ಕನ್ನಡಪ್ರಭ ವಾರ್ತೆ ತಿಪಟೂರು
ಶ್ರೀ ಶಂಕರೇಶ್ವರ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ ದೇವಾಲಯಗಳಲ್ಲಿ ಅಲಂಕಾರ, ರುದ್ರಾಭಿಷೇಕ, ಶ್ರೀಗಳ ಪಾದಪೂಜೆ, ರಾಜೋಪಚಾರ ನಡೆಯಲಿದೆ. ಈ ಮಹೋತ್ಸವಕ್ಕೆ ಮಾಡಾಳು ಶ್ರೀ ರುದ್ರಮುನಿ ಸ್ವಾಮೀಜಿ, ಗೋಡೆಕೆರೆ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಆಗಮಿಸಲಿದ್ದಾರೆ. ಭಕ್ತರಿಗೆ ಅನುಕೂಲವಾಗಲೆಂದು ಸಾರಿಗೆ ಬಸ್ ವ್ಯವಸ್ಥೆ, ಪೊಲೀಸ್ ಬಂದೂಬಸ್ತ್ ಮಾಡಲಾಗುವುದು. ಭಕ್ತರಿಗೂ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ. ರೋಟರಿ ಕ್ಲಬ್ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.ಏಳನೆ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ೨೦೨೬ರ ಏಪ್ರಿಲ್‌ಗೆ ಶ್ರೀಮಠದ ಪೀಠಾಧ್ಯಕ್ಷರಾಗಿ ೫೦ವರ್ಷ ತುಂಬಲಿದ್ದು, ಈ ನಿಟ್ಟಿನಲ್ಲಿ ಸುವರ್ಣ ಮಹೋತ್ಸವ ಆಚರಣೆ ಮಾಡುವ ಬಗ್ಗೆ ಶ್ರೀಗಳ ಅನುಮತಿ ಪಡೆಯಬೇಕಿದೆ. ನಮ್ಮ ಸಂಘ ಹಾಗೂ ಸರ್ವ ಭಕ್ತರ ಸಹಕಾರದಿಂದ ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಣೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದರು.
ಶ್ರೀಮಠದ ನಿವೃತ್ತ ಮುಖ್ಯಶಿಕ್ಷಕ ಡಿ.ಎಚ್. ಗಂಗಣ್ಣ ಮಾತನಾಡಿ, ಕೆರೆಗೋಡಿ-ರಂಗಾಪುರ ಶ್ರೀಮಠವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕೇಂದ್ರವಾಗಿ ಬೆಳೆಯುತ್ತಿದೆ. ಶ್ರೀಗಳ ಜನ್ಮವರ್ಧಂತಿ ಆಚರಿಸುವುದು ನಮ್ಮ ಭಾಗ್ಯ ಎಂದರು. ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿ ಪ್ರಾಂಶುಪಾಲ ಭರತ್ ಮಾತನಾಡಿ, ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ಈಗಾಗಲೇ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ಏರ್ಪಡಿಸಿ 98 ಯುನಿಟ್ ರಕ್ತವನ್ನು ನಗರದ ಶೇಖೆ ರಕ್ತನಿಧಿ ಕೇಂದ್ರಕ್ಕೆ ದಾನ ಮಾಡಲಾಗಿದೆ ಎಂದರು.ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಉಂಡಿಗನಾಳು ಬಸವರಾಜು, ಸಹಕಾರ್ಯದರ್ಶಿ ಕೆ.ಆರ್. ಶಂಕರಪ್ಪ, ಆಡಳಿತಾಧಿಕಾರಿ ಲೋಕೇಶ್, ಶಂಕರೇಶ್ವರ ಐಟಿಐ ಕಾಲೇಜಿನ ಪ್ರಾಂಶುಪಾಲ ಎಂ.ಎನ್. ಶಶಿಧರ್ ಮತ್ತಿತರರಿದ್ದರು.