ಕನ್ನಡಪ್ರಭ ವಾರ್ತೆ ಬೀದರ್
ಈ ಕುರಿತು ಬುಧವಾರ ಸಂಸದರಿಗೆ ಮನವಿ ಸಲ್ಲಿಸಿ, 2025-2026 ನೇ ಸಾಲಿಗೆ ಪ್ರಧಾನ ಮಂತ್ರಿ ನಗರ ಅವಾಸ್ ಯೋಜನೆ ಅಡಿಯಲ್ಲಿ ಸ್ವಂತ ಮನೆ ಪಡೆದುಕೊಳ್ಳಲು ಸ್ವಂತ ಜಾಗ ಇರುವವರು ಬಿಎಲ್‌ಸಿ ಫಲಾನುಭವಿ ನೇತ್ರತ್ವದ ನಿರ್ಮಾಣದಲ್ಲಿ ವಸತಿ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. 3000 ದಿಂದ 3500 ಜನರು ನಗರದಲ್ಲಿ ಯಾವುದೇ ರೀತಿ ಜಾಗ ಹೊಂದಿರದೆ ಕೂಲಿ ಕೆಲಸವನ್ನು ಮಾಡಿಕೊಂಡು, ಉಪಜೀವನ ನಡೆಸುತ್ತಿರುವ ಬಡಜನರು ನಗರದಲ್ಲಿದ್ದಾರೆ ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚು ಮನೆ ನೀಡಬೇಕೆಂದಿದ್ದಾರೆ.
2018-2019 ಸಾಲಿಗೆ ಪ್ರಧಾನ ಮಂತ್ರಿ ನಗರ ವಸತಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಮನೆಗಳ ಮಂಜೂರಾತಿಯ 3 ಕಂತುಗಳು ಮಾತ್ರ ಬಿಡುಗಡೆಯಾಗಿರುತ್ತದೆ. ಉಳಿದ ಕಂತಿನ ಹಣ ಇನ್ನು ಬಿಡುಗಡೆಯಾಗಿರುವುದಿಲ್ಲ ಎಂದು ಸಂಸದರ ಗಮನಕ್ಕೆ ತಂದಿದ್ದಾರೆ.ಈ ಸಂದರ್ಭದಲ್ಲಿ ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ, ರಾಘವೇಂದ್ರ ಡಿ.ಎಸ್.ಆನಂದ ಪಾಟೀಲ್, ಎಂ.ಡಿ.ಸಿದ್ದಿಕಿ, ಪ್ರವೀಣ ಭಾಗ್ಯನೋರ್, ವಿಜಕುಮಾರ ಮೋರ್ಗಿಕರ್, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ.ಸುಬ್ಬಣ್ಣ ಕರಕನಳ್ಳಿ ಮತ್ತಿತರರು ಇದ್ದರು.