ಬಿಜೆಪಿಯಿಂದ ಸಿಹಿ ಹಂಚಿ ಸಂಭ್ರಮಾಚರಣೆ

KannadaprabhaNewsNetwork |  
Published : May 08, 2025, 12:34 AM IST
ಆಪರೇಷನ್ ಸಿಂಧೂರ ಯಶಸ್ವಿಗೊಂಡ ಹಿನ್ನಲೆಯಲ್ಲಿ, ಕಂಪ್ಲಿಯ ಬಿಜೆಪಿ ಮಂಡಲದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಜಯೋತ್ಸವವನ್ನು ಬುಧವಾರ ಆಚರಿಸಿದರು. | Kannada Prabha

ಸಾರಾಂಶ

ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಬುಧವಾರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಸೇನೆ ಉಗ್ರರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದ ಹಿನ್ನೆಲೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಬುಧವಾರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

ಬಿಜೆಪಿ ನಗರ ಘಟಕ ಅಧ್ಯಕ್ಷ ಮುರುಳಿ ಮೋಹನ್ ರೆಡ್ಡಿ ಮಾತನಾಡಿ, ಪ್ರವಾಸಿಗರ ಮೇಲೆ ಪಾಕಿಸ್ತಾನ ಉಗ್ರರು ನಡೆಸಿದ ನರಮೇಧಕ್ಕೆ ಇಡೀ ಭಾರತವೇ ದುಃಖ ಸ್ಥಪ್ತವಾಗಿತ್ತು. ಅಲ್ಲದೇ ಎಲ್ಲೆಡೆ ಪ್ರತೀಕಾರದ ಕೂಗು ಭುಗಿಲೆದ್ದಿತ್ತು. ಹಿಂದೂ ಪುರುಷರನ್ನೇ ಗುರಿಯಾಗಿಸಿ ಕೊಂದು ಅವರ ಪತ್ನಿಯರ ಸಿಂಧೂರ ಅಳಿಸಿದ ಉಗ್ರರರಿಗೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿಯೇ ಪ್ರತೀಕಾರದ ದಾಳಿಯನ್ನು ಸೇನೆ ನಡೆಸಿ ಪಿಒಕೆಯ 9 ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದು ಇಡೀ ದೇಶವೇ ಖುಷಿ ಪಡುವ ವಿಚಾರವಾಗಿದೆ ಎಂದರು. ಬಳಿಕ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭ ಪುರಸಭೆ ಸದಸ್ಯರಾದ ಎನ್.ರಾಮಾಂಜಿನೇಯಲು, ಟಿ.ವಿ. ಸುದರ್ಶನರೆಡ್ಡಿ, ಆರ್.ಆಂಜಿನೇಯ, ಹೂಗಾರ ರಮೇಶ್, ಪ್ರಮುಖರಾದ ಪಿ.ಬ್ರಹ್ಮಯ್ಯ, ಭಾಸ್ಕರರೆಡ್ಡಿ, ಎನ್.ಚಂದ್ರಕಾಂತರೆಡ್ಡಿ, ಡಿ.ಶ್ರೀಧರಶ್ರೇಷ್ಠಿ, ಅಗಳಿ ಪಂಪಾಪತಿ, ಬಿ.ದೇವೇಂದ್ರ, ಜಿ.ಶ್ರೀನಿವಾಸ, ಸತ್ಯನಾರಾಯಣಶೆಟ್ಟಿ, ಕೊಡಿದಲ ರಾಜು, ಕೆ.ರಂಗಪ್ಪ, ಪರಮೇಶ್ವರ, ಯು.ಎಂ. ವಿದ್ಯಾಶಂಕರ, ಇಟ್ಗಿ ವಿರುಪಾಕ್ಷಿ ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ