ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿ ಅಗತ್ಯವಿರುವಲ್ಲಿ ತಡೆಗೋಡೆ ನಿರ್ಮಿಸಲು ಮತ್ತು ಜಾರುತ್ತಿರುವ ಬ್ರೇಕ್ ವಾಟರ್ ಕಲ್ಲುಗಳನ್ನು ವ್ಯವಸ್ಥಿತಗೊಳಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರಿಗೆ ತಹಸೀಲ್ದಾರ್ ಸೂಚನೆ ನೀಡಿದರು. ಅಲ್ಲಿನ ನಿವಾಸಿಗಳಿಗೆ ಕಡಲ್ಕೊರೆತದ ಪರಿಸ್ಥಿತಿಯ ಕುರಿತು ತಿಳುವಳಿಕೆ ನೀಡಿದರು.
ಸಮುದ್ರ ತೀರದಲ್ಲಿ ಕೆಲವು ಬಗೆಯ ಸಸ್ಯಗಳಿಂದ ಸಮುದ್ರದ ಸವೆತ, ಚಂಡಮಾರುತ, ಇತ್ಯಾದಿ ನೈಸರ್ಗಿಕ ವಿಕೋಪಗಳನ್ನು ತಡೆಯಬಹುದು ಎಂದು ಸಾಬೀತಾಗಿದೆ. ಆದ್ದರಿಂದ ಇಲ್ಲಿನ ಕಡಲ್ಕೊರೆತ ಉಂಟಾಗುವ ಭಾಗಗಳಲ್ಲಿ ಜೈವಿಕ ತಡೆಗೋಡೆ - ಜೈವಿಕ ರಕ್ಷಾಕವಚವನ್ನು ನಿರ್ಮಿಸಬೇಕಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಬಂದರು ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.ತಹಸೀಲ್ದಾರ್ ಅವರೊಂದಿಗೆ ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಲೋಕನಾಥ್ ಅವರು ಸ್ಥಳ ಪರಿಶೀಲನೆಗೆ ಸಾಥ್ ನೀಡಿದರು.