ಪಂಜಾಬ್‌ ತಳಿಯ ಹಸುವಿಗ ಅವಳಿ ಹೆಣ್ಣು ಕರುಗಳ ಜನನ

KannadaprabhaNewsNetwork |  
Published : Jun 25, 2026, 01:30 AM IST
ಫೋಟೋ: 24 ಹೆಚ್‌ಎಸ್‌ಕೆ  1ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯ ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡ ಅವರ ಹಸು ಫಾರಂನಲ್ಲಿ ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿರುವ ಹಸು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ಹೈನೋದ್ಯಮಿ ಹಾಗೂ ಬಮುಲ್ ನಿರ್ದೇಶಕ ಸತೀಶ್‌ಗೌಡರ ಹಸುಗಳ ಫಾರ್ಮ್‌ನಲ್ಲಿ ಪಂಜಾಬ್ ಮೂಲದ ಎಚ್‌ಎಫ್ ತಳಿಯ ಹಸು ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದೆ

ಹೊಸಕೋಟೆ: ತಾಲೂಕಿನ ಹೈನೋದ್ಯಮಿ ಹಾಗೂ ಬಮುಲ್ ನಿರ್ದೇಶಕ ಸತೀಶ್‌ಗೌಡರ ಹಸುಗಳ ಫಾರ್ಮ್‌ನಲ್ಲಿ ಪಂಜಾಬ್ ಮೂಲದ ಎಚ್‌ಎಫ್ ತಳಿಯ ಹಸು ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.

ಹಸುಗಳಲ್ಲಿ ಅವಳಿ ಕರುಗಳ ಜನನ ಅಪರೂಪ. ಅದರಲ್ಲೂ ಎರಡೂ ಹೆಣ್ಣು ಕರುಗಳು ಆರೋಗ್ಯವಂತವಾಗಿ ಜನಿಸಿರುವುದು ವಿಶೇಷ. ಕರುಗಳು ಹಾಗೂ ತಾಯಿ ಹಸು ಆರೋಗ್ಯವಾಗಿದ್ದು, ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ಆರೈಕೆ ನೀಡಲಾಗುತ್ತಿದೆ.

ಹೈನುಗಾರಿಕೆಯಲ್ಲಿ ಹೊಸ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡರ ಫಾರ್ಮ್‌ನಲ್ಲಿ 100ಕ್ಕೂ ಹೆಚ್ಚು ವಿವಿಧ ರಾಜ್ಯಗಳ ವಿವಿಧ ವಿಶೇಷ ತಳಿಯ ಹಸುಗಳಿವೆ. ಪ್ರತಿದಿನ 1500 ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ.

ಹಾಲು ಉತ್ಪಾದನೆಯಲ್ಲಿ ಉತ್ತಮ ನಿರ್ವಹಣೆ, ಸಮತೋಲನ ಆಹಾರ ಪದ್ಧತಿ ಹಾಗೂ ಆಧುನಿಕ ಸಾಕಾಣಿಕೆ ವಿಧಾನಗಳನ್ನು ಅನುಸರಿಸುವ ಮೂಲಕ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಹೈನೋದ್ಯಮಿ. ಅವರ ಸಾಧನೆ ಅನೇಕ ರೈತರು ಹಾಗೂ ಯುವಕರಿಗೆ ಪ್ರೇರಣೆಯಾಗಿದೆ.

ಅವಳಿ ಹೆಣ್ಣು ಕರುಗಳ ಜನನದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ರೈತರು, ಹೈನುಗಾರರು ಹಾಗೂ ಸಾರ್ವಜನಿಕರು ಫಾರ್ಮ್‌ಗೆ ಭೇಟಿ ನೀಡಿ ಸತೀಶ್ ಗೌಡರನ್ನು ಅಭಿನಂದಿಸಿದರು.

(ಫೋಟೋ: 24 ಹೆಚ್ ಎಸ್‌ಕೆ 2- ಸತೀಶ್‌ಗೌಡ ಭಾವಚಿತ್ರ)

ಫೋಟೋ: 24 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯ ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡರ ಹಸುಗಳ ಫಾರಂನಲ್ಲಿ ಅವಳಿ ಹೆಣ್ಣು ಕರುಗಳ ಜನನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಕಾವೇರಿ ನದಿಯಲ್ಲಿ ಜಲ ಸಮಾಧಿ
ಅಣೆಕಟ್ಟೆ ಕ್ರಸ್ಟ್ ಗೇಟ್‌ಗಳ ದುರಸ್ತಿ ಮುಗಿದ ಬಳಿಕ ನೀರು ಬಿಡುಗಡೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ