ಕನ್ನಡಪ್ರಭ ವಾರ್ತೆ ಗುಡಿಬಂಡೆ
ಈ ಸಮಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಗ್ರಾಮದ ಜನರು ಬಹಳ ವರ್ಷಗಳಿಂದ ಗ್ರಾಮದ ಬಳಿ ಹರಿಯುವಂತಹ ಕುಶಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಆಶಯದಂತೆ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿರುವುದಾಗಿ ಹೇಳಿದರು.
ಡ್ಯಾಂಗೆ ಸೇತುವೆ ನಿರ್ಮಾಣಚೆಕ್ ಡ್ಯಾಂ ಹಾಗೂ ಜನರು ಸುಗಮವಾಗಿ ಸಂಚರಿಸಲು ಬ್ರಿಡ್ಜ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಆದಷ್ಟು ಶೀಘ್ರ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಜನರೂ ಸಹ ಕಾಮಗಾರಿ ನಡೆಯುವಾಗ ಪರಿಶೀಲನೆ ನಡೆಸುತ್ತಿರಬೇಕು. ಕಾಮಗಾರಿಯಲ್ಲಿ ಏನಾದರೂ ಕಳಪೆ ಕಂಡು ಬಂದರೇ ಕೂಡಲೇ ಕೆಲಸ ನಿಲ್ಲಿಸಿ, ತಮಗೆ ಮಾಹಿತಿ ನೀಡಬೇಕು. ಕಾಮಗಾರಿ ಗುಣಮಟ್ಟ ಕಾಪಾಡುವಲ್ಲಿ ಜನರೂ ಸಹ ಕಾಳಜಿ ವಹಿಸಬೇಕು ಎಂದರು.
ಈ ಸಮಯದಲ್ಲಿ ಸಣ್ಣ ನೀರಾವರಿ ಇಲಾಖೆಯ ಸುನೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿರೆಡ್ಡಿ, ಹಂಪಸಂದ್ರ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಸದಸ್ಯರಾದ ಪ್ರಕಾಶ್, ನರಸಿಂಹಮೂರ್ತಿ, ಯೂತ್ ಕಾಂಗ್ರೇಸ್ ನ ನವೀನ್, ಮುಖಂಡರಾದ ಗುರುಮೂರ್ತಿ, ಬಾಲಕೃಷ್ಣಾರೆಡ್ಡಿ ಸೇರಿದಂತೆ ಹಲವರು ಇದ್ದರು.