- ಹೊನ್ನಾಳಿಯಲ್ಲಿ ಅಕ್ಷರ ದಾಸೋಹ ಬಿಸಿಊಟ ತಯಾರಕರ ಪ್ರತಿಭಟನೆಯಲ್ಲಿ ಆವರಗೆರ ಚಂದ್ರು ಒತ್ತಾಯ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಎಐಟಿಸಿಯುಸಿ ಜಿಲ್ಲಾ ಮುಖಂಡ ಆವರಗೆರ ಚಂದ್ರು ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಸರ್ಕಾರ ಅಡುಗೆ ತಯಾರಿಕರಿಗೆ ಮಾಸಿಕವಾಗಿ ₹3,700 ಹಾಗೂ ಸಹಾಯಕರಿಗೆ ₹3,600 ಮಾತ್ರ ಗೌರವಧನ ನೀಡುತ್ತಿದೆ. ಇದರಿಂದ ಅಡುಗೆ ತಯಾರಿಕರ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಹಾಗಾಗಿ, ಅವರ ಗೌರವಧನ ದುಪ್ಪಟ್ಟು ಮಾಡಬೇಕು. ಇಡುಗಂಟು ಹಣವನ್ನು ₹2 ಲಕ್ಷಕ್ಕೆ ಏರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಈಗ ಇರುವ ವೇತನ ಹೆಚ್ಚಿಸಲಾಗುವುದು. ಇದು ನಮ್ಮ ಸರ್ಕಾರದ 6ನೇ ಘೋಷಣೆ ಎಂದು ಭರವಸೆ ನೀಡಿದ್ದರು. ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ತುಂಬಿದ್ದರೂ ಇನ್ನು ಭರವಸೆ ಈಡೇರಿಸಿಲ್ಲ ಎಂದರು.ತಾಲೂಕು ಮುಖಂಡ ಪರಮೇಶ್ವರಪ್ಪ ಮಾತನಾಡಿ, 1972ರ ಕಾರ್ಮಿಕ ಕಾಯ್ದೆಯಂತೆ ನಿವೃತ್ತಿ ಹೊಂದುವ ಎಲ್ಲ ಅಡುಗೆ ತಯಾರಿಕರಿಗೂ ಉಪಧನ ನೀಡಬೇಕು, ಬ್ಯಾಂಕ್ ಜಂಟಿ ಖಾತೆ ಈ ಮೊದಲು ಇದ್ದಂತೆ ಮುಂದುವರಿಸಬೇಕು, ಮೊದಲು ಮುಖ್ಯ ಅಡುಗೆಯವರು ಹಾಗೂ ಮುಖ್ಯೋಪಾಧ್ಯಾಯರ ಹೆಸರಿನಲ್ಲಿ ಜಂಟಿ ಖಾತೆ ಇತ್ತು, ಈಗ ಏಕಾಏಕಿ ಅದನ್ನು ರದ್ದುಗೊಳಿಸಿ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಹೆಸರಿನಲ್ಲಿ ಜಂಟಿ ಖಾತೆ ಮಾಡಿಸಿದ್ದಾರೆ. ಈ ಕೂಡಲೇ ಇದನ್ನು ರದ್ದುಗೊಳಿಸಿ ಎಂದು ಆಗ್ರಹಿಸಿದರು.
- - -
- ಆವರಗೆರೆ ಚಂದ್ರು, ಮುಖಂಡ, ಎಐಟಿಯುಸಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೊನ್ನಾಳಿ ತಾಲೂಕು ಅಕ್ಷರ ದಾಸೋಹ ಬಿಸಿಊಟ ತಯಾರಕರ ಫೆಡರೇಷನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಯಿತು.