ಕೂರಿಗೆಯಲ್ಲಿ ಬಿಸ್ಮಿಲ್ಲಾಹ ತಂತ್ರಜ್ಞಾನದ ಕ್ರಾಂತಿ!

KannadaprabhaNewsNetwork |  
Published : Sep 28, 2026, 01:45 AM IST
ಧಾರವಾಡ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿರಿಸಲಾದ ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್‌ ಮಳಿಗೆ. | Kannada Prabha

ಸಾರಾಂಶ

ಒಂದೆಡೆ ಕೃಷಿ ಕಾರ್ಮಿಕರ ಕೊರತೆ, ಮತ್ತೊಂದೆಡೆ ಬಿತ್ತನೆಗೆ ಸಮಯದ ಒತ್ತಡ. ಈ ಎರಡಕ್ಕೂ ಯಂತ್ರೋಪಕರಣಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಅಣ್ಣಿಗೇರಿಯ ಗುಳಗುಂದಿ ಸಹೋದರರು ಕೈಜೋಡಿಸಿದ್ದಾರೆ.

ಧಾರವಾಡ: ಒಂದೆಡೆ ಕೃಷಿ ಕಾರ್ಮಿಕರ ಕೊರತೆ, ಮತ್ತೊಂದೆಡೆ ಬಿತ್ತನೆಗೆ ಸಮಯದ ಒತ್ತಡ. ಈ ಎರಡಕ್ಕೂ ಯಂತ್ರೋಪಕರಣಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಅಣ್ಣಿಗೇರಿಯ ಗುಳಗುಂದಿ ಸಹೋದರರು ಕೈಜೋಡಿಸಿದ್ದಾರೆ. ಇದರ ಫಲವಾಗಿ ರೂಪುಗೊಂಡ ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್‌ನ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಧಾರವಾಡ ಕೃಷಿ ಮೇಳದಲ್ಲಿ ರೈತರ ಗಮನ ಸೆಳೆದಿವೆ.

ಭಾನುವಾರ ಬೆಳಗ್ಗೆಯಿಂದಲೇ ಮೇಳಕ್ಕೆ ಹರಿದು ಬಂದ ರೈತರ ದಂಡು ಬಿಸ್ಮಿಲ್ಲಾಹ ಆಗ್ರೋ ಇಂಪ್ಲಿಮೆಂಟ್ಸ್‌ ಮಳಿಗೆಯತ್ತವೂ ಹೆಜ್ಜೆ ಹಾಕಿತು. ಆರು ತಾಳಿನ ಸ್ವಯಂ ಚಾಲಿತ ಬಿತ್ತುವ ಕೂರಿಗೆ, ಒಂಬತ್ತು ತಾಳಿನ ರಬ್ಬರ್‌ ಮಾದರಿ ಕೂರಿಗೆ ಸೇರಿದಂತೆ ವಿವಿಧ ಮಾದರಿಯ ಕೂರಿಗೆಗಳನ್ನು ರೈತರು ಕುತೂಹಲದಿಂದ ವೀಕ್ಷಿಸಿದರು. ಯಂತ್ರಗಳ ಕಾರ್ಯವೈಖರಿ, ಸಾಮರ್ಥ್ಯ ಹಾಗೂ ಬಳಕೆಯ ಕುರಿತು ಮಾಹಿತಿ ಪಡೆಯಲು ಗಂಟೆಗಟ್ಟಲೆ ರೈತರು ಮಳಿಗೆಯಲ್ಲಿ ಸಮಯ ಕಳೆದರು.

ಬಿತ್ತನೆಗೆ ವೇಗ, ಡೀಸೆಲ್‌ ಉಳಿತಾಯ: ಕಿಸಾನ್‌ ಮಾದರಿಯ ರೆಗ್ಯುಲರ್‌ ಕೂರಿಗೆ ರೈತರ ಸಮಯ ಹಾಗೂ ಟ್ರ್ಯಾಕ್ಟರ್‌ ಡೀಸೆಲ್‌ ಉಳಿತಾಯಕ್ಕೆ ನೆರವಾಗಲಿದೆ. ಒಂದು ದಿನದಲ್ಲಿ ಸುಮಾರು 20 ಎಕರೆ ವರೆಗೆ ಬಿತ್ತನೆ ಮಾಡಬಹುದಾದ ಈ ಮಾದರಿ, ಮುಂಗಾರು- ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ. ಮೂರು ತಾಳಿನಿಂದ ಆರಂಭಿಸಿ 10, 11 ಹಾಗೂ 15 ತಾಳಿನವರೆಗಿನ ರೆಗ್ಯುಲರ್‌ ಮಾದರಿಗಳು ಲಭ್ಯವಿವೆ.

ಇದರೊಂದಿಗೆ 24 ಡೀಲಕ್ಸ್‌ ಮಾದರಿ, ಕಬ್ಬಿಗೆ ಗೊಬ್ಬರ ಬಿತ್ತುವ ಕೂರಿಗೆ, 35ರಿಂದ 55 ಎಚ್‌ಪಿ ಟ್ರ್ಯಾಕ್ಟರ್‌ಗೆ ಹೊಂದಿಕೊಳ್ಳುವ ಹೈಡ್ರಾಲಿಕ್‌ ಪಲ್ಟಿ ನೇಗಿಲು, ಆರು ತಾಳಿನ ಎಡೆಕುಂಟಿ, ಬಲರಾಮ- ದುರ್ಗಾ ಮಾದರಿಯ ಕೂರಿಗೆ ಹಾಗೂ 3 ಮತ್ತು 5 ಟನ್‌ ಸಾಮರ್ಥ್ಯದ ಟ್ರೈಲರ್‌ಗಳೂ ರೈತರ ಗಮನ ಸೆಳೆದವು.

20ಕ್ಕೂ ಹೆಚ್ಚು ಸಿಬ್ಬಂದಿ: ರೈತರಿಗೆ ಯಂತ್ರಗಳ ಸಂಪೂರ್ಣ ಮಾಹಿತಿ ನೀಡಲು ಖಾಜಾಹುಸೇನ್‌, ಸರ್ತಾಜ್‌, ಶಬ್ಬೀರ್‌ ಹುಸೇನ್‌, ನಭಿಸಾಬ್‌, ಮೆಹಬೂಬ್‌ ಗುಳಗುಂದಿ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ಮಳಿಗೆಯಲ್ಲಿ ಕಾರ್ಯನಿರ್ವಹಿಸಿದರು.

ಗುಣಮಟ್ಟದ ಕೂರಿಗೆಗಳು ಇಲ್ಲಿ ಲಭ್ಯವಿದ್ದು, ಕೃಷಿ ಕೆಲಸದಲ್ಲಿ ಸಮಯ ಮತ್ತು ಶ್ರಮ ಉಳಿಸಲು ಸಹಕಾರಿಯಾಗಿವೆ ಎಂದು ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಕೃಷಿ ಪ್ರಶಸ್ತಿ ಪುರಸ್ಕೃತೆ, ಕೃಷಿ ತಜ್ಞೆ ಶಿವಲೀಲಾ ಹಿತ್ತಲಮನಿ ಮೆಚ್ಚುಗೆ ವ್ಯಕ್ತಪಡಿಸಿದರು.ರೈತರ ಅಗತ್ಯಕ್ಕೆ ತಕ್ಕಂತೆ ಹೊಸ ಯಂತ್ರಗಳನ್ನು ರೂಪಿಸುವುದೇ ನಮ್ಮ ಉದ್ದೇಶ. ಸಣ್ಣ ರೈತರಿಗೂ ಅನುಕೂಲವಾಗುವಂತೆ ಸಬ್ಸಿಡಿ ಯೋಜನೆಗಳ ಮೂಲಕ ಯಂತ್ರೋಪಕರಣ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಸಂಸ್ಥೆಯ ಮಾಲೀಕ ಹಾಗೂ ವ್ಯವಸ್ಥಾಪಕ ಶಬ್ಬೀರ್‌ ಹುಸೇನ್‌ ಗುಳಗುಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರಿರಂಗನ್ ವರದಿಯ ಸಮಗ್ರ ಚರ್ಚೆಯಾಗಲಿ: ಮಾರುತಿ ಗುರೂಜಿ
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ನಿಂದ ಗೊಂದಲ ಸೃಷ್ಟಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ