ರಾಮಮಂದಿರ ಕನಸು ನನಸು ಮಾಡಿದ ಬಿಜೆಪಿ

KannadaprabhaNewsNetwork |  
Published : May 05, 2024, 02:06 AM IST
(4ಎನ್.ಆರ್.ಡಿ3 ಮತಯಾಚನೆ ಪ್ರಚಾರ ಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯವರು ಮಾತನಾಡುತ್ತಿದ್ದಾರೆ.) | Kannada Prabha

ಸಾರಾಂಶ

ಸ್ವಾರ್ಥ ಬಿಟ್ಟು ದೇಶದ ಉಳಿವಿಗಾಗಿ ಬಿಜೆಪಿಗೆ ಮತದಾರರು ಮತ ಹಾಕಬೇಕು

ನರಗುಂದ: ಶ್ರೀರಾಮ ಮಂದಿರ ನಿರ್ಮಾಣದ 5 ಶತಮಾನದ ಹಿಂದೂಗಳ ಕನಸನ್ನು ಬಿಜೆಪಿ ನನಸು ಮಾಡಿದೆ. ಒಬ್ಬ ಕಾಂಗ್ರೆಸ್‌ ನಾಯಕ ಮಂದಿರ ಉದ್ಘಾಟನೆಗೆ ಬರಲಿಲ್ಲ. ಕಾಂಗ್ರೆಸ್‌ ಒಂದೇ ಕೋಮಿನ ಜನರಿಗೆ ಸೀಮಿತವಾಗಿದೆ. ಇಂತಹ ಕಾಂಗ್ರೆಸ್‌ ಪಕ್ಷವನ್ನು ಊರಿನಿಂದಾಚೆ ಹಾಕಬೇಕಾಗಿದೆ ಎಂದು ಸಂಸದ ಹಾಗೂ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಯುವಕರಿಗೆ ಕರೆ ನೀಡಿದರು.

ಅವರು ಪಟ್ಟಣದ ಗಾಂಧಿ ಚೌಕ್‌ನಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿ, ಆಸೆ ಆಮಿಷಗಳನ್ನು ಬೇರೆ ಚುನಾವಣೆಯಲ್ಲಿ ಇಟ್ಟುಕೊಳ್ಳೋಣ. ಸ್ವಾರ್ಥ ಬಿಟ್ಟು ದೇಶದ ಉಳಿವಿಗಾಗಿ ಬಿಜೆಪಿಗೆ ಮತದಾರರು ಮತ ಹಾಕಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ನರೇಂದ್ರ ಮೋದಿ ಪ್ರಪಂಚಕ್ಕೆ ಭಾರತದ ಶಕ್ತಿ ತೋರಿಸಿದ್ದಾರೆ. ದೇಶದ ಜನತೆ ಶ್ರೀಮಂತರನ್ನಾಗಿ ಮಾಡುವುದು ಮೋದಿ ಉದ್ದೇಶವಾಗಿದೆ. ರಾಷ್ಟ್ರೀಯ ಹೆದ್ದಾರಿ, ಗ್ರಾಮ ಸಡಕ್, ರೇಲ್ವೆ ಯೋಜನೆ, ಸೇತುವೆ, ಬಾದಾಮಿ ಪ್ರವಾಸಿತಾಣಗಳ ಅಭಿವೃದ್ಧಿ ಮಾಡಿದ್ದಾರೆ. ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮೋದಿ ಉದ್ದೇಶವಾಗಿದೆ ಎಂದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಸುಳ್ಳಿನ ಪ್ಯಾಕ್ಟರಿ ಇದಂತೆ, ಅವರ ಕೊನೆಯ ಅಸ್ತ್ರವೇ ಅಪಪ್ರಚಾರ. ಬಿಜೆಪಿಯ 10 ವರ್ಷದ ಆಡಳಿತದಲ್ಲಿ ಭಾರತ ಆರ್ಥಿಕತೆಯಲ್ಲಿ ಸದೃಢವಾಗಿದೆ. ಪಂಚಾಯತಿ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಯಾರಿಗಾದರೂ ಮತ ನೀಡಿ ಆದರೆ ಲೋಕಸಭೆ ಚುನಾವಣೆಯಲ್ಲಿ ಭಾರತಾಂಬೆ ಉನ್ನತಿಗಾಗಿ ಬಿಜೆಪಿಗೆ ಮತ ನೀಡೋಣ. ಸಿದ್ಧರಾಮಯ್ಯನ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ. ಇದೊಂದು ಪಿಕ್ ಪಾಕೇಟ್‌ ಸರ್ಕಾರವಾಗಿದೆ. ಚುನಾವಣೆ ನಂತರ ಕರ್ನಾಟಕ ರಾಜ್ಯದಲ್ಲಿ ಮಹಾರಾಷ್ಟ್ರ ಮಾದರಿ ಅಥವಾ ಮಧ್ಯಂತರ ಚುನಾವಣೆ ನಡೆಯುವ ಸಂಭವವಿದೆ ಎಂದರು.

ಸಂಸದ ತೇಜಸ್ವಿ ಸೂರ್ಯ, ಸಂಸದ ಪಿ.ಸಿ. ಗದ್ದಿಗೌಡ್ರ, ಶಾಸಕ ಸಿ.ಸಿ. ಪಾಟೀಲ ಹಾಗೂ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದಲ್ಲಿ ರೋಡ ಶೋ ಜರುಗಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ, ಬಿ.ಬಿ. ಐನಾಪೂರ, ಎಸ್ .ಬಿ. ಕರಿಗೌಡ್ರ, ಬಿ.ಕೆ. ಗುಜಮಾಗಡಿ, ಎಸ್.ಜಿ.ಮುತ್ತವಾಡ, ವಾಸು ಜೋಗಣ್ಣವರ, ಪ್ರಕಾಶ ಹಾದಿಮನಿ, ಎಸ್.ಆರ್ .ಪಾಟೀಲ, ಚಂದ್ರಶೇಖರ ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಮಹೇಶ್ವರಯ್ಯ ಸುರೇಬಾನ, ಉಮೇಶಗೌಡ ಪಾಟೀಲ, ಮಹೇಶಗೌಡ ಪಾಟೀಲ, ಮಲ್ಲಪ್ಪ ಮೇಟಿ, ಬಿಜೆಪಿ ಪುರಸಭೆ ಸದಸ್ಯರು, ಬಾಬುಗೌಡ ತಿಮ್ಮನಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಭಾವನಾ ಪಾಟೀಲ, ಸುನೀಲ ಕುಷ್ಟಗಿ, ಅನಿಲ ಧರಿಯಣ್ಣವರ, ಮಂಜು ಮೆಣಸಗಿ, ನಾಗರಾಜ ನೆಗಳೂರ, ಯುವ ಮೋರ್ಚಾ ವಿಠ್ಠಲ ಹವಾಲ್ದಾರ, ಎಸ್ಸಿ ಮೋರ್ಚಾ ಅಧ್ಯಕ್ಷ ಪ್ರವೀಣ ವಡ್ಡರ, ಸಿದ್ದೇಶ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ