ತ್ರಿರಾಜ್ಯಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ ಬಿಜೆಪಿ ಬೈಕ್‌ ರ್ಯಾಲಿ

KannadaprabhaNewsNetwork |  
Published : Dec 06, 2023, 01:15 AM IST
೫ಕೆ.ಎಸ್.ಎ.ಜಿ.೧ಸಾಗರದ ಸಾಗರ ಹೋಟೆಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. | Kannada Prabha

ಸಾರಾಂಶ

ಮುಂದಿನ ಲೋಕಸಭಾ ಚುನಾವಣೆಯಲ್ಲೂ ದೇಶದ ಮತದಾರರು ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಕ್ಷುಲ್ಲಕ ಕಾರಣಗಳಿಗೆ ಹೀಗಳೆಯುವ ಕಾಂಗ್ರೆಸ್‌ನವರಿಗೆ ದೇಶದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಗೃಹ ಯೋಜನೆ, ಶೌಚಾಲಯ, ಮಂಗಳಯಾನ ಸೇರಿದಂತೆ ಪ್ರಧಾನಿಯವರು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಅದನ್ನು ಹೀಯಾಳಿಸುವ ಕೆಲಸ ಕಾಂಗ್ರೆಸ್‌ನವರದಾಗಿದೆ. ಇದೇ ಮನಸ್ಥಿತಿ ಮುಂದುವರಿಸಿದಲ್ಲಿ ದೇಶದಿಂದ ಕಾಂಗ್ರೆಸ್ ನಿರ್ನಾಮಕ್ಕೆ ಜನರೇ ಮುಂದಾಗುತ್ತಾರೆ ಎಂದು ಹೇಳಿದರು.

ಕನ್ನಡಪ್ರಭವಾರ್ತೆ ಸಾಗರ

ಪಂಚ ರಾಜ್ಯಗಳು ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ನಗರ ಬಿಜೆಪಿ ವತಿಯಿಂದ ಬೈಕ್‌ ರ್ಯಾಲಿ ನಡೆಸಿ ಸಂಭ್ರಮಿಸಲಾಯಿತು.

ಪಟ್ಟಣದ ಸಾಗರ್ ಹೋಟೆಲ್ ವೃತ್ತದಲ್ಲಿ ನಡೆದ ಸಂಭ್ರಮ ಆಚರಣೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಗಣೇಶಪ್ರಸಾದ್ ಮಾತನಾಡಿ, ರಾಷ್ಟ್ರದಲ್ಲಿ ಆಗುತ್ತಿರುವ ರಾಜಕೀಯ ಧೃವೀಕರಣ ಪಂಚ ರಾಜ್ಯ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಬಿಜೆಪಿ ಕೇವಲ ಘೋಷಣೆಗಳಿಗೆ ಸೀಮಿತವಾಗದೇ, ಅವುಗಳ ಅನುಷ್ಠಾನದಲ್ಲೂ ಸಮರ್ಪಕ ಕ್ರಮ ತೆಗೆದುಕೊಂಡಿರುವುದು ಜನರ ನಿರ್ಧಾರದಿಂದ ತಿಳಿದುಬರುತ್ತಿದೆ ಎಂದು ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲೂ ದೇಶದ ಮತದಾರರು ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಕ್ಷುಲ್ಲಕ ಕಾರಣಗಳಿಗೆ ಹೀಗಳೆಯುವ ಕಾಂಗ್ರೆಸ್‌ನವರಿಗೆ ದೇಶದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಗೃಹ ಯೋಜನೆ, ಶೌಚಾಲಯ, ಮಂಗಳಯಾನ ಸೇರಿದಂತೆ ಪ್ರಧಾನಿಯವರು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಅದನ್ನು ಹೀಯಾಳಿಸುವ ಕೆಲಸ ಕಾಂಗ್ರೆಸ್‌ನವರದಾಗಿದೆ. ಇದೇ ಮನಸ್ಥಿತಿ ಮುಂದುವರಿಸಿದಲ್ಲಿ ದೇಶದಿಂದ ಕಾಂಗ್ರೆಸ್ ನಿರ್ನಾಮಕ್ಕೆ ಜನರೇ ಮುಂದಾಗುತ್ತಾರೆ ಎಂದು ಹೇಳಿದರು.

ನಗರಸಭೆ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯ ನಾಯಕರು ಚುನಾವಣೆಯಲ್ಲಿ ನೀಡಿರುವ ವಾಗ್ದಾನಗಳನ್ನು ಅಧಿಕಾರಕ್ಕೆ ಬಂದ ಬಳಿಕ ಸಮರ್ಪಕವಾಗಿ ಈಡೇರಿಸಿದ್ದರು. ಕಾಂಗ್ರೆಸ್‌ನವರಂತೆ ಅರ್ಧಕ್ಕೆ ನಿಲ್ಲಿಸಿರಲಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖರಾದ ರಾಜೇಂದ್ರ ಪೈ, ಸತೀಶ್ ಮೊಗವೀರ, ಸಂತೋಷ್ ಶೇಟ್, ಮಹೇಶ್, ಸವಿತಾ ವಾಸು, ಮೈತ್ರಿ ಪಾಟೀಲ್, ಪ್ರೇಮಾ ಕಿರಣ್ ಸಿಂಗ್, ಪರಶುರಾಮ್ ಮೊದಲಾದವರಿದ್ದರು.

ಸಭೆ ಮುಗಿಸಿ ಮನೆಗೆ ತೆರಳುವ ಮೊದಲು ಪಟಾಕಿ ಸಿಡಿಸಿದ್ದ ಜಾಗವನ್ನು ಮುಖಂಡರು, ಕಾರ್ಯಕರ್ತರು ಗುಡಿಸಿ, ಸ್ವಚ್ಛಗೊಳಿಸಿದ್ದು ವಿಶೇಷವಾಗಿತ್ತು.

- - - -5ಕೆ.ಎಸ್.ಎ.ಜಿ.1:

ಸಾಗರದ ಸಾಗರ ಹೋಟೆಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ