ಕನ್ನಡಪ್ರಭ ವಾರ್ತೆ ಇಂಡಿ:
ಭೀಮಾತೀರದಲ್ಲಿ ಹಲಸಂಗಿ ಗೆಳೆಯರ ಬಳಗ ಸಿಂಪಿ ಲಿಂಗಣ್ಣ, ಮಧುರಚೆನ್ನರು ನಾಡಿಗೆ ಕೊಡುಗೆ ನೀಡಿದ ಖ್ಯಾತ ಸಾಹಿತಿಗಳಯ. ಅವರು ಜನ್ಮ ನೀಡಿದ ಭೀಮೆ ಒಡಿಲು ಹಾಗೂ ಶ್ರೀ ಬಂಥನಾಳದ ಶ್ರೀ ಸಂಗನಬಸವ ಶಿವಯೋಗಿಗಳು ತ್ರಿವಿಧ ದಾಸೋಹದ ತೀರ ಶೈಕ್ಷಣಿಕ ಕ್ರಾಂತಿಗೈದಿದ್ದು ಭೀಮಾತೀರ. ತ್ರಿವಿಧ ದಾಸೋಹದ ಇಂಡಿ ತಾಲೂಕಿನ ಅಗರಖೇಡ ಶ್ರೀರಂಗರು ಕರ್ನಾಟಕ ರಾಜ್ಯದಲ್ಲೇ ಅತ್ತುತ್ಯಮ ನಾಟಕ ರಚನಾಕಾರರಾಗಿದ್ದರು. ರಂಗತೀರ ನಮ್ಮ ಜಾನಪದ ತಾಯಂದಿರು ಆಗಿನ ಕಾಲದಲ್ಲಿಯೇ ನನ್ನನ್ನು ಭೀಮಾರತಿಯೆಂಬ ಹೊಳಿ ತಂಪು ಎಂದು ಹಾಡಿಹೊಗಳಿ ಭೀಮಾನದಿಯು ಜನಜೀವನದೋಂದಿಗೆ ಬೆಸೆದುಕೊಂಡಿದ್ದರು. ಪುಣ್ಯದ ಬೀಡನ್ನು ಯಾರದೋ ವೈಯಕ್ತಿಕ ಕುಟುಂಬಗಳ ಜಗಳದ ಅಪಖ್ಯಾತಿಯನ್ನು(ಭೀಮಾತೀರದ ಹಂತಕರು) ಭೀಮಾನದಿಗೆ ಅಂಟಿಸಿದ್ದು ನೋವಿನ ಸಂಗತಿ ಎಂದು ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ ಹೇಳಿದರುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾತೀರಕ್ಕೆ ಹಂತಕರನ್ನು ಹೋಲಿಸಿ ಬರೆದು ಈ ಭಾಗದ ಜನರ ಹೃದಯದ ಭಾವನೆಗಳಿಗೆ ಬರೆ ಎಳೆಯುವುದು ಎಷ್ಟು ಸರಿ. ಭೀಮೆ ಚಿಂತಕರ ನಾಡು, ಸಾಧಕರು ಬೀಡು. ಕೃಷ್ಣೇಯ ತೀರದಲ್ಲಿ ಜಗಳಗಳಾದರೆ ಕೃಷ್ಣ ತೀರ, ಕಾವೇರಿ ತೀರದಲ್ಲಿ ದಿನಂಪ್ರತಿ ಜಗಳಗಳಾಗುತ್ತವೆ ಎಂದಾದರೂ ಕಾವೇರಿ ಕಣಿವೆಯ ಹಂತಕರು ಎಂದು ಬರೆದಿದ್ದೀರಾ ಎಂದು ಪ್ರಶ್ನಿಸಿದರು.
ಭೀಮೆ ನಮ್ಮ ನರನಾಡಿ, ನಮ್ಮ ಶ್ರದ್ಧೆಯ ಬಿಂದು, ನಮ್ಮ ಸಂಸ್ಕೃತಿ, ಸಂಸ್ಕಾರದ ಕುರುಹು, ಭೀಮೆಯನ್ನು ಕಳಾಹೀನಗೊಳಿಸಬೇಡಿ. ಭೀಮೆಯ ಕೀರ್ತಿ ಅಪಪ್ರಚಾರ ಮಾಡಿ ಕುಗ್ಗಿಸಬೇಡಿ, ಭೀಮೆಯ ಒಡಲು ಶಾಂತವಾಗಿ ಹರಿಯುತ್ತಿದೆ. ಕವಿ,ಸಾಹಿತಿಗಳು, ಧಾರ್ಮಿಕ ಶ್ರೇದ್ದಾ ಕೇಂದ್ರಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ನಡೆಯಬೇಕು ಎಂದು ಹೇಳಿದರು.ಮಹೇಶ ಹೂಗಾರ, ಪ್ರಶಾಂತ ಲಾಳಸಂಗಿ, ಪ್ರದೀಪ ಕರ್ಜಗಿ, ಯಮನಪ್ಪ ಕುಡಿಗನೂರ, ಮಹಾವೀರ ಕಾಮನಕೇರಿ, ಶಿವಾನಂದಯ್ಯ ಲಕ್ಕುಂಡಿಮಠ, ಮಲ್ಲು ಚಾಕುಂಡಿ, ಅಪ್ಪು ಪ್ಯಾಟಿ, ಶ್ರೀಶೈಲ ಮದರಿ, ಭೀಮಾಶಂಕರ ಆಳೂರ, ಆನಂದ ಕ್ಷತ್ರಿ, ರವಿ ಹೂಗಾರ, ರೇವಣಸಿದ್ದ ಅವರಾದಿ, ಸಂತೋಷ ಪಾಟೀಲ, ರಾಹುಲ ಮರಗೂರ, ಶಿವರಾಜ ಪಾಟೀಲ, ಮಹದೇವ ಬಗಲಿ ಇದ್ದರು.