇದುವರೆಗೂ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ದಬ್ಬಾಳಿಕೆ ನಡೆಯುತ್ತಿವೆ. ಆದ್ದರಿಂದ ನಾವು ರಾಜಕೀಯ ಪಕ್ಷಗಳಲ್ಲಿರುವ ಮನುವಾದಿಗಳನ್ನು ದೂರ ಇಡಬೇಕು. ಎಲ್ಲಾ ದಲಿತರು ರಾಜಕೀಯ ಬದಲಾವಣೆ ತರಬೇಕು ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ನಗರಸಭೆ ಸದಸ್ಯರಾದ ಗಿರಿಜಾ, ಮುಖಂಡರಾದ ವಿಜಯ್‍ಕುಮಾರ್, ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕಡೇಮನೆ ಎಸ್.ರವಿಕುಮಾರ್, ದಲಿತ ಸಂಘರ್ಷ ಸಮಿತಿಯ ಶಿವಾಜಿ ನಗರ ತಿಪ್ಪೇಸ್ವಾಮಿ, ಖಜಾಂಚಿ ಕೆ.ರಾಜು, ಆರ್.ಕೆ.ರಂಗನಾಥ್, ಕಾರೇಹಳ್ಳಪ್ಪ, ಗೋಪಾಲ್, ದೇವರಾಜು, ನಗರ ಪದಾಧಿಕಾರಿಗಳಾದ ತಿಪ್ಪೇಶ್.ಕೆ.ಕೆ, ನಿತೀನ್ ತಿಪ್ಪೇಶ್, ಕಾರ್ತಿಕ್ ರಾಜ್, ಜಯರಾಜ್, ಮಹೇಶ್, ಕುಮಾರ್, ರಂಗನಾಥ್, ಮಂಜುನಾಥ್, ಜಗ್ಗಿ, ಟೆಂಕೇಶ್ವರ ಬಾಬು, ರಂಗನಾಥ್ ಮೌರ್ಯ, ದ್ವಾರನಕುಂಟೆ ಲೋಕೇಶ್, ಪ್ರಸನ್ನ, ಈಶ್ವರ್, ಸೇರಿದಂತೆ ಹಲವರು ಹಾಜರಿದ್ದರು.1ಶಿರಾ1: ಶಿರಾ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಬಳಿ ಭೀಮಾ ಕೋರೆಗಾಂ ವಿಜಯೋತ್ಸವ ಆಚರಿಸಲಾಯಿತು.