ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಮಂದಿರ ಸುತ್ತಾಟ

KannadaprabhaNewsNetwork |  
Published : Oct 23, 2024, 01:48 AM IST
ಪೊಟೋ ಪೈಲ್ ನೇಮ್ ೨೨ಎಸ್‌ಜಿವಿ೧ ತಾಲೂಕಿನ ಕುನ್ನೂರ ಗ್ರಾಮದ ಆಂಜನೆಯ ದೇವಸ್ಥಾನಕ್ಕೆ ಬೇಟಿ ಮಾಡಿ ಬಿಜೆಪಿ ಅಭ್ಯರ್ಥಿ ಭರತ ಬಸವರಾಜ ಬೊಮ್ಮಾಯಿ ಮತದಾರರನ್ನು ಉದ್ದೇಶಿಸಿ  ಮಾತನಾಡಿದವರು. | Kannada Prabha

ಸಾರಾಂಶ

ಶಿಗ್ಗಾಂವಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಭರತ ಬಸವರಾಜ ಬೊಮ್ಮಾಯಿ ಅವರು ತಾಲೂಕಿನ ಗಾಯತ್ರಿ ತಪೋವನ ಮುತ್ತಳ್ಳಿ, ತಡಸ, ಕುನ್ನೂರ, ದುಂಡಶಿ ಹಾಗೂ ಅರಟಾಳ ಗ್ರಾಮಗಳ ದೇವಸ್ಥಾನಗಳಿಗೆ ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.

ಶಿಗ್ಗಾಂವಿ: ಶಿಗ್ಗಾಂವಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಭರತ ಬಸವರಾಜ ಬೊಮ್ಮಾಯಿ ಅವರು ತಾಲೂಕಿನ ಗಾಯತ್ರಿ ತಪೋವನ ಮುತ್ತಳ್ಳಿ, ತಡಸ, ಕುನ್ನೂರ, ದುಂಡಶಿ ಹಾಗೂ ಅರಟಾಳ ಗ್ರಾಮಗಳ ದೇವಸ್ಥಾನಗಳಿಗೆ ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು.ತಾಲೂಕಿನ ಕುನ್ನೂರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಭೇಟಿ ಮಾಡಿ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಅ. 25ರಂದು ನಾನು ನಾಮಪತ್ರ ಸಲ್ಲಿಸಲಿದ್ದು, ಗ್ರಾಮದಿಂದ ಅಪಾರ ಜನರು ಆಗಮಿಸಿ ಆಶೀರ್ವದಿಸಿ, ವಿಜಯೋತ್ಸವ ಆಚರಣೆಯನ್ನು ಮಾಡೋಣ ಎಂದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೀರನಗೌಡ್ರ (ಗೌಡೇಶ) ಪಾಟೀಲ, ಡಾ. ಪೋಮಣ್ಣಾ ಲಮಾಣಿ, ಶಿವಾನಂದ ಮ್ಯಾಗೇರಿ, ಮಲ್ಲನಗೌಡ್ರ ಪಾಟೀಲ, ನರಹರಿ ಕಟ್ಟಿ, ಗಂಗಪ್ಪ ಹುಲ್ಲೂರ, ಮಹಾವೀರ ಸಾವಂತಣ್ಣವರ, ಲಕ್ಷ್ಮಣ್ಣ ಮಾಳೋಜನವರ, ವೀರನಗೌಡ ಬ್ಯಾಹಟ್ಟಿ, ಪ್ರಕಾಶ ಲಮಾಣಿ, ರಾಮಣ್ಣಾ ಸುಣಗಾರ, ಮಂಗಲ ಲಮಾಣಿ, ಆನಂದ ಓಲೇಕಾರ ಸೇರಿದಂತೆ ಹಲವರು ಮುಖಂಡರು ಇದ್ದರು.

ಬಿಜೆಪಿ ಟಿಕೆಟ್‌ ಆಕಾಂಕ್ಷಿ ಶ್ರೀಕಾಂತ ದುಂಡಿಗೌಡ್ರ ಅಸಮಾಧಾನ: ಶಿಗ್ಗಾಂವಿ ಉಪಚುನಾವಣೆಯ ಬಿಜೆಪಿ ಟಿಕೆಟ್ ವಿಷಯದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಸತ್ಯವನ್ನು ಮಾತನಾಡದೆ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಸಮಾಧಾನ ಹೊರಹಾಕಿದರು.ಪಟ್ಟಣದ ಅವರ ನಿವಾಸದಲ್ಲಿ ಬಿಜೆಪಿ ಟಿಕೆಟ್ ಘೋಷಣೆಯ ನಂತರ ಪ್ರಥಮ ಬಾರಿಗೆ ಬೆಂಬಲಿಗರೋಂದಿಗೆ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾನು ಸಮಾಜ ಸೇವಕನಾಗಿ ಕಳೆದ ೧೫ ವರ್ಷಗಳಿಂದ ಜನರಿಗೆ ಕೈಲಾದ ಸೇವೆ ಮಾಡುತ್ತ ಬಂದಿದ್ದೇನೆ, ಪ್ರಧಾನಿ ಮೋದಿಯವರ ಆಸೆಯಂತೆ ಕಾರ್ಯಕರ್ತರಿಗೆ ಆದ್ಯತೆ ಸಿಗಬಹುದು ಎಂದು ದೃಢವಾದ ನಂಬಿಕೆಯಿಂದ ಸೇವೆ ಮಾಡಿದ್ದೇವೆ, ಆದರೆ ಈಗ ನಿರಾಸೆಯಾಗಿದೆ. ಬೊಮ್ಮಾಯಿಯವರು ಸಹೋದರ ಎಂದು ಕರೆಯುತ್ತಿದ್ದರು. ನಾನು ಮಗನ ಚುನಾವಣೆ ಸ್ಪರ್ಧೆ ನಿರ್ಧಾರವನ್ನು ಮಾಡಿಲ್ಲ ಎಂದು ಹೇಳುತ್ತಾ ಬಂದು ಈಗ ನೋವು ಮಾಡಿದ್ದಾರೆ, ನನಗೆ ಸ್ಥಳಿಯ ಅಭ್ಯೆರ್ಥಿಗೆ ಟಿಕೆಟ್ ನೀಡುವ ವಿಶ್ವಾಸವಿತ್ತು. ಆದರೆ ಈಗ ಬಹಳಷ್ಟು ನೋವು ಆಗಿದೆ ಎಂದು ಹೇಳಿದರು.

ನಾ‍ಳೆ ಬೆಂಬಲಿಗರ ಸಭೆ: ಅ. ೨೪ರಂದು ಬೆಂಬಲಿಗರ ಸಭೆಯನ್ನು ಕರೆಯಲಾಗುವುದು. ಅಂದು ನನ್ನ ಹಿರಿಯರು, ಬೆಂಬಲಿಗರು ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು.ಎಂ.ಎನ್. ವೆಂಕೋಜಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಹನುಮರಡ್ಡಿ ನಡುವಿನಮನಿ, ಮಲ್ಲೇಶಪ್ಪ ಛೋಟಪ್ಪನವರ, ರಾಘವೇಂದ್ರ ದೇಶಪಾಂಡೆ, ರಮೇಶ ಸಾತಣ್ಣವರ, ನ್ಯಾಯವಾದಿ ಎಸ್.ಕೆ. ಅಕ್ಕಿ, ಬಸಲಿಂಗಪ್ಪ ನರಗುಂದ, ಫಕೀರೇಶ ಕೊಂಡಾಯಿ, ಚಂದ್ರು ಹೆಬ್ಬಾಳ, ಭರಮಜ್ಜ ನವಲಗುಂದ, ಫಕೀರಪ್ಪ ಕುಂದೂರ, ರಮೇಶ ಸಾತಣ್ಣವರ, ಮಹಾವೀರ ಕೋಳೂರ ಸೇರಿದಂತೆ ನೂರಾರು ಬೆಂಬಲಿಗರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ