ಬಿಡದಿ ಪುರಸಭೆ: 69.75 ಲಕ್ಷ ಉಳಿತಾಯ ಬಜೆಟ್

KannadaprabhaNewsNetwork | Published : Mar 27, 2025 1:05 AM

ಸಾರಾಂಶ

ಮನೆ ಕಂದಾಯ, ಮಳಿಗೆ ಬಾಡಿಗೆ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್, 2025-26ನೇ ಸಾಲಿನಲ್ಲಿ 69.75 ಲಕ್ಷ ಉಳಿತಾಯ ಬಜೆಟ್ ಅನ್ನು ಬುಧವಾರ ಮಂಡಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮನೆ ಕಂದಾಯ, ಮಳಿಗೆ ಬಾಡಿಗೆ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್, 2025-26ನೇ ಸಾಲಿನಲ್ಲಿ 69.75 ಲಕ್ಷ ಉಳಿತಾಯ ಬಜೆಟ್ ಅನ್ನು ಬುಧವಾರ ಮಂಡಿಸಿದರು.

ಈಗಲ್ ರೆಸಾರ್ಟ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಹರಿಪ್ರಸಾದ್, ಪ್ರಸಕ್ತ ಸಾಲಿನಲ್ಲಿ ಒಟ್ಟು ಆರಂಭಿಕ ಶಿಲ್ಕು ಸೇರಿ ಒಟ್ಟು 3314 ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ. 3244.25 ಲಕ್ಷ ರು. ವೆಚ್ಚ ತೋರಿಸಲಾಗಿದ್ದು, 69.75 ಲಕ್ಷ ರು. ನಿರೀಕ್ಷಿತ ಉಳಿತಾಯ ಎಂದು ಮಂಡಿಸಿದ ಆಯವ್ಯಯದ ಮೇಲೆ ಸದಸ್ಯರು ಯಾವುದೇ ರೀತಿಯ ಚರ್ಚೆ ನಡೆಸದೆ ಒಪ್ಪಿಗೆ ನೀಡಿದರು.

ಪ್ರಮುಖ ಆದಾಯಗಳು :

ಆಸ್ತಿ ತೆರಿಗೆಯಿಂದ ಆದಾಯ 7.15 ಕೋಟಿ, ರಸ್ತೆ ಅಗೆತ ಮತ್ತು ಪನಸ್ಥಾಪನೆ ಶುಲ್ಕ 1.50 ಕೋಟಿ , ಡೆವಲಪ್ ಮೆಂಟ್ ಚಾರ್ಜಸ್ 1 ಕೋಟಿ , ನೀರು ಸರಬರಾಜು ಶುಲ್ಕ 88 ಲಕ್ಷ , ಅದಿಬಾರ ಮುದ್ರಾಂಕ ಶಿಲ್ಕು 25 ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ 35 ಲಕ್ಷ, ಟ್ರೇಡ್ ಲೈಸೆನ್ಸ್ - ಪ್ಲಾಸ್ಟಿಕ್ ಬಳಕೆಗೆ ದಂಡ 25 ಲಕ್ಷ, ಹೊಸ ಬಡಾವಣೆಗಳ ನಿರ್ಮಾಣದಿಂದ ಪರಿವೀಕ್ಷಣಾ ಶುಲ್ಕ 25 ಲಕ್ಷ, ಎಸ್ ಎಫ್ ಸಿ ಅನುದಾನ 29 ಲಕ್ಷ, ಬ್ಯಾಂಕ್ ಬಡ್ಡಿ 20 ಲಕ್ಷ ರು. ಆದಾಯ ನಿರೀಕ್ಷೆ ಮಾಡಲಾಗಿದೆ.

ಘನತ್ಯಾಜ್ಯ ವಸ್ತು ತೆರಿಗೆ 35 ಲಕ್ಷ, ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ 15 ಲಕ್ಷ, ಕಟ್ಟಡ ಪರವಾನಿಗೆ ಕಟ್ಟಡ ನಿಯಂತ್ರಣಕ್ಕೆ ಸಂಬಂಧಿಸಿದ ಶುಲ್ಕ 15 ಲಕ್ಷ, ನೀರು ಸರಬರಾಜು ಸಂಪರ್ಕ ಶುಲ್ಕ 7.50 ಲಕ್ಷ, ಮೊಬೈಲ್ ಟವರ್ ಅನುಮತಿ ಶುಲ್ಕ 5 ಲಕ್ಷ, ಖಾತಾ ಪ್ರತಿಗಳ ಶುಲ್ಕ 2.70 ಲಕ್ಷ, ನಿರುಪಯುಕ್ತ ವಸ್ತುಗಳ ಮಾರಾಟ 2.50 ಲಕ್ಷ, ಕಟ್ಟಡಗಳಿಂದ ಬಾಡಿಗೆ - ನೆಲ ಬಾಡಿಗೆ 2.50 ಲಕ್ಷ, ಟೆಂಡರ್ ಫಾರಮ್ ಮಾರಾಟ 1.50 ಲಕ್ಷ, ಯುಜಿಡಿ ಸಂಪರ್ಕ 1.50 ಲಕ್ಷ, ಆಸ್ತಿ ದಾಖಲಾತಿ ನಿರ್ವಹಣಾ ಶುಲ್ಕ 1 ಲಕ್ಷ, ಜಾಹಿರಾತು ತೆರಿಗೆ 1.50 ಲಕ್ಷ ರು.ಗಳನ್ನು ಆದಾಯ ನಿರೀಕ್ಷೆ ಮಾಡಲಾಗಿದೆ.

ಪ್ರಮುಖ ವೆಚ್ಚಗಳು:

ಬಜೆಟ್ ನ ವೆಚ್ಚದ ಬಾಬ್ತಿನಲ್ಲಿ ಕುಡಿಯುವ ನೀರಿನ ವಿದ್ಯುತ್ ಶುಲ್ಕ - 1.84 ಕೋಟಿ , ಕುಡಿಯುವ ನೀರು ಸಾಮಗ್ರಿ 25 ಲಕ್ಷ, ಟ್ಯಾಂಕರ್ ನೀರು ಸರಬರಾಜಿಗೆ 5 ಲಕ್ಷ, ನೀರು ಸರಬರಾಜು ಕಾಮಗಾರಿಯಲ್ಲಿ ಮೋಟಾರ್ ಪಂಪು ದುರಸ್ಥಿಗೆ 75 ಲಕ್ಷ , ಘನತ್ಯಾಜ್ಯ ವಸ್ತುಗಳ ಹೊರಗುತ್ತಿಗೆ ನಿರ್ವಹಣೆಗೆ 45 ಲಕ್ಷ, ಘನತ್ಯಾಜ್ಯ ವಿಂಗಡಣೆಯ ಸಂಗ್ರಹಣೆಗಾಗಿ ಮನೆ ಮನೆಗೆ ಬಿನ್ಸ್ ಖರೀದಿ 10 ಲಕ್ಷ , ಯುಜಿಡಿ ರಿಪೇರಿ ನಿರ್ವಹಣೆಗಾಗಿ 25 ಲಕ್ಷ, ರಸ್ತೆಗಳ ದುರಸ್ತಿ - ನಿರ್ವಹಣೆಗಾಗಿ 25 ಲಕ್ಷ, ಚರಂಡಿಗಳ ದುರಸ್ತಿ - ನಿರ್ವಹಣೆ 25 ಲಕ್ಷ, ಕಟ್ಟಡಗಳ ದುರಸ್ತಿ - ನಿರ್ವಹಣೆಗಾಗಿ 15 ಲಕ್ಷ, ಬೀದಿ ದೀಪ ವಿದ್ಯುತ್ ಶುಲ್ಕ 37 ಲಕ್ಷ, ಹೊಸ ವಿದ್ಯುತ್ ಕಂಬಗಳ ಅಳವಡಿಕೆಗೆ 10 ಲಕ್ಷ, ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹಣೆ 30 ಲಕ್ಷ , ಹೊರ ಗುತ್ತಿಗೆ ಕಾರ್ಯನಿರ್ವಹಣೆ ವೆಚ್ಚ 50 ಲಕ್ಷ, ಬೃಹತ್ ಚರಂಡಿ ತೆರೆದ ಚರಂಡಿ , ಸೇತುವೆಗಳು ಮತ್ತು ಕಾಸ್ ವೇಸ್ ಗೆ 25 ಲಕ್ಷ ರು.ಮೀಸಲಿಡಲಾಗಿದೆ.

ಗಿಡಿಗಳನ್ನು ಬೆಳೆಸಲು 15 ಲಕ್ಷ, ಐಇಸಿ ಕಾರ್ಯಕ್ರಮಕ್ಕೆ 15 ಲಕ್ಷ, ಬೀದಿ ನಾಯಿಗಳ ಎಬಿಸಿ ಚಿಕಿತ್ಸೆ ಗೆ 25 ಲಕ್ಷ, ಪೌರಕಾರ್ಮಿಕರು - ನೀರು ಸರಬರಾಜುಗಾರರಿಗೆ ಸುರಕ್ಷತಾ ಸಾಮಗ್ರಿ ಖರೀದಿ 15 ಲಕ್ಷ, ಆರೋಗ್ಯ ವಿಮೆಗೆ 25 ಲಕ್ಷ, ಹೊರ ಗುತ್ತಿಗೆ ಕಾರ್ಯನಿರ್ವಹಣೆ ವೆಚ್ಚಗಳು ಸ್ಯಾನಿಟರಿ ಸೂಪರ್ ವೈಸರ್ , ಕ್ಲೀನರ್ಸ್ ಗೆ 40 ಲಕ್ಷ, ನೇರ ಪಾವತಿ ಪೌರಕಾರ್ಮಿಕರ ವೇತನ 35 ಲಕ್ಷ , ಕಾರ್ಮಿಕರ ಕಲ್ಯಾಣ ವೆಚ್ಚ 5 ಲಕ್ಷ, ಹೊರ ಗುತ್ತಿಗೆ ಕಾರ್ಯ ನಿರ್ವಹಣೆ ವೆಚ್ಚ 10 ಲಕ್ಷ, ಲೆಕ್ಕ ಪರಿಶೋಧನಾ ಶುಲ್ಕ 10 ಲಕ್ಷ, ಎಸ್ಸಿ ಎಸ್ಟಿ ಅಭಿವೃದ್ಧಿಗೆ 32 ಲಕ್ಷ, ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ನಿಧಿಗೆ 12 ಲಕ್ಷ, ಅಂಗವಿಕಲರ ಕಲ್ಯಾಣ ನಿಧಿಗೆ 7 ಲಕ್ಷ ರುಪಾಯಿ ಮೀಸಲಿಡಲಾಗಿದೆ ಎಂದು ಅಧ್ಯಕ್ಷ ಹರಿಪ್ರಸಾದ್ ವಿವರಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಗೋವಿಂದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಜಿ.ಲೋಹಿತ್ ಕುಮಾರ್ ಮುಖ್ಯಾಧಿಕಾರಿ ಕೆ.ಜಿ.ರಮೇಶ್ ಉಪಸ್ಥಿತರಿದ್ದರು.

ಬಿಡದಿ ಪಟ್ಟಣದ ಸೌಂದರೀಕರಣಗೊಳಿಸಲು ಒತ್ತು

ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯಲ್ಲಿರುವ ಪ್ರಮುಖ ರಸ್ತೆಗಳ ಬದಿಗಳಲ್ಲಿ ಗಿಡಗಳನ್ನು ನೆಡುವುದು ಹಾಗೂ ರಸ್ತೆ ಅಭಿವೃದ್ಧಿ ಪಡಿಸಿ ಬಿಡದಿ ಪಟ್ಟಣವನ್ನು ಸೌಂದರೀಕರಣಗೊಳಿಸಲು ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಒಲವು ತೋರಿದ್ದಾರೆ.

ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ರಸ್ತೆ ಬದಿ ಅಲಂಕಾರಿಕ ಗಿಡಗಳು ಮತ್ತು ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು. ಉದ್ಯಾನವನಗಳ ನಿರ್ವಹಣೆಗಾಗಿ 15 ಲಕ್ಷ, ಪಾರ್ಕ್ ಗಳ ಅಭಿವೃದ್ಧಿಗಾಗಿ 250 ಲಕ್ಷ , ಹೊಸ ಕಟ್ಟಡ ನಿರ್ವಾಣಕ್ಕಾಗಿ 500 ಲಕ್ಷ , ಸ್ವಾಗತ ಕಮಾನು ಅಳವಡಿಕೆಗೆ 40 ಲಕ್ಷ ರು.ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕ್ರೀಡೆ, ಸಾಂಸ್ಕೃತಿಕ , ಸಾಹಿತ್ಯ , ಜಾನಪದ ಮುಂತಾದ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ 15 ಲಕ್ಷ ಮೀಸಲಿರಿಸಲಾಗಿದೆ. ಎಸ್ಸಿ ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗೆ 32 ಲಕ್ಷ, ಇತರೆ ಬಡಜನರ ಜನಾಂಗದ ಅಭಿವೃದ್ದಿಗಾಗಿ 12 ಲಕ್ಷ, ವಿಶೇಷಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ 7 ಲಕ್ಷ ರು. ಮೀಸಲಿಡಲಾಗಿದೆ ಎಂದು ಹರಿಪ್ರಸಾದ್ ಹೇಳಿದರು.

ಬಿಡದಿ ಪುರಸಭೆ ಆಯವ್ಯಯ ವಿವರ (ರು.ಗಳಲ್ಲಿ)

ಎ)ಆರಂಭ ಶಿಲ್ಕು13,28,85,254

ಬಿ)ರಾಜಸ್ವ ಖಾತೆ

1ರಾಜಸ್ವ ಆದಾಯ19,86,55,000

2ರಾಜಸ್ವ ಪಾವತಿ17,46,25,000

ರಾಜಸ್ವ ಖಾತೆಯಲ್ಲಿನ ಹೆಚ್ಚುವರಿ ಕೊರತೆ2,40,30,000

ಸಿ) ಬಂಡವಾಳ ಖಾತೆ

1ಬಂಡವಾಳ ಆದಾಯಗಳು20,00,000

2ಬಂಡವಾಳು ಪಾವತಿಗಳು28,43,00,000

ಬಂಡವಾಳ ಖಾತೆಯಲ್ಲಿನ ಕೊರತೆ(-)28,23,00,000

ಡಿ) ವಿಶೇಷ ಖಾತೆ

1ಅಸಾಧಾರಣ ಆದಾಯಗಳು22,78,25,000

2ಅಸಾಧಾರಣ ಪಾವತಿಗಳು9,54,65,000

ವಿಶೇಷ ಖಾತೆಯ ಕೊರತೆ(-) ರು. 13,23,60,000

ಇ) ಒಟ್ಟು ಕೊರತೆ (ಬಿಸಿಡಿ) (-) ರು.12,59,10,000

ಎಫ್) ಅಂತಿಮ ಶಿಲ್ಕು (ಎಇ) 69,75,254

Share this article