ದಲಿತ ಯುವಕನ ಹತ್ಯೆಗೆ ಬಿಜೆಪಿ ಖಂಡನೆ

KannadaprabhaNewsNetwork |  
Published : Sep 24, 2026, 01:15 AM IST
 | Kannada Prabha

ಸಾರಾಂಶ

ಮಧುಗಿರಿ ತಾಲೂಕು ಕಸಾಪುರ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಸಿಂಹಾದ್ರಿ ಹತ್ಯೆ ಖಂಡಿಸಿ ಜಿಲ್ಲಾ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮಧುಗಿರಿ ತಾಲೂಕು ಕಸಾಪುರ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಸಿಂಹಾದ್ರಿ ಹತ್ಯೆ ಖಂಡಿಸಿ ಜಿಲ್ಲಾ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.

ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿ ಆರೋಪಿಗಳ ವಿರುದ್ಧ ಕಾನೂನುಕ್ರಮ ಕೈಗೊಂಡು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ, ರಕ್ಷಣೆ ನೀಡುವಂತೆ ಒತ್ತಾಯಿಸಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ವೈ.ಎಚ್. ಹುಚ್ಚಯ್ಯ ಮಾತನಾಡಿ, ಕಸಾಪುರದಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸಂಚು ನಡೆಸಿ ಪರಿಶಿಷ್ಟ ಜಾತಿಯ ಸಿಂಹಾದ್ರಿಯನ್ನು ಕೊಲೆ ಮಾಡಲಾಗಿದೆ. ನೀನು ಕೀಳು ಜಾತಿಯವನು ಗಣಪತಿ ಹತ್ತಿರ ಏಕೆ ಬಂದೆ ಎಂದು ಮಾರುತೇಶ್ ಎಂಬಾತ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿ ಹತ್ಯೆ ಮಾಡಿರುತ್ತಾನೆ. ಕೊನೆ ಹಿಂದಿರುವ ಪಿತೂರಿಯನ್ನು ತನಿಖೆ ಮಾಡಬೇಕು. ಇದೊಂದು ಅತ್ಯಂತ ಹೇಯ, ಅಮಾನವೀಯ, ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಂದರು.

ಮೀಸಲಾತಿ ಕ್ಷೇತ್ರದಲ್ಲಿ ಗೆದ್ದು ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ಜಿಲ್ಲಾ ಮಂತ್ರಿ ಪರಮೇಶ್ವರ್ ಅವರು ದಲಿತ ಯುವಕನ ಹತ್ಯೆ ನಡೆದರೂ ಅವನ ಮನೆಗೆ ಭೇಟಿ ನೀಡಿ, ಆತನ ತಾಯಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಕಾಳಜಿ ತೋರಿಸಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಜವಾಬ್ದಾರಿ ಮರೆತು ಆರ್‌ಎಸ್‌ಎಸ್ ಹಿಂದೆ ಬಿದ್ದಿದ್ದಾರೆ. ಇಂತಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಹಿಂದಿನ ಅವಧಿಯಲ್ಲಿ ಗೃಹ ಮಂತ್ರಿ ಆಗಿದ್ದ ಡಾ. ಪರಮೇಶ್ವರ್ ಅವರು ಜೀರೋ ಟ್ರಾಫಿಕ್‌ನಲ್ಲಿ ಓಡಾಡಿದ್ದೇ ಹೆಚ್ಚು. ಅವರ ಅವಧಿಯಲ್ಲಿ ರಾಜ್ಯದಲ್ಲಿ 327 ದಲಿತರ ಕೊಲೆಯಾದವು ಎಂದರು.ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ವೈ.ಎಚ್. ರವಿಚಂದ್ರ ಮಾತನಾಡಿ, ಕಸಾಪುರದ ದಲಿತ ಯುವಕ ಸಿಂಹಾದ್ರಿ ಕೊಲೆ ಖಂಡನೀಯ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಆತನ ತಾಯಿ ಅನ್ನಪೂರ್ಣಮ್ಮ ದಿಕ್ಕು ತೋಚಿದಂತಾಗಿದ್ದಾರೆ. ಇಂತಹ ಸ್ಥಿತಿಯಲ್ಲೂ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಮೃತನ ಮನೆಗೆ ಹೋಗಿ ಆತನ ತಾಯಿಗೆ ಸಾಂತ್ವನ ಹೇಳಿ, ಪರಿಹಾರ ನೀಡುವ ಪ್ರಯತ್ನ ಮಾಡಲಿಲ್ಲ. ಕೂಡಲೇ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಭೈರಣ್ಣ, ಎಚ್.ಎಂ. ರವೀಶಯ್ಯ, ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು, ಕಾರ್ಯದರ್ಶಿ ಕೆ. ವೇದಮೂರ್ತಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ನಗರ ಅಧ್ಯಕ್ಷ ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವಸಂತಮ್ಮ, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಂಜನಮೂರ್ತಿ, ಶಿವರಾಜ್, ಜಗದೀಶ್, ಕಾರ್ಯದರ್ಶಿ ಸಿದ್ಧಗಂಗಯ್ಯ, ನಗರ ಅಧ್ಯಕ್ಷ ನಾಗರಾಜು, ಮುಖಂಡರಾದ ಹೊಳಕಲ್ಲು ಆಂಜನಪ್ಪ, ನರಸಿಂಹಮೂರ್ತಿ, ವೆಂಕಟೇಶ್, ವಿ. ಪ್ರತಾಪ್, ನವೀನ್‌ಕುಮಾರ್, ಬಿ.ಹೆಚ್. ಗಂಗಾಧರ್, ಜಗದೀಶ್, ವರದಯ್ಯ, ಧನಂಜಯ್, ಶಿವರಾಜ್, ಬಂಬೂ ಮೋಹನ್, ಹನುಮಂತರಾಜು, ಗಂಗೇಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಸಜ್ಜಿತ ಪ್ರಜಾಸೌಧವಿದ್ದರೂ ಜನರಿಗಿಲ್ಲ ಸರ್ಕಾರಿ ಸೇವೆ
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಶಾಸಕ ಅಲ್ಲಂಪ್ರಭು