ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರೋತ್ಥಾನ ನಾಲ್ಕನೇ ಹಂತದ 30 ಕೋಟಿ ಅನುದಾನದ ಮೂಲಕ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಈ ಹಿಂದಿನ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದು ನಗರಸಭಾ ಮಾಜಿ ಅಧ್ಯಕ್ಷ ಸಿ ಗಿರೀಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ ನೀಡಿದ 30 ಕೋಟಿ ರೂಪಾಯಿ ನಗರಾದ್ಯಂತ ವಿವಿಧ ವಾರ್ಡುಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಅಂದಿನ ಅನುದಾನ ಹಣವನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು. 15ನೇ ಹಣಕಾಸು ಮತ್ತು ಎಸ್ಎಫ್ ಸಿ ಯೋಜನೆಯ ಅನುದಾನ 1.10 ಕೋಟಿ ರೂಪಾಯಿ ಅನುದಾನವನ್ನು ವಾರ್ಡ್ ವಾರ್ ಸಮನಾಗಿ ಹಂಚದೇ ಏಳು 7 -8 ವಾರ್ಡುಗಳನ್ನು ಕೈ ಬಿಟ್ಟು ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ಇತ್ತೀಚಿಗೆ ನಡೆದ ಜಿಲ್ಲಾಧಿಕಾರಿ ಸತ್ಯಭಾಮ ಅಧ್ಯಕ್ಷತೆಯಲ್ಲಿ ನಡೆದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಗಮನ ಸೆಳೆದರು .ಯಾವುದೇ ಪ್ರಯೋಜನವಾಗಿಲ್ಲ ಈ ಯೋಜನೆಗಳ ಮೂಲಕ ಬೇನಾಮಿ ಗುತ್ತಿಗೆದಾರರಿಂದ ಕಳಪೆ ಕಾಮಗಾರಿಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತಿದೆ .ಎಷ್ಟೋ ಕಾಮಗಾರಿಗಳಿಗೆ ಸ್ಥಳ ತೋರಿಸದೆ ಅಧಿಕಾರಿಗಳು ದಿನಗಳನ್ನು ಮುಂದೊಡುತ್ತಿದ್ದಾರೆ .ನಗರದಲ್ಲಿ ಹಾದು ಹೋಗಿರುವ ಸಂತೆ ಮೈದಾನದ ಬಳಿಯ ಹುಳಿಯಾರು ರಸ್ತೆ ಕಾಮಗಾರಿಯನ್ನ ಹಳೆ ಜಿಲ್ಲೆ ಹೊಸ ಬಿಲ್ಲು ಎಂಬಂತೆ ಮಾಡಲಾಗುತ್ತಿದೆ. ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಹಣಕಾಸು ಯೋಜನೆಗಳ ಹಣ ದುರುಪಯೋಗವಾಗುತ್ತಿದೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ .ಜೆಡಿಎಸ್‌ನಿಂದ ಗೆದ್ದು ಬಂದ ಸದಸ್ಯರನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡಿರುವ ಶಾಸಕ ಶಿವಲಿಂಗೇಗೌಡರು ಈ ಸದಸ್ಯರಿಗೆ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಪಕ್ಷದ ಬಿ ಫಾರಂನಿಂದ ಗೆಲ್ಲಿಸಿಕೊಂಡು ಬರಲಿ ಎಂದು ಸವಾಲ್ ಹಾಕುವ ಮೂಲಕ ವಾರ್ಡುಗಳ ಅಭಿವೃದ್ಧಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದಲ್ಲಿ ಅನಿರ್ದಿಷ್ಟ ಅವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು .ಸದಸ್ಯ ಈಶ್ವರಪ್ಪ ಮಾತನಾಡಿ, ಶಾಸಕ ಶಿವಲಿಂಗೇಗೌಡರು ನಗರಸಭೆಯ ಸಭೆಗಳಲ್ಲಿ ಸದಸ್ಯರ ಅಭಿಪ್ರಾಯ ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸುತ್ತಿದ್ದಾರೆ ಇತ್ತೀಚಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಅಗೌರವವಾಗಿ ನಡೆದುಕೊಳ್ಳುತ್ತ ಸಭೆಗೆ ಅವಮಾನ ಮಾಡಿದ್ದಾರೆ .ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಶಾಸಕರು ತಾರತಮ್ಯ ವ್ಯಸಗುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ನಗರ ಸಭೆಯನ್ನು ಶಾಸಕರೇ ಅಶಾಂತಿಯ ತೋಟವನ್ನಾಗಿ ಮಾಡಲು ಹೊರಟಿದ್ದಾರೆ. ಅಧಿಕಾರಿಗಳ ಕಾರ್ಯವನ್ನು ಸಭೆಯಲ್ಲಿ ಮುಟುಕು ಮಾಡುವ ಶಾಸಕರು ತಮ್ಮ ಮಾತಿನ ಮೂಲಕವೇ ಅಧಿಕಾರ ಹೇರುತ್ತಿದ್ದಾರೆ ಅಧಿಕಾರಿಗಳ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಇವರ ಕಾರ್ಯವೈಖರಿ ಖಂಡನೀಯವಾಗಿದೆ .ಮುಂದಿನ ದಿನಗಳಲ್ಲಿ ಶಾಸಕರು ಸಭೆಯ ಘನತೆ ಕಾಪಾಡುವಲ್ಲಿ ಗಮನ ಹರಿಸಬೇಕು ಎಂದರು. ಈ ವೇಳೆ ನಗರಸಭಾ ಸದಸ್ಯರಾದ ಮೇಲ್ಗಿರಿ ಗೌಡ ಭಾಸ್ಕರ್ ಮುಖಂಡರಾದ ರಮೇಶ್ ಪ್ರವೀಣ್, ರಮೇಶ್ ನಾಯ್ಡು, ಪುಟ್ಟರಾಜು ,ಮಂಜು ಇದ್ದರು.