ರೈತರ ಬಿತ್ತನೆಗೆ ಬಿಸ್ಮಿಲ್ಲಾಹ ಬಲ: 28ಕ್ಕೂ ಹೆಚ್ಚು ಹೊಸ ಯಂತ್ರಗಳ ಸಿದ್ಧತೆ

KannadaprabhaNewsNetwork |  
Published : Sep 25, 2026, 02:00 AM IST
ಅಣ್ಣಿಗೇರಿಯಲ್ಲಿರುವ ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್. | Kannada Prabha

ಸಾರಾಂಶ

ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಯಂತ್ರೋಪಕರಣಗಳನ್ನು ತಯಾರಿಸುತ್ತಿರುವ ಅಣ್ಣಿಗೇರಿಯ "ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್, ಇದೀಗ 28ಕ್ಕೂ ಹೆಚ್ಚು ಹೊಸ ಮಾದರಿಗಳೊಂದಿಗೆ ಧಾರವಾಡ ಕೃಷಿ ಮೇಳಕ್ಕೆ ಸಜ್ಜಾಗಿದೆ.

ರಫೀಕ ಕಲೇಗಾರ

ಅಣ್ಣಿಗೇರಿ:

ಕೃಷಿ ಪದ್ಧತಿ ಬದಲಾಗುತ್ತಿದ್ದಂತೆ ರೈತರ ಅಗತ್ಯಕ್ಕೂ ತಕ್ಕಂತೆ ಯಂತ್ರೋಪಕರಣಗಳಲ್ಲೂ ಹೊಸತನ ಮೂಡಬೇಕಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಯಂತ್ರೋಪಕರಣಗಳನ್ನು ತಯಾರಿಸುತ್ತಿರುವ ಅಣ್ಣಿಗೇರಿಯ "ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್, ಇದೀಗ 28ಕ್ಕೂ ಹೆಚ್ಚು ಹೊಸ ಮಾದರಿಗಳೊಂದಿಗೆ ಧಾರವಾಡ ಕೃಷಿ ಮೇಳಕ್ಕೆ ಸಜ್ಜಾಗಿದೆ.

ಆದಿಕವಿ ಪಂಪನ ನೆಲ ಅಣ್ಣಿಗೇರಿ ಕೃಷಿ ಪ್ರಧಾನ ಪ್ರದೇಶ. ಇಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್, ಗದಗ ರಸ್ತೆಯ ಅಂಬಿಗೇರಿ ಕ್ರಾಸ್ ಬಳಿ ಪ್ರಮುಖ ಕೇಂದ್ರ ಸೇರಿದಂತೆ ಪಟ್ಟಣದಲ್ಲಿ ಮೂರು ಕೇಂದ್ರಗಳ ಮೂಲಕ ಸೇವೆ ನೀಡುತ್ತಿದೆ.

ಗುಳಗುಂದಿ ಕುಟುಂಬದ ಏಳು ಸಹೋದರರು ರೈತರ ಸೇವೆಯನ್ನು ಮುಖ್ಯ ಧ್ಯೇಯವಾಗಿಸಿಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಖಾಜಾಹುಸೇನ್, ಅಬ್ದುಲ್ ಖಾದರ್, ಜಿಲಾನಿ, ಸರ್ತಾಜ್ ಹಾಗೂ ಶಬ್ಬೀರ್ ಹುಸೇನ್ ಗುಳಗುಂದಿ ಸೇರಿದಂತೆ ಕುಟುಂಬದ ಸದಸ್ಯರು ರೈತರ ಬೇಡಿಕೆ ಮತ್ತು ಹೊಲದ ಸ್ವರೂಪಕ್ಕೆ ಅನುಗುಣವಾಗಿ ಯಂತ್ರೋಪಕರಣಗಳ ವಿನ್ಯಾಸ ಹಾಗೂ ತಯಾರಿಕೆಯಲ್ಲಿ ತೊಡಗಿದ್ದಾರೆ.

ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ಸ್ಟೇನ್‌ಲೆಸ್ ಸ್ಟೀಲ್ ಬಲಿಷ್ಠ ಬಾಕ್ಸ್, ಹೈಡ್ರಾಲಿಕ್ ಪಂಪ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಅಳವಡಿಸಿ ವಿವಿಧ ಮಾದರಿಯ ಕೂರಿಗೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 4, 5, 6 ಹಾಗೂ 10 ತಾಳಿನ ಕೂರಿಗೆಗಳು ಸೇರಿದಂತೆ 24 ಡಿಲಕ್ಸ್ ಮಾದರಿಯ ಉಪಕರಣಗಳು ರೈತರ ಬಳಕೆಗೆ ಸಿದ್ಧವಾಗಿವೆ.

ಬಿಎಂಡಿ-26 ಮೆಕ್ಕೆಜೋಳ ಸ್ಪೆಷಲ್ ಕೂರಿಗೆ, ಕಿಸಾನ್, ರೆಗ್ಯುಲರ್, ದುರ್ಗಾ, ರಬ್ಬರ್ ಮಾದರಿಯ ಕೂರಿಗೆ, ಕಿಸಾನ್ ಕಲ್ಟಿವೇಟರ್, ಕಿಸಾನ್ ಸ್ಟಿಂಗ್, ಬಿಸ್ಮಿಲ್ಲಾಹ ರೋಟಾವೇಟರ್, ನೇಗಿಲು ಸೇರಿದಂತೆ 28ಕ್ಕೂ ಹೆಚ್ಚು ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಈ ರೈತ ಸ್ನೇಹಿ ಯಂತ್ರೋಪಕರಣಗಳು ಧಾರವಾಡದ ರೈತ ಜಾತ್ರೆ- ಕೃಷಿ ಮೇಳದಲ್ಲಿ 467, 468, 469 ಹಾಗೂ 470ನೇ ಮಳಿಗೆಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಕೃಷಿ ಮೇಳದಲ್ಲಿ ಭಾಗಿಸೆ. 25ರಿಂದ 28ರ ವರೆಗೆ ರೈತ ಜಾತ್ರೆ ಎಂದು ಪ್ರಸಿದ್ಧಿ ಪಡೆದ ಧಾರವಾಡ ಕೃಷಿ ಮೇಳದಲ್ಲಿ "ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್ " ಭಾಗಿಯಾಗುತ್ತಿದ್ದು, 467, 468, 469, 470 ಸಂಖ್ಯೆಯ ಮಳಿಗೆಯಲ್ಲಿ ಹಾಕಿದ್ದು, ರೈತರು ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ವ್ಯವಸ್ಥಾಪಕ ಮೆಹಬೂಬ ಗುಳಗುಂದಿ "ಕನ್ನಡಪ್ರಭ "ಕ್ಕೆ ತಿಳಿಸಿದರು. ಕಳೆದ ಎರಡು ವರ್ಷಗಳಿಂದ ಬಿಸ್ಮಿಲ್ಲಾಹ ಕಂಪನಿ ಪರಿಚಯವಿದೆ. ಇಲ್ಲಿ ಹಲವು ಯಂತ್ರೋಪಕರಣಗಳನ್ನು ಖರೀದಿಸಿದ್ದೇನೆ. ಎಲ್ಲವೂ ಗುಣಮಟ್ಟದಿಂದ ಕೂಡಿದ್ದು, ಖರೀದಿಯ ನಂತರವೂ ಬೇಕಾದ ಅಗತ್ಯ ಸೇವೆ ನೀಡುತ್ತಿದ್ದಾರೆ.

ವಿಠ್ಠಲ್ ಹರಕುಣಿ, ಧಾರವಾಡ ತಾಲೂಕಿನ ಮನ್ಸೂರು ಗ್ರಾಮದ ರೈತರೈತರ ಸೇವೆಯೇ ನಮ್ಮ ಧ್ಯೇಯ. ಕೃಷಿಯಲ್ಲಿ ಹೊಸ ಮಾದರಿಯ ಯಂತ್ರಗಳನ್ನು ಪರಿಚಯಿಸುವ ನಮ್ಮ ಪ್ರಯತ್ನಕ್ಕೆ ರೈತರ ಸ್ಪಂದನೆ ಅಗತ್ಯ ಬೇಕಿದೆ. ರೈತರೂ ನಾವು ಆವಿಷ್ಕರಿಸುವ ಯಂತ್ರಗಳನ್ನು ಉತ್ಸಾಹದಿಂದ ಖರೀದಿಸಿ ಪ್ರೋತ್ಸಾಹಿಸುತ್ತಿದ್ದಾರೆ.

ಶಬ್ಬೀರ್ ಹುಸೇನ್ ಗುಳಗುಂದಿ, ಸಂಸ್ಥೆಯ ಮಾಲೀಕ ಹಾಗೂ ವ್ಯವಸ್ಥಾಪಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರ ಪರಿಹಾರ ಕಾಮಗಾರಿ ಕೈಗೊಳ್ಳಿ: ಪ್ರದೀಪ ಶೆಟ್ಟರ್‌
ಬರ ಎದುರಿಸುವ 14 ಹೊಸ ಬೆಳೆ ತಳಿ ಸಂಶೋಧನೆ!