ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ 47ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ
ಬಿಜೆಪಿ ರಾಜಕೀಯ ತಂತ್ರಗಾರಿಕೆ, ಹೊಂದಾಣಿಕೆ ಮಾಡಿಕೊಂಡಿವೆ. ಹೊರತು ರಾಷ್ಟ್ರೀಯ ಹಿತಾಸಕ್ತಿ ಎಂದಿಗೂ ಕಡೆಗಣಿಸಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಪ್ರತಿಪಾದಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ 47ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿ ಒಂದು ಕಾಲದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಚಳುವಳಿಯಾಗಿದ್ದ ಪಕ್ಷ ಒಂದು ಕುಟುಂಬ ಹಿತಾಸಕ್ತಿಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಲಾಯಿತು. ಆಗ ಬಿಜೆಪಿ ನೇತೃತ್ವದ ರಾಷ್ಟ್ರೀಯ ಚಳುವಳಿ ಉದ್ಬವಿಸಿತ್ತು. ಬಿಜೆಪಿ ರಾಜಕೀಯ ತಂತ್ರಗಾರಿಕೆ ಮತ್ತು ಹೊಂದಾಣಿಕೆ ಮಾಡಿಕೊಂಡಿದೆ. ಆದರೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಎಂದಿಗೂ ಕಡೆಗಣಿಸಿಲ್ಲ. ಪಿಡಿಪಿ, ಡಿಎಂಕೆ, ಆಸ್ಸಾಂ ಗಡಿ ಪರಿಷತ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಕೆಲವರು ಟೀಕಿಸುತ್ತಾರೆ.ಬಿಜೆಪಿ ಯಾರನ್ನೂ ರಾಜಕೀಯ ಅಸ್ಪೃಶ್ಯರು ಎಂದು ಪರಿಗಣಿಸಿಲ್ಲ. ಸಾಮಾಜಿಕ ಅಸ್ಪೃಶ್ಯತೆ ಹಾಗೂ ರಾಜಕೀಯ ಅಸ್ಪೃಶ್ಯತೆ ಮೇಲೂ ನಂಬಿಕೆ ಇಟ್ಟುಕೊಂಡಿಲ್ಲ. ರಾಷ್ಟ್ರೀಯ ಉದ್ದೇಶದ ಸಾಧನೆಗೆ ಮತ್ತು ತಂತ್ರಗಾರಿಕೆ ಭಾಗವಾಗಿ ಎಲ್ಲರೊಂದಿಗೆ ಕೈಜೋಡಿಸಿದ್ದೇವೆ. ಆದರೆ, ಬಿಜೆಪಿ ಗುರಿ, ಉದ್ದೇಶ ರಾಷ್ಟ್ರೀಯ ಹಿತವಾಗಿದೆ ಎಂದು ಹೇಳಿದರು.
ಕಮಲದ ಚಿಹ್ನೆಯಡಿ ಉದಯಿಸಿದ ಭಾಜಪ, ಜಗತ್ತಿನ ಎದುರು ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅನೇಕ ಸವಾಲು ಹಾಗೂ ಏಳು ಬೀಳಿನ ನಡುವೆಯೂ ಎದೆ ಗುಂದದೇ ರಾಷ್ಟ್ರದ ಏಕೀಕರಣಕ್ಕೆ ದುಡಿಯುತ್ತಿದೆ. ಆಟಲ್‌ಜೀ ಹಾಗೂ ಅಡ್ವಾಣಿ ಜೀ ಸಾರಥ್ಯದಲ್ಲಿ ಮುನ್ನೆಲೆಗೆ ಬಂದ ಪಕ್ಷ ಆರಂಭದಲ್ಲಿ ಬಹಳಷ್ಟು ಸಂಕಷ್ಟ ಎದುರಿಸಿತ್ತು. 1984ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನ ಬಿಜೆಪಿ ಪಡೆದುಕೊಂಡಿತು. ಕಾಲಕ್ರಮೇಣ ನಾಲ್ಕೈದು ವರ್ಷಗಳಲ್ಲೇ 1989ರಲ್ಲಿ ಚುನಾವಣೆ ಯಲ್ಲಿ 83ಸ್ಥಾನ ವಿಜಯ ಸಾಧಿಸಿ, ನೂರರ ಗಡಿ ದಾಟುವ ಸಾಮರ್ಥ್ಯ ಬೆಳೆಸಿಕೊಂಡಿತು ಎಂದರು.
ಹಿಂದೆ ಬಿಜೆಪಿ ಅನೇಕ ಸವಾಲುಗಳನ್ನು ನಡುವೆ ಆಟಲ್‌ಜೀ ನೇತೃತ್ವದಲ್ಲಿ 1999ರಲ್ಲಿ ಆರು ವರ್ಷಗಳ ಕಾಲ ಅಧಿಕಾರ ನಡೆಸಿತು. ಈ ಆಡಳಿತ ವೈಖರಿಯಲ್ಲಿ ಕಳಂಕ ರಹಿತ, ಉತ್ತಮ ಸರ್ಕಾರ ಎಂಬುದನ್ನು ದೇಶ ಹಾಗೂ ಜಗತ್ತಿಗೆ ತಿಳಿಸಿ ಕೊಟ್ಟರು. ಸುವರ್ಣ ಚತುಶ್ಥತ ಹೆದ್ದಾರಿ ನಿರ್ಮಿಸುವ ಮೂಲಕ ಅಭಿವೃದ್ಧಿ ಮೈಲಿಗಲ್ಲನ್ನು ಕೊಡುಗೆ ನೀಡಿದವರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ದೇಶದ ಅಭಿವೃದ್ದಿ, ಏಕತೆಗೆ ದುಡಿದಿರುವ ಪಕ್ಷ ಬಿಜೆಪಿ. ಆ ನಿಟ್ಟಿನಲ್ಲಿ ಭಾಜಪ ಉಗಮದ ಕಾರಣಕರ್ತರಾದ ಪ್ರತಿ ನಾಯಕರು ಇಂದಿನ ರಾಜಕೀಯ ಮುಖಂಡರಿಗೆ ಸ್ಪೂರ್ತಿಯಾಗಿದ್ದಾರೆ. ಆ ನಿಟ್ಟಿನಲ್ಲಿ ದೇಶದ ಹಿತ ಕಾಯುವ ಪಕ್ಷದಲ್ಲಿ ನಾವೆಲ್ಲರೂ ಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು
-- ಬಾಕ್ಸ್ --
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎರಡು ದಿನ ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಬಾವುಟ ಹಾರಾಟ ಮಾಡುವುದು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರನ್ನು ಭೇಟಿ ಮಾಡುವುದು ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.-- ಬಾಕ್ಸ್ --
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಉಪ ಚುನಾವಣೆ ನಡೆಯುತ್ತಿರುವ ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ
ಜನಾಕ್ರೋಶ. ಅಸಹನೆ ಎದ್ದುಕಾಣುತ್ತಿದ್ದು, ಅದು ಮತಗಳಾಗಿ ಪರಿವರ್ತನೆಯಾದರೆ ಬಿಜೆಪಿ ಎಲ್ಲ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ,ರವಿ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದು, 2019 ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿಗೆ ಹೆಚ್ಚಿನ ಮತ ತಂದುಕೊಟ್ಟಿತ್ತು. ಈ ಬಾರಿ ಕಾರ್ಯಕರ್ತರಲ್ಲಿ ಉತ್ಸಾಹ ಚೆನ್ನಾಗಿದೆ. ಜನರು ಸಹ ಬಿಜೆಪಿ ಪರವಾಗಿ ಮಾತನಾಡುತ್ತಿದ್ದಾರೆ. ಎಲ್ಲವೂ ಸಾರ್ವತ್ರಿಕವಾಗಿ ಇದ್ದರೆ ದಾವಣಗೆರೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.ಬಾಗಲಕೋಟೆ ಕ್ಷೇತ್ರದಲ್ಲಿ ಹಲವು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಅಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದರು.ಇಗಿನ ಕಾಂಗ್ರೆಸ್ ನೆಹರು, ಗಾಂಧಿ ವಿಚಾರಧಾರೆಗೆ ವಿರುದ್ಧ
ಕಾಂಗ್ರೆಸ್ ತನ್ನದೇ ಯೋಜನೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ನೆಹರು ಅವರ ತ್ರಿಭಾಷಾ ಸೂತ್ರಕ್ಕೆ ಇಂದಿರಾ ಗಾಂಧಿ ಅವರು ನೀರೆರೆದರು. ನೆಹರು ಮತ್ತು ಗಾಂಧೀಜಿ ಅವರ ವಿಚಾರಕ್ಕೆ ಇಂದಿನ ಕಾಂಗ್ರೆಸ್ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಹರಿಹಾಯ್ದರು.ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಪ್ರಾದೇಶಿಕ ಭಾಷೆಗಳಿಗೆ ಶಕ್ತಿ ತುಂಬುವ ಕೆಲಸ ರಾಷ್ಟ್ರೀಯ ಶಿಕ್ಷಣ ನೀತಿ ಮಾಡುತ್ತಿದೆ. ಆದರೆ, ಇನ್ನೊಂದು ಭಾಷೆ ವಿರುದ್ಧ ಇಲ್ಲ, ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಮೆರೆಸಿ ಉಳಿದ ಭಾಷೆಯನ್ನು ಕಲಿಯುವುದಕ್ಕೆ ಅವಕಾಶ ಮಾಡಿಕೊಡಬೇಕು. ಕನ್ನಡ ಭಾಷೆ ಜಾಗದಲ್ಲಿ ಇಂಗ್ಲಿಷ್ ಮೆರೆಸುತ್ತಿರುವುದು ದುರ್ಧೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.