ರಾಗ, ದ್ವೇಷ ಮರೆತು ಒಗ್ಗಟ್ಟಾಗಿ ದುಡಿದಾಗ ಮಾತ್ರ ಬಿಜೆಪಿ ಅಧಿಕಾರಕ್ಕೆ ತರಲು ಸಾಧ್ಯ

KannadaprabhaNewsNetwork |  
Published : Oct 04, 2026, 02:45 AM IST
ತಾಲೂಕಿನ ಹಳ್ಳೂರ, ಅಣಜಿ ಹಾಗೂ ನಾಗವಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖಂಡರ ಸಭೆಯನ್ನುದ್ದೇಶಿಸಿ ಮಾಜಿ ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿದರು. | Kannada Prabha

ಸಾರಾಂಶ

ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆಗಳು ಸದ್ಯದಲ್ಲೇ ನಡೆಯಲಿದ್ದು, ಎಲ್ಲರೂ ರಾಗ, ದ್ವೇಷಗಳನ್ನು ಮರೆತು ಒಗ್ಗಟ್ಟಾಗಿ ದುಡಿದಾಗ ಮಾತ್ರ ಅವಳಿ ತಾಲೂಕಿನ ಎಲ್ಲ 40 ಗ್ರಾಮ ಪಂಚಾಯತ್ನ್ಲ್ಲೂ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ರಟ್ಟೀಹಳ್ಳಿ: ಸ್ಥಳೀಯ ಗ್ರಾಮ ಪಂಚಾಯತ್ ಚುನಾವಣೆಗಳು ಸದ್ಯದಲ್ಲೇ ನಡೆಯಲಿದ್ದು, ಎಲ್ಲರೂ ರಾಗ, ದ್ವೇಷಗಳನ್ನು ಮರೆತು ಒಗ್ಗಟ್ಟಾಗಿ ದುಡಿದಾಗ ಮಾತ್ರ ಅವಳಿ ತಾಲೂಕಿನ ಎಲ್ಲ 40 ಗ್ರಾಮ ಪಂಚಾಯತ್‍ನಲ್ಲೂ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ತಾಲೂಕಿನ ಹಳ್ಳೂರ, ಅಣಜಿ ಹಾಗೂ ನಾಗವಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಆಡಳಿತ ಚುನಾವಣೆಗಳು ದೇಶದ ಅಭಿವೃದ್ಧಿಯ ಭದ್ರ ಬುನಾದಿಯಾಗಿ ಪ್ರಮುಖ ಪಾತ್ರವಹಿಸುವಂತ ಚುನಾವಣೆಗಳಾಗಿದ್ದು, ಆ ನಿಟ್ಟಿನಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ, ಕಾಂಗ್ರೆಸ್ 3.5 ವರ್ಷದ ಆಡಳಿತದಲ್ಲಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಬೊಕ್ಕವನ್ನು ಬರಿದಾಗಿಸಿ ಸುಮಾರು 8 ಲಕ್ಷ ಕೋಟಿ ಸಾಲವನ್ನು ರಾಜ್ಯದ ಜನತೆ ಮೇಲೆ ಹೇರಿ ಪ್ರತಿಯೊಂದು ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುವಂತೆ ಮಾಡಿದೆ. ಇಂಥ ಭ್ರಷ್ಟ ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಆಡಳಿತದಲ್ಲಿ ಪ್ರತಿ ಗ್ರಾಮ ಪಂಚಾಯತ್‍ಗಳಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ನ್ಯಾಯಯುತವಾಗಿ ನೀಡಬೇಕಾದ ಅನುದಾನಗಳನ್ನು ಕತ್ತರಿ ಹಾಕಿ ಗ್ಯಾರಂಟಿ ಸ್ಕೀಂಗಳಿಗೆ ಹಣ ಹೊಂದಿಸುವುದರಲ್ಲೇ ಇವರ ಸಾಧನೆಗಳನ್ನು ಕೊಂಡಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಆದ್ದರಿಂದ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಬಿಜೆಪಿ ಮುಖಂಡರು ತಮ್ಮ ತಮ್ಮ ಒಳಜಗಳಗಳನ್ನು ಮರೆತು ಒಟ್ಟಾಗಿ ದುಡಿದು ಅವಳಿ ತಾಲೂಕಿನ 40 ಗ್ರಾಮ ಪಂಚಾಯತ್‍ನಲ್ಲಿ ಬಿಜೆಪಿ ಅಧ್ಯಕ್ಷರುಗಳೇ ಅಧಿಕಾರದ ಗದ್ದುಗೆ ಎರಲು ಪ್ರತಿಯೊಬ್ಬ ಕಾರ್ಯಕರ್ತರು ಈಗಿನಿಂದಲೇ ತಳ ಮಟ್ಟದಿಂದ ಕಾರ್ಯನಿರ್ವಹಿಸಿ ಉತ್ತಮ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಬೀಕರ ಬರಗಾಲ ಇದ್ದರೂ ರೈತರಿಗೆ ಮಾತ್ರ ಭಿಕ್ಷೆ ಹಾಕುವಂಗೆ ಕೇವಲ 2500 ಹಣ ನೀಡಲಾಗುವುದು ಅಂತ ಘೋಷಣೆ ಮಾಡಿ ಮೂಗಿಗೆ ತುಪ್ಪ ಸವರುವಂತ ಕೆಲಸವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾಡುತ್ತಿದ್ದಾರೆ. ನಮ್ಮ ತಾಲೂಕಿನ ಶಾಸಕರು 3.5 ವರ್ಷದಲ್ಲಿ ತಾಲೂಕಿನಲ್ಲಿ ಯಾವುದಾರೂ ಒಂದು ಶಾಶ್ವತ ಯೋಜನೆ ತಂದಿಲ್ಲ, ಕೇವಲ ಹೈಮಾಸ್ಕ ಉದ್ಘಾಟನೆ ಮಾಡಿ ಅದನ್ನೇ ದೊಡ್ಡದಾಗಿ ಬಿಂಬಿಸುವಂತ ಕೆಲಸ ಮಾಡುತ್ತಿದ್ದಾರೆ. ಗುಡ್ಡದ ಮಾದಾಪುರ ಏತ ನೀರಾವರಿ ಯೋಜನೆಯನ್ನು ಬಿಜೆಪಿ ಸರಕಾರ ತಂದಿರುವ ಯೋಜನೆಯಿಂದ ಇದುವರೆಗೂ ಒಂದು ಕೆರೆ ತುಂಬಿಸಿಲ್ಲ, ಸರ್ವಜ್ಞ ಕೆರೆ ಏತ ನೀರಾವರಿ, ಮಡ್ಲೂರ ಏತ ನೀರಾವರಿ ಹೀಗೆ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರದಿಂದ ಅನುಷ್ಠಾನಗೊಳಿಸಲು ಇವರಿಂದ ಆಗುತ್ತಿಲ್ಲ. ನಮ್ಮ ಬಿಜೆಪಿ ಅವಧಿಯಲ್ಲಿನ ಯೋಜನೆಗಳಿಗೆ ಇಂದು ಟೇಪ್ ಕಟ್ ಮಾಡಿಕೊಂಡು ಕಾಲಿ ಜೇಬಲ್ಲಿ ತಾಲೂಕಿನ ತುಂಬ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿದರು. ಬಿಜೆಪಿ ಮುಖಂಡ ಜೆ.ಪಿ. ಪ್ರಕಾಶ, ರವಿ ಶಂಕರ ಬಾಳಿಕಾಯಿ, ಎಸ್.ಸಿ. ಮೋರ್ಚಾ ಅಧ್ಯಕ್ಷ ಹನಮಂತಪ್ಪ ಗಾಜೇರ್, ಎಸ್.ಟಿ. ಮೊರ್ಚಾ ಅಧ್ಯಕ್ಷ ಮಹೇಶ ತಿಪ್ಪಣ್ಣನವರ, ರೇಣಕಪ್ಪ, ಲಿಂಗಣ್ಣ, ಜಯಣ್ಣ, ಪ್ರಶಾಂತ ದ್ಯಾವಕ್ಕಳವರ ಹಾಗೂ ವಿವಿಧ ಗ್ರಾಮಗಳ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಭವಿಷ್ಯಕ್ಕೆ ಪ್ರಕೃತಿ ಸಂರಕ್ಷಣೆ ಅಗತ್ಯ: ಬಾಗಡೆ
ಬೆಳೆ ವಿಮೆ ಪರಿಹಾರ ಪರಿಶೀಲಿಸಿ ಪರಿಷ್ಕರಣೆಗೆ ಪ್ರಭು ಒತ್ತಾಯ