ಕನ್ನಡಪ್ರಭ ವಾರ್ತೆ, ಬೀರೂರು
ಪುರಸಭಾ ಕಚೇರಿಯಲ್ಲಿ 2024-25ನೇ ಸಾಲಿನ ಆಯವ್ಯಯದ ಬಜೆಟ್ ಮಂಡಿಸಿ ಈ ಸಾಲಿನ ಪುರಸಭೆ ಆಯ-ವ್ಯಯದ ಬಾಬ್ತಿನಲ್ಲಿ 33.58 ಕೋಟಿ ಆದಾಯ ಮತ್ತು 33.25 ಕೋಟಿ ವೆಚ್ಚದ ನಿರೀಕ್ಷೆ ಹೊಂದಲಾಗಿದೆ.
ಪುರಸಭೆ ಪ್ರಮುಖ ಆದಾಯಗಳಾದ ಆಸ್ತಿ ತೆರಿಗೆ1.55 ಕೋಟಿ, ಆಸ್ತಿ ಮೇಲಿನ ತೆರಿಗೆ ದಂಡ 24 ಲಕ್ಷ, ಖಾತೆ ಬದಲಾವಣೆ ಮತ್ತಿತರ ಶುಲ್ಕ 3.50 ಲಕ್ಷ, ಮಳಿಗೆ ಬಾಡಿಗೆ 32 ಲಕ್ಷ, ಕಟ್ಟಡ ಪರವಾನಗಿ, ಸುದಾರಣೆ ಶುಲ್ಕ 31 ಲಕ್ಷ, ವ್ಯಾಪಾರ ಪರವಾನಗಿ ಮತ್ತಿತರೆ ಶುಲ್ಕ ಮತ್ತು ದಂಡ 9 ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕಗಳು 15 ಲಕ್ಷ, ನೀರಿನ ಶುಲ್ಕ ಮತ್ತು ದಂಡ 65ಲಕ್ಷ, ಒಳಚರಮಡಿ ಸಂಪರ್ಕ ಶುಲ್ಕ 3.5 ಲಕ್ಷ, ನೆಲಬಾಡಿಗೆ , ಮಾರುಕಟ್ಟೆ ಶುಲ್ಕ 8.5ಲಕ್ಷ, ಬ್ಯಾಂಕ್ ಖಾತೆಗಳಿಂದ ಬಡ್ಡಿ 13ಲಕ್ಷ, ಸ್ಟಾಂಪ್ ಶುಲ್ಕ 3ಲಕ್ಷ, ಇತರೆ ಬಾಡಿಗೆ ಜಾಹಿರಾತು ಮತ್ತಿತರಗಳಿಂದ 12ಲಕ್ಷದ 25 ಸಾವಿರ ಬರಲಿದೆ ಎಂದರು.ಕೇಂದ್ರ -ರಾಜ್ಯ ಸರ್ಕಾರದ ಅನುದಾನ:
ಬರಪರಿಸ್ಥಿತಿ ಅವಲೋಕಿಸಿ ಅನುದಾನಗಳ ಲಭ್ಯತೆ ಅನುಗುಣವಾಗಿ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನ ಇರುವ ಬಜೆಟ್ ಆಗಿದ್ದು, ಮುಖ್ಯವಾಗಿ ಪಟ್ಟಣದ ವಾಡ್‌ರ್ಳಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. - ಕೆ.ಜೆ.ಕಾಂತರಾಜ್,
- ವಿ.ಡಿ.ಶಾಂತಲಾ,
• ಬಜೆಟ್ ಅಯವ್ಯಯದ ಪ್ರಾರಂಭಿಕ ಶುಲ್ಕ 11.89 ಕೋಟಿ
• ಬಂಡಾವಳ ಸ್ವೀಕೃತಿ 16.04 ಕೋಟಿ
• .ಒಟ್ಟು ಜಮೆಗಳು 33.58ಕೋಟಿ
• ರಾಜಸ್ವ ವೆಚ್ಚ 9.02 ಕೋಟಿ
• ಬಂಡಾವಳ ವೆಚ್ಚ 15.87 ಕೋಟಿ• ವಿಶೇಷ ವೆಚ್ಚಗಳು 8.36 ಕೋಟಿ
• ಒಟ್ಟು ವೆಚ್ಚ 33.25 ಲಕ್ಷಅಂತಿಮ ಉಳಿತಾಯ:32ಲಕ್ಷದ 67ಸಾವಿರ
12 ಬೀರೂರು 1
ಬೀರೂರು ಪಟ್ಟಣದ ಪುರಸಭೆಯ ಕಚೇರಿ12 ಬೀರೂರು 2
ಕೆ.ಜೆ.ಕಾಂತರಾಜ್ ಪುರಸಭಾ ಆಡಳಿತಾಧಿಕಾರಿ ಬೀರೂರು.12 ಬೀರೂರು 3
ವಿ.ಡಿ.ಶಾಂತಲ, ಪುರಸಭಾ ಮುಖ್ಯಾಧಿಕಾರಿ ಬೀರೂರು.