ಮೇ 11ರಿಂದ ವಾಮಂಜೂರಲ್ಲಿ ಬೃಹತ್‌ ಕೃಷಿ ಮೇಳ

KannadaprabhaNewsNetwork |  
Published : Apr 20, 2024, 01:07 AM IST
ಕೃಷಿ ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸುತ್ತಿರುವುದು. | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಕೃಷಿ ಮೇಳದ ಗೌರವಾಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಈ ಕುರಿತು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬೃಹತ್‌ ಕೃಷಿ ಮೇಳ ಮತ್ತು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ ಮೇ 11ರಿಂದ 13ರವರೆಗೆ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ನಡೆಯಲಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಕೃಷಿ ಮೇಳದ ಗೌರವಾಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಈ ಕುರಿತು ಮಾಹಿತಿ ನೀಡಿದರು. ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಜಂಟಿ ಆಶ್ರಯದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ಸಾವಯವ ಕೃಷಿಕ ಗ್ರಾಹಕ ಬಳಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ದ.ಕ., ನವೋದಯ ಸ್ವಸಹಾಯ ಸಂಘ ಸಹಯೋಗದಲ್ಲಿ ನಡೆಯಲಿದೆ.

ಮೇ 11ರಂದು ಬೆಳಗ್ಗೆ 9 ಗಂಟೆಗೆ ಕೃಷಿ ಮೇಳ ಉದ್ಘಾಟನೆಯಾಗಲಿದ್ದು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಡುಪು ದೇವಾಲಯದ ವೇ.ಮೂ. ನರಸಿಂಹ ತಂತ್ರಿ ಹಾಗೂ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟನೆ ನೇರವೇರಿಸಲಿದ್ದಾರೆ. ಮೇ 13ರಂದು ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೇಳದ ವೈವಿಧ್ಯತೆಗಳು:

ಕೃಷಿ ಮೇಳದಲ್ಲಿ ಆಹಾರ ಮೇಳ, ವಾಹನ ಮೇಳ, ಜಾನುವಾರು ಮೇಳ, ಶ್ವಾನ ಪ್ರದರ್ಶನ, ಕುಕ್ಕುಟ ಮೇಳ, ದೇಸಿ ಗೋತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಮಳಿಗೆ, ಹಲಸು ಮೇಳ, ಬಾಳೆಹಣ್ಣು ಮೇಳ, ಹಣ್ಣು ಹಂಪಲು ಉತ್ಸವ, ಫಲಪುಷ್ಪ ಪ್ರದರ್ಶನ, ವ್ಯವಹಾರ ಮೇಳ, ಗುಡಿ ಕೈಗಾರಿಕೆ, ಆರ್ಚ್‌ ಗ್ಯಾಲರಿ, ವಸ್ತು ಪ್ರದರ್ಶನ, ಮನೋರಂಜನಾ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಆಟಗಳು, ಪಾರಂಪಾರಿಕ ಗ್ರಾಮ, ಸಂಗೀತ ರಸಸಂಜೆ, ತಾರಾಲಯ, ತಾಲೀಮು ಪ್ರದರ್ಶನ, ಹಗ್ಗ ಜಗ್ಗಾಟ, ಭಾರ ಎತ್ತುವ ಸ್ಪರ್ಧೆ, ದೇಹದಾರ್ಢ್ಯ ಪ್ರದರ್ಶನ, ಪುರುಷರ ಮತ್ತು ಮಹಿಳೆಯರ ವಿಭಾಗದ ಕಬಡ್ಡಿ, ಕೃಷಿ ಮಾಹಿತಿ/ ಚರ್ಚಾಗೋಷ್ಠಿ, ಕೃಷಿ ವಿಚಾರಗೋಷ್ಠಿ, ಯಕ್ಷಗಾನ ಸ್ಪರ್ಧೆ, ಯಕ್ಷ ಹಾಸ್ಯ ವೈಭವ, ಚಲನಚಿತ್ರ ನಟ ನಟಿಯರ ಸಮಾಗಮ, ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಸಮಾಗಮ, ಆರೋಗ್ಯ ತಪಾಸಣಾ ಶಿಬಿರ, ಜಾದೂ ಪ್ರದರ್ಶನ, ಮಿಮಿಕ್ರಿ, ಬಲೆ ತೆಲಿಪುಗ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ರಾಜೇಂದ್ರ ಕುಮಾರ್‌ ಹೇಳಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೋಟ್ಟು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂಪ್ರಕಾಶ್‌, ಕೃಷಿ ಮೇಳದ ಕಾರ್ಯಾಧ್ಯಕ್ಷ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ, ಪ್ರಮುಖರಾದ ದೀಪಕ್‌ ಶೆಟ್ಟಿ ಲಿಂಗಮಾರುಗುತ್ತು, ಚಂದ್ರಹಾಸ ರೈ, ಪ್ರತೋಷ್‌ ಮಲ್ಲಿ, ಸಂತೋಷ್‌ ಶೆಟ್ಟಿ ಶೆಡ್ಡೆ, ಶರತ್‌ ಶೆಟ್ಟಿ ಪಡುಪಳ್ಳಿ, ನಾಗರಾಜ ರೈ, ಪೂರ್ಣಿಮಾ ಶೆಟ್ಟಿ ಮತ್ತಿತರರು ಇದ್ದರು.ಫೋಟೊ

19ಎಸ್‌ಸಿಡಿಸಿಸಿ

ಲಗತ್ತಿಸಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ