ಕನ್ನಡಪ್ರಭ ವಾರ್ತೆ ಮಂಗಳೂರು
ಹರಿದ್ವಾರದಲ್ಲಿರುವ ವ್ಯಾಸಾಶ್ರಮದಲ್ಲಿ ನಡೆದವು.
ಬೆಳಗ್ಗೆ 1008 ವಿಶೇಷ ಪವಮಾನಾಭಿಷೇಕ ಸೇವೆ ನಡೆಯಿತು. ಭಾರತದ ವಿವಿಧ ದಿಕ್ಕುಗಳಲ್ಲಿ ಹರಿಯುತ್ತಿರುವ ಪವಿತ್ರ ನದಿಗಳ ತೀರ್ಥವನ್ನು ಸಂಗ್ರಹಿಸಿ ಅದನ್ನು ಹರಿದ್ವಾರದ ವ್ಯಾಸಾಶ್ರಮಕ್ಕೆ ತರಲಾಗಿತ್ತು. ಎಲ್ಲ ಪವಿತ್ರ ನದಿಗಳ ತೀರ್ಥವನ್ನು ಸ್ವಾಮೀಜಿ ಅವರ ವೃಂದಾವನದಲ್ಲಿ ಅಭಿಷೇಕ ಮಾಡಲಾಯಿತು. 1008 ಬೆಳ್ಳಿ ನಾಣ್ಯಗಳನ್ನು ಸೇವಾದಾರರಿಗೆ ವಿತರಿಸಲಾಯಿತು.ಬಳಿಕ ಸ್ವರ್ಣ ಪುಷ್ಪಾರ್ಚನಾ ಕಾರ್ಯಕ್ರಮ ನಡೆಯಿತು. ಮೊದಲಿಗೆ ವೃಂದಾವನದಲ್ಲಿರುವ ಹನುಮಂತ ದೇವರ ಪಾದಗಳಿಗೆ ಸ್ವರ್ಣ ಪುಷ್ಪಾಚನೆ ನಡೆಸಲಾಯಿತು. ಬಳಿಕ ಗುರುಪಾದುಕೆಗೆ ಸ್ವರ್ಣ ಪುಷ್ಪಾಚನೆ. ಆ ಸ್ವರ್ಣ ಪುಷ್ಪಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು. ಆಗಮಿಸಿದ ಎಲ್ಲ ಭಕ್ತರಿಗೆ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಗಂಧ ಪ್ರಸಾದ ನೀಡಿದರು.
ಸಂಜೆ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಿದರು. ದೇಶ, ವಿದೇಶಗಳ ನಾಲ್ಕು ಸಾವಿರಕ್ಕೂ ಅಧಿಕ ಭಕ್ತರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿದ್ದರು.
ಮುಂಬೈ ಜಿಎಸ್ ಬಿ ಸೇವಾ ಮಂಡಲ, ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ, ದೆಹಲಿ ಸಮಾಜ, ಬೆಂಗಳೂರು ಸಮಾಜ ಸಹಿತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವೈದಿಕ ವೃಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.