ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಚನ್ನರಾಯಪಟ್ಟಣ ರಸ್ತೆ ಗ್ರಾಮಭಾರತಿ ಶಾಲೆ ಬಳಿ ಹೆಲ್ಮೆಟ್ ಧರಿಸದೆ ಅಡ್ಡಾದಿಡ್ಡಿಯಾಗಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಸುಮಾರಾಣಿ, ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಸ್ಥಳದಲ್ಲಿಯೇ ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಹೆಲ್ಮೆಟ್ ಧರಿಸುವುದರಿಂದ ಸಾಕಷ್ಟು ಸಾವು-ನೋವುಗಳನ್ನು ತಪ್ಪಿಸಬಹುದು. ಪ್ರತಿಯೊಬ್ಬ ವಾಹನ ಸವಾರರಿಗೂ ಒಂದೊಂದು ಕುಟುಂಬವಿದೆ. ಕುಟುಂಬದ ಯಜಮಾನನನ್ನು ನಂಬಿ ಬದುಕು ಸಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬ ಯುವಕರು ತಮ್ಮ ತಮ್ಮ ಕುಟುಂಬದ ಆಸ್ತಿ ಎಂಬುದನ್ನು ತಿಳಿಯಬೇಕು ಎಂದರು.ಹೆಲ್ಮಟ್ ಧರಿಸಿ ರಸ್ತೆ ಸುರಕ್ಷತಾ ನಿಯಮ ಪಾಲಿಸಿದರೆ ಶೇ.100 ರಷ್ಟು ರಸ್ತೆ ಅಪಘಾತ ತಪ್ಪಿಸಬಹುದು. ನಾಗರೀಕ ಸಮಾಜಕ್ಕೆ ಮಾರ್ಗದರ್ಶಕರಾಗಿರುವ ಶಿಕ್ಷಕರು, ಪತ್ರಕರ್ತರು ಹಾಗೂ ಯುವ ಜನರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು ಎಂದು ಸೂಚಿಸಿದರು.