ಮಾರ್ಚ್‌ 6 ರಂದು ಯಾದಗಿರಿಯಲ್ಲಿ ಭೋಜಲಿಂಗೇಶ್ವರ ರಥೋತ್ಸವ, ಧರ್ಮಸಭೆ

KannadaprabhaNewsNetwork |  
Published : Mar 04, 2025, 12:34 AM IST
ಯಾದಗಿರಿ ಸಮೀಪದ ಸೂಗೂರೂ ಎನ್. ಗ್ರಾಮದ ಶ್ರೀಮಠದ ಆವರಣದಲ್ಲಿ ಸೋಮವಾರ ಮಾ.6 ರಂದು ಭೋಜಲಿಂಗೇಶ್ವರ ರಥೋತ್ಸವ ಹಾಗೂ ಧರ್ಮ ಸಭೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕದ ಪ್ರಮುಖ ಸಾಮರಸ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ನೆರೆಯ ಸೂಗೂಋೂ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಸಿದ್ಧಸಂಸ್ಥಾನ ಮಠದ ಜಾತ್ರೆ ಮಾ.6ರ ಗುರುವಾರ ಸಂಜೆ 7.05ಕ್ಕೆ ಜರುಗಲಿದೆ. ನಂತರ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತನವರು ತಿಳಿಸಿದ್ದಾರೆ.

ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತ ಮಾಹಿತಿ । ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ । ಉತ್ಸವ ಬಳಿಕ ಧರ್ಮಸಭೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕದ ಪ್ರಮುಖ ಸಾಮರಸ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ನೆರೆಯ ಸೂಗೂಋೂ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಸಿದ್ಧಸಂಸ್ಥಾನ ಮಠದ ಜಾತ್ರೆ ಮಾ.6ರ ಗುರುವಾರ ಸಂಜೆ 7.05ಕ್ಕೆ ಜರುಗಲಿದೆ. ನಂತರ ಧರ್ಮಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಹಿರಗಪ್ಪ ತಾತನವರು ತಿಳಿಸಿದ್ದಾರೆ.

ಸಮೀಪದ ಸೂಗೂರೂ ಎನ್. ಗ್ರಾಮದ ಶ್ರೀಮಠದ ಆವರಣದಲ್ಲಿ ಸೋಮವಾರ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಭವ್ಯ ರಥೋತ್ಸವ ನಂತರ ನಡೆಯುವ ಧರ್ಮಸಭೆಯನ್ನು ಗುಡಗುಂಟಿ ಅಮರೇಶ್ವರ ಕ್ಷೇತ್ರದ ಗಜದಂಡ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸುವರು. ಸಾನ್ನಿಧ್ಯವನ್ನು ಒಪ್ಪತ್ತೇಶ್ವರ ಮಠದ ಗುಳೇದ ಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ವಹಿಸುವರು. ನೇತೃತ್ವವನ್ನು ಭೋಜಲಿಂಗೇಶ್ವರ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಹಿರಗಪ್ಪ ತಾತ ವಹಿಸುವರು ಎಂದು ತಿಳಿಸಿದರು.

ನಂತರ ನಡೆಯುವ ಧರ್ಮಸಭೆಯ ಅಧ್ಯಕ್ಷತೆಯನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ನಿವೃತ್ತ ಜಿಲ್ಲಾಧಿಕಾರಿ ವಿ. ಶಂಕರ್, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಖ್ಯಾತ ವೈದ್ಯ ಡಾ.ರವಿಕುಮಾರ ರ‍್ಯಾಖಾ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಕಳೆದ 2 ದಿನಗಳಿಂದ ಜಾತ್ರೆಯ ಸಿದ್ಧತೆಗಳು ಆರಂಭಗೊಂಡಿದ್ದು, ಪ್ರತಿವರ್ಷದಂತೆ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಈ ವರ್ಷ ಅಂತ್ಯದವರೆಗೆ ನೂತನ ದೇವಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿಯಲಿದ್ದು, ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಭೋಜಲಿಂಗೇಶ್ವರರ ಸಹಸ್ರಾರು ಭಕ್ತರು ಸೂಗೂರು ಎನ್.ಗೆ ಆಗಮಿಸಲಿದ್ದಾರೆ ಎಂದರು.

ಶ್ರೀಮಠದ ವಕ್ತಾರರಾದ ಈರಣ್ಣ ಬಲಕಲ್ (ಎಲ್‌ಐಸಿ), ಶಂಕರಗೌಡ ಪಾಟೀಲ್, ಸಿದ್ದರಾಮರಡ್ಡಿ ಬೆನಕನಳ್ಳಿ, ಭೀಮರಡ್ಡಿ ಕುರಾಳ್, ಬಸವರಾಜ ಪಾಟೀಲ್, ಮಲ್ಲಪ್ಪ ಅರಿಕೇರಿ, ಶರಣು ಬಲಕಲ್, ವಿಶ್ವನಾಥರಡ್ಡಿ ಪಾಟೀಲ್ ಸೂಗೂರು ಎನ್., ಡಾ.ಸುರೇಶ ಮಾಗನೂರ, ಪ್ರಭು ಹೂಗಾರ, ಸಿದ್ದುಗೌಡ ಕುರಾಳ, ಮಲ್ಲಿಕಾರ್ಜುನ ಕಿವಡೇರ್ ಬಂದಳ್ಳಿ, ಭಕ್ತರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ