ಜಿಲ್ಲೆಯ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ನೇರ ಸ್ಪರ್ಧೆ: ಸಂಸದ ರಾಘವೇಂದ್ರ

KannadaprabhaNewsNetwork |  
Published : Mar 10, 2024, 01:31 AM IST
ಪೋಟೋ: 9ಎಸ್‌ಎಂಜಿಕೆಪಿ03: ಸಂಸದ ಬಿ.ವೈ.ರಾಘವೇಂದ್ರ  | Kannada Prabha

ಸಾರಾಂಶ

ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳ ಜತೆಗೆ ರಾಷ್ಟ್ರೀಯ ವಿಚಾರಗಳ ಇಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸುತ್ತೇವೆ. ನಮ್ಮ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ನಮ್ಮ ಶಕ್ತಿ ತೋರಿಸಲಿದ್ದಾರೆ. ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳ ಜತೆಗೆ ರಾಷ್ಟ್ರೀಯ ವಿಚಾರಗಳ ಇಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸುತ್ತೇವೆ. ನಮ್ಮ ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ನಮ್ಮ ಶಕ್ತಿ ತೋರಿಸಲಿದ್ದಾರೆ. ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಎಲ್ಲ ಚುನಾವಣೆಗಳು ನೇರ ಸ್ಪರ್ಧೆ ಎದುರಿಸಿದೆ. ಎಸ್.ಬಂಗಾರಪ್ಪ ಅವರು ಸ್ಪರ್ಧಿಸಿದಾಗಲೂ ನೇರ ಸ್ಪರ್ಧೆ ಇತ್ತು. ಯಡಿಯೂರಪ್ಪನವರು ಸ್ಪರ್ಧಿಸಿದಾಗ ಮಾತ್ರ ತ್ರಿಕೋನ ಸ್ಪರ್ಧೆ ಇತ್ತು. ಎಲ್ಲ ಸವಾಲುಗಳನ್ನು ಬಿಜೆಪಿ ಎದುರಿಸಿದೆ. ಈ ಬಾರಿಯೂ ಎದುರಿಸುತ್ತೇವೆ. ಒಳ್ಳೆಯ ವಾತಾವರಣ ಇದೆ. ಈ ವಾತಾವರಣವನ್ನು ಮತಗಳನ್ನಾಗಿ ಪರಿವರ್ತಿಸುತ್ತೇವೆ. ಮೋದಿ ಅಭಿವೃದ್ಧಿ ಕೆಲಸ ಇಟ್ಟುಕೊಂಡು ಮತ ಕೇಳುತ್ತೇವೆ. ಮೋದಿ ಅವರ ಬಗ್ಗೆ ಗೌರವ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕವಷ್ಟೇ ಎಂದರು.

ಯುವಕರಿಗೆ, ರೈತರಿಗೆ, ಮಹಿಳೆಯರಿಗೆ, ಮತದಾರರಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಈ ಬಾರಿ ಮತ್ತೊಮ್ಮೆ ಹೆಚ್ಚಿನ ಅಂತರದಿಂದ ಬಿಜೆಪಿ ಗೆಲ್ಲುತ್ತದೆ. ಕುಮಾರ್ ಬಂಗಾರಪ್ಪ ಅವರು ಇಷ್ಟು ದಿನ ವೈಯಕ್ತಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈಗ ಚುನಾವಣೆ ಬಂದಿದೆ. ಈ ಸಂದರ್ಭ ತಮ್ಮನ್ನು ತಾವು ಚುನಾವಣೆಗಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

- - -

ಕೋಟ್‌ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕೊಡುಗೆಯಾಗಿ ಉಜ್ವಲ ಯೋಜನೆ ಸಿಲಿಂಡರ್ ಬೆಲೆ ₹100 ರು. ಕಡಿಮೆ ಆಗಿದೆ. ಜೊತೆಗೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ

- ಬಿ.ವೈ.ರಾಘವೇಂದ್ರ, ಸಂಸದ

- - -

-9ಎಸ್‌ಎಂಜಿಕೆಪಿ03: ಬಿ.ವೈ.ರಾಘವೇಂದ್ರ, ಸಂಸದ

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್