ಚಿಕ್ಕಬಳ್ಳಾಪುರಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆ

KannadaprabhaNewsNetwork |  
Published : Feb 28, 2025, 12:48 AM IST
ಸಿಕೆಬಿ-4 ಹಕ್ಕಿ ಜ್ವರದ ಕುರಿತು ಸುದ್ದಿಗಾರರಿಗೆ ಸಚಿವ ಡಾ.ಎಂ.ಸಿ.ಸುಧಾಕರ್  ಮಾಹಿತಿ ನೀಡಿದರು. | Kannada Prabha

ಸಾರಾಂಶ

ವರದಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೊಬ್ಬರು ಸಾಕಿದ್ದ ಎರಡು ನಾಟಿ ಕೋಳಿಗಳು ಅಸ್ವಸ್ಥಗೊಂಡು ಹಠಾತ್ತನೆ ಸತ್ತಿತದ್ದವು. ಪಶುಸಂಗೋಪನಾ ಮತ್ತು ಪಶುವೈದ್ಯ ಇಲಾಖೆಯು ಈ ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಮಾದರಿಗಳಲ್ಲಿ ಹಕ್ಕಿ ಜ್ವರದ ವೈರಾಣು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ

ಚಿಕ್ಕಬಳ್ಳಾಪುರ:ಆಂಧ್ರ ಹಾಗೂ ತೆಲಂಗಾಣದಲ್ಲಿ ಕೋಟ್ಯಾಂತರ ಪ್ರಾಣಿ ಪಕ್ಷಿಗಳನ್ನ ಬಲಿ ಪಡೆದಿರುವ ಡೆಡ್ಲಿ ಎಚ್5ಎನ್1 ವೈರಸ್ ಜಿಲ್ಲೆಗೂ ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿ ಗ್ರಾಮದಲ್ಲಿ ಸಾಕಿದ್ದ ನಾಟಿ ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ವರದಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೊಬ್ಬರು ಸಾಕಿದ್ದ ಎರಡು ನಾಟಿ ಕೋಳಿಗಳು ಅಸ್ವಸ್ಥಗೊಂಡು ಹಠಾತ್ತನೆ ಸತ್ತಿತದ್ದವು. ಪಶುಸಂಗೋಪನಾ ಮತ್ತು ಪಶುವೈದ್ಯ ಇಲಾಖೆಯು ಈ ಸತ್ತ ಕೋಳಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಮಾದರಿಗಳಲ್ಲಿ ಹಕ್ಕಿ ಜ್ವರದ ವೈರಾಣು ಪತ್ತೆಯಾಗಿದೆ ಎಂದು ಮೌಖಿಕ ವರದಿ ಬಂದಿದೆ ಎಂದರು.

ಹೈ ಅಲರ್ಟ್ ಘೋಷಣೆ

ಜಿಲ್ಲೆಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು. ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ. ಪಶು ಸಂಗೋಪನಾ ಮತ್ತು ಪಶುವೈದ್ಯ ಇಲಾಖೆ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲೇ ಬೀಡು ಬಿಟ್ಟಿದ್ದು, ಮಾರಕ ಹಕ್ಕಿ ಜ್ವರ ಕಡಿವಾಣಕ್ಕೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದರು.

.ಕೋಳಿ ಸೇರಿದಂತೆ ಪಕ್ಷಿಗಳ ಜೀವಕ್ಕೆ ಮೃತ್ಯುವಾಗಿರುವ ಎಚ್5 ಎನ್1 ವೈರಸ್ ಜಿಲ್ಲೆಗೂ ಕಾಲಿಟ್ಟಿದೆ. ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಮಾರಕ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಗ್ರಾಮದ ದ್ಯಾವಪ್ಪ ಎಂಬುವವರಿಗೆ ಸೇರಿದ 28 ಕೋಳಿಗಳು ಹಾಗೂ ರತ್ನಮ್ಮ ಎಂಬುವವರಿಗೆ ಸೇರಿದ 5 ಕೋಳಿಗಳು ಸೇರಿದಂತೆ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದ ದಿಢೀರನೆ ಸತ್ತಿವೆ.

ಭೋಪಾಲ್‌ ಪ್ರಯೋಗಾಲಯ

ಕೋಳಿಗಳ ಬಾಯಲ್ಲಿ ನೊರೆ, ತೂಕಡಿಕೆ, ಖಾಯಿಲೆ ಸೇರಿದಂತೆ ರಕ್ತಭೇದಿ ಮಾಡಿ ಕೋಳಿಗಳು ದಿಢೀರ್ ಅಂತ ಮೃತಪಡುತ್ತಿವೆ. ಇನ್ನೂ ದ್ಯಾವಪ್ಪ ತಮಗೆ ಆಗದವರು ಯಾರೋ ಕೋಳಿಗಳಿಗೆ ವಿಷವಿಕ್ಕಿದ್ದಾರೆ ಅಂತಲೇ ಅನುಮಾನಗೊಂಡಿದ್ದರು. ಆಗ ಸ್ಥಳೀಯ ಪಶು ವೈದ್ಯಾಧಿಕಾರಿ ಸತ್ತ ಕೋಳಿಗಳ ಮಾದರಿಯನ್ನ ಬೆಂಗಳೂರಿನ ಪಶುಪಾಲನ ಹಾಗೂ ಜೈವಿಕ ವಿಜ್ಞಾನ ವಿಭಾಗದ ಪ್ರಯೋಗಲಾಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದಲ್ಲಿ ಹಕ್ಕಿ ಜ್ವರದ ಎಚ್ 5 ಎನ್ 1 ವೈರಸ್ ಪತ್ತೆ ಹಿನ್ನಲೆಯಲ್ಲಿ ತದನಂತರ ಅದೇ ಮಾದರಿಗಳನ್ನ ಭೂಪಾಲ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಅಲ್ಲೂ ಸಹ ಎಚ್ 5 ಎನ್ 1 ವೈರಸ್ ಇರೋದು ಧೃಡವಾಗಿದೆ.

ಹಾಗಾಗಿ ಮೌಖಿಕವಾಗಿ ಚಿಕಬಳ್ಳಾಪುರ ಜಿಲ್ಲಾಡಳಿತಕ್ಕೆ ಹಕ್ಕಿ ಜ್ವರದ ಬಗ್ಗೆ ಮಾಹಿತಿ ನೀಡಲಾಗಿದ್ದು ಜಿಲ್ಲಾಡಳಿತ ಹೈಅಲರ್ಟ್ ಆಗಿದೆ. ಹಕ್ಕಿ ಜ್ವರದ ವರದಿಯಾಗುತ್ತಿದ್ದಂತೆ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದೇನೆ. ಇನ್ನೂ ಅಧಿಕೃತವಾಗಿ ಸರ್ಕಾರದ ಆದೇಶ ಬಂದ ಕೂಡಲೇ 2 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಪಕ್ಷಿಗಳ ಮಾರಣ ಹೋಮಕ್ಕೆ ಬೇಕಾಗುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ವರದಹಳ್ಳಿ ಗ್ರಾಮಕ್ಕೆ ಪಶುಪಾಲನಾ ಇಲಾಖೆ ಆಧಿಕಾರಿಗಳ ತಂಡ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಸೇರಿದಂತೆ ಪಂಚಾಯತಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದದೆ. ಪಿಪಿಐ ಕಿಟ್ ಧರಿಸಿರುವ ಗ್ರಾಮ ಪಂಚಾಯತಿ ಸಿಬ್ಬಂದಿ ಗ್ರಾಮದಲ್ಲಿ ಈಗಾಗಲೇ ಸೋಂಕು ವೈರಸ್ ನಿವಾರಕ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣವನ್ನ ಸಿಂಪಡಣೆ ಮಾಡುತ್ತಿದ್ದಾರೆ.

ಮನೆ ಮನೆಗೆ ತೆರಳಿ ತಪಾಸಣೆ

ಮತ್ತೊಂದು ಕಡೆ ಆರೋಗ್ಯ ಇಲಾಖೆಯಡಿ ಆಶಾ ಕಾರ್ಯಕರ್ತೆಯರು ಸಹ ಮನೆ ಮನೆಗೂ ತೆರಳಿ ಜನರಿಗೆ ಸೋಂಕು ತಗುಲಿದೆಯಾ, ಯಾರಿಗಾದರೂ ಕೆಮ್ಮು ನೆಗಡಿ ಜ್ವರ ಗಂಟಲು ನೋವು ಇದೆಯಾ ಅಂತ ವಿಚಾರಣೆ ನಡೆಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ತಿಳಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ