ಕನ್ನಡಪ್ರಭ ವಾರ್ತೆ ಯಾದಗಿರಿ
ಗ್ರಾಮ ಚಲೋ ಅಭಿಯಾನವು ಫೆಬ್ರವರಿ 9, 10, 11 ಮೂರು ದಿನಗಳ ಕಾಲ ನಡೆಯಲಿದ್ದು, ಪ್ರವಾಸಿ ಕಾರ್ಯಕರ್ತರನ್ನು ಜೋಡಣೆ ಮಾಡಿ ಪ್ರತಿ ಗ್ರಾಮಕ್ಕೆ 24 ತಾಸುಗಳ ಕಾಲ ವಾಸ್ತವ್ಯ ಸಮೇತ ಹೋಗುವ ಉದ್ದೇಶದಿಂದ ಗುರುಮಠಕಲ್ ಮಂಡಲದ ಸಂಚಾಲಕ, ಸಹ-ಸಂಚಾಲಕ ಹಾಗೂ ಪ್ರಮುಖರ ಸಭೆಯನ್ನು ಯಾದಗಿರಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆಸಲಾಯಿತು.
ಬಿಜೆಪಿ ಕಳೆದ 10ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮನೆ, ಮನೆಗೆ ಮುಟ್ಟಿಸುವ ಮೂಲಕ ಪ್ರತಿಯೊಬ್ಬರ ಮನ ಮನಕ್ಕೆ ಮುಟ್ಟಿಸುವ ಗ್ರಾಮ ಚಲೋ ಅಭಿಯಾನವನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ವಾರ್ಡ್‌ಗಳಲ್ಲಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕು. ಲಲಿತಾ ಅನಪುರ ಹೇಳಿದರು.ಅಭಿಯಾನದ ಕುರಿತು ವಿಭಾಗ ಸಂಚಾಲಕ ಅಶೋಕ್ ಬಾಗ್ಲಿಯವರು ಮಾತನಾಡಿ, ಮನೆ ಮನೆಗೆ ಮೋದಿ ಸರ್ಕಾರದ ಸಾಧನೆಯ ಪ್ರಸಾರ, ಮೋದಿ ಗ್ಯಾರಂಟಿಯ ಫಲಾನುಭವಿಗಳನ್ನು ತಲುಪುವ ಮಹಾಭಿಯಾನ, ಬೂತ್ ಸಶಕ್ತೀಕರಣದ ಜತೆಗೆ ಕಾರ್ಯಕರ್ತರಿಗೆ ಬಲ ತುಂಬುವುದು, ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಜನಜಾಗೃತಿ ಮೂಡಿಸುವುದು, ಮನೆಮನೆಗೆ ಬಿಜೆಪಿ, ಮನಮನಕ್ಕೆ ಮೋದಿ ಎನ್ನುವ ನಿಟ್ಟಿನಲ್ಲಿ ಗ್ರಾಮ ಚಲೋ ಅಭಿಯಾನ ಯಶಸ್ವಿಯಾಗಲು ಎಲ್ಲರೂ ಸೇರಿ ಕಾರ್ಯೋನ್ಮುಖರಾಗಬೇಕು ಎಂದರು.