ಮೂಕ ತಂದೆಯ ಕೈಕಾಲು ಮುರಿದು, ಶವದ ಜೊತೆ ಊಟ ಮಾಡಿದ ಮಕ್ಕಳು - ಬೀದರ್ ನಲ್ಲೊಂದು ಹೃದಯವಿದ್ರಾವಕ ಘಟನೆ

ಸಾರಾಂಶ

ಸ್ವತಃ ಮೂವರು ಮಕ್ಕಳು ತಾಯಿಯೊಂದಿಗೆ ಸೇರಿಕೊಂಡು ಮೂಕ-ಕಿವುಡ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಶವ ಇಟ್ಟುಕೊಂಡ ಘಟನೆ ಬೀದರ್ ಜಿಲ್ಲೆ ಸಾತೋಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೀದರ್‌ : ಸ್ವತಃ ಮೂವರು ಮಕ್ಕಳು ತಾಯಿಯೊಂದಿಗೆ ಸೇರಿಕೊಂಡು ಮೂಕ-ಕಿವುಡ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿ ಮನೆಯಲ್ಲಿಯೇ ಶವ ಇಟ್ಟುಕೊಂಡ ಘಟನೆ ಬೀದರ್ ಜಿಲ್ಲೆ ಸಾತೋಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 ತಾಲೂಕಿನ ಸಾತೋಳಿ ನಿವಾಸಿ ಬಸವರಾಜ ಶೇರಿಕಾರ್‌ (52) ಕೊಲೆಯಾದ ವ್ಯಕ್ತಿ. ಮೃತರ ಪತ್ನಿ ಅಡೆಮ್ಮ, ಮಕ್ಕಳಾದ ಪ್ರಭಾಕರ, ಹಣಮಂತ ಮತ್ತು ರತ್ನಮ್ಮ ಆರೋಪಿಗಳು. ತಾಯಿ ಜತೆಗೆ ಮೂವರು ಮಕ್ಕಳು ಸೇರಿ ಬಸವರಾಜರನ್ನು ಮನೆಯಲ್ಲಿ ಕೂಡಿ ಹಾಕಿ ಕಟ್ಟಿಗೆ ಹಾಗೂ ಸಲಾಕೆಗಳಿಂದ ಕೈ ಕಾಲುಗಳನ್ನು ಮುರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅಲ್ಲದೆ, ಮನೆಯ ಕೊಠಡಿಯೊಳಗೆ ಮೃತದೇಹ ಇಟ್ಟು ಬೀಗ ಹಾಕಿದ್ದರು. ಬಳಿಕ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿಚಾರಕ್ಕಾಗಿ ನ.8ರಂದು ಬೆಳಗ್ಗೆ ಪತ್ನಿ ಹಾಗೂ ಮಕ್ಕಳು ಬಸವಾರಜ ಅವರನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ಸಹೋದರ ಮಲ್ಲಿಕಾರ್ಜುನ್‌ ಮನ್ನಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಕುಟುಂಬದ ಸದಸ್ಯರು ಅನ್ಯಧರ್ಮಕ್ಕೆ ಮತಾಂತರ ಆಗುವುದನ್ನು ಬಸವರಾಜ ವಿರೋಧ ಮಾಡಿದ್ದರಿಂದಲೇ ಕೊಲೆ ನಡೆದಿದೆ ಎಂದು ಗ್ರಾಮದ ಶುಜಾವುದ್ದೀನ್‌ ಆರೋಪಿಸಿದ್ದಾರೆ.

Share this article