ನೊಣವಿನಕೆರೆ ಶಾಲೆಯಲ್ಲಿ 6 ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ

KannadaprabhaNewsNetwork |  
Published : Sep 06, 2025, 01:01 AM IST
ನೊಣವಿನಕೆರೆ ಪಿಎಂಶ್ರೀ ಶಾಲೆಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ಆರು ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ. | Kannada Prabha

ಸಾರಾಂಶ

ಬೆಂಗಳೂರು ಜಯನಗರದ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ತಾಲೂಕಿನ ನೊಣವಿನಕೆರೆ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ) ಶಾಲೆಯಲ್ಲಿ ಒಂದು ಕೋಟಿ ರು.ವೆಚ್ಚದಲ್ಲಿ ೬ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಕೆ. ಷಡಕ್ಷರಿ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಬೆಂಗಳೂರು ಜಯನಗರದ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ತಾಲೂಕಿನ ನೊಣವಿನಕೆರೆ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ) ಶಾಲೆಯಲ್ಲಿ ಒಂದು ಕೋಟಿ ರು.ವೆಚ್ಚದಲ್ಲಿ ೬ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಕೆ. ಷಡಕ್ಷರಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಪ್ರಗತಿಗೆ ತುಂಬಾ ಅನುಕೂಲವಾಗಿದೆ, ಇಲ್ಲಿಯ ಶಿಕ್ಷಕರು ಶ್ರಮವಹಿಸಿ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಪ್ರತಿವರ್ಷ ಇಲ್ಲಿಯ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಅರ್ಥಪೂರ್ಣ. ಪ್ರಸ್ತುತ ಈ ಶಾಲೆಯಲ್ಲಿ ೭೦೨ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದು, ಹೆಚ್ಚಿನ ಆಸಕ್ತಿ ತೋರಿದ್ದಾರಲ್ಲದೆ ಬೋಧನಾ ಗುಣಮಟ್ಟ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಈ ಯೋಜನೆಗೆ ಅಗತ್ಯವಿರುವ ನಿಧಿಯನ್ನು ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್‌ವತಿಯಿಂದ ದಾನಿಗಳಾದ ಅನುರಾಧಾ ಜಗದೀಶ್ ಮತ್ತು ಬಿ.ವಿ. ಜಗದೀಶ್ (ಅಮೇರಿಕಾ), ಹಾಗೂ ಸಂಜೀವ್ ಸರ್ದಾನ ಇವರಿಂದ ಸಂಗ್ರಹಿಸಿದ್ದು ೯ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಉದ್ದೇಶವಿದೆ. ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಭಾರತದಲ್ಲಿ ಗ್ರಾಮೀಣ ಶಾಲೆಗಳನ್ನು ಪುನರ್‌ನಿರ್ಮಿಸಲು ಮತ್ತು ಉತ್ತಮ ಶಿಕ್ಷಣವನ್ನು ಎಡ್‌ಟೆಕ್ ವೇದಿಕೆಯ ಮೂಲಕ ಒದಗಿಸಲು ಬದ್ಧವಾಗಿರುವ ಒಂದು ಎನ್‌ಜಿಒ. ಇದು ೨೦೦೩ರಲ್ಲಿ ಅಮೇರಿಕಾದಲ್ಲಿ ಸ್ಥಾಪಿತವಾಗಿದ್ದು, ೨೦೧೧ರಲ್ಲಿ ಬೆಂಗಳೂರಿನಲ್ಲಿ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಶೈಕ್ಷಣಿಕ ಧರ್ಮದತ್ತಿ ಅನ್ನು ಸ್ಥಾಪಿಸಲಾಯಿತು.ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಉದ್ದೇಶವೆಂದರೆ ಗ್ರಾಮೀಣ ಭಾರತದಲ್ಲಿ ಮಕ್ಕಳಿಗೆ ಸುರಕ್ಷಿತ ಹಾಗೂ ಸ್ವಚ್ಛವಾದ ಕಲಿಕಾ ವಾತಾವರಣ ಒದಗಿಸುವ ಮೂಲಕ ಶಿಕ್ಷಣದಲ್ಲಿ ನಗರ-ಗ್ರಾಮ ಅಂತರವನ್ನು ಕಡಿಮೆ ಮಾಡುವುದು. ಇದಕ್ಕಾಗಿ ತರಗತಿ ಕೊಠಡಿಗಳು. ಶೌಚಾಲಯಗಳು ಮತ್ತು ಅಡುಗೆ ಮನೆಗಳನ್ನು ನಿರ್ಮಿಸಲಾಗುತ್ತದೆ. ಎಡ್‌ಟೆಕ್ ಕಾರ್ಯಕ್ರಮವನ್ನು ಪ್ರತಿ ೧೦ ಶಾಲೆಗಳ ಕ್ಲಸ್ಟರ್‌ಗಳಿಗೆ ಒದಗಿಸುತ್ತದೆ. ಇದರ ಅಡಿಯಲ್ಲಿ ಜಾಲ ಸಂಪರ್ಕ, ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳು, ಶಿಕ್ಷಕರಿಗೆ ಲ್ಯಾಪ್‌ಟಾಪ್‌ಗಳು, ಶಾಲೆಗಳಿಗೆ ಸ್ಮಾರ್ಟ್ ಟಿವಿಗಳು ಹಾಗೂ ಎಐ ಸಾಧನಗಳು ಮತ್ತು ಗೇಮಿಫಿಕೇಶನ್‌ನೊಂದಿಗೆ ನಿಯಮಿತ ತರಬೇತಿಗಳನ್ನು ನೀಡಲಾಗುತ್ತದೆ.ಕಾರ್ಯಕ್ರಮದಲ್ಲಿ ಓಸಾತ್ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಹಿರಿಯ ಸ್ವಯಂಸೇವಕ ಮತ್ತು ಚಾಂಪಿಯನ್ ವೀರಣ್ಣಗೌಡರು, ಸಲಹೆಗಾರ ಬಾಲಕೃಷ್ಣ ರಾವ್, ಕಾರ್ಯಾಚರಣೆಯ ಉಪಾಧ್ಯಕ್ಷ ಅಶ್ವಿನ್‌ರಾವ್, ಎಂಜಿನಿಯರ್ ಶ್ರೀನಿವಾಸ್, ಐಐಎಮ್ ದರ್ಶನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ್, ಸದಸ್ಯರಾದ ಹರೀಶ್, ರಘುಚಂದನ್, ಎಸ್‌ಡಿಎಂಸಿ ಉಪಾಧ್ಯಕ್ಷ ದೊಡ್ಡರಂಗಪ್ಪ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರ್, ಪ್ರಾಂಶುಪಾಲರಾದ ಮಂಜುನಾಥ್, ಮುಖ್ಯೋಪಾಧ್ಯಾಯ ಮಧುಸೂದನ್, ಪದವೀಧರ ಮುಖ್ಯ ಶಿಕ್ಷಕರಾದ ಎಸ್.ಆರ್.ಸುರೇಶ್, ಎಸ್‌ಡಿಎಂಸ ಸದಸ್ಯರು , ಗ್ರಾಮಸ್ಥರು, ಪೋಷಕರು, ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್