ಕನ್ನಡಪ್ರಭ ವಾರ್ತೆ ಐಗಳಿ ಬಿಜೆಪಿ ಅಧಿಕಾರಕ್ಕೆ ಬಂದ 10 ವರ್ಷಗಳಲ್ಲಿ ದೇಶಕ್ಕೆ ಏನು ಮಾಡಿಲ್ಲ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಲೇ ಕಾಲ ಕಳೆದರು. ಅವರು ಅಧಿಕಾರದಲ್ಲಿದ್ದಾಗ ನೀಡಿದ ಕೊಡುಗೆ ಏನೆಂದು ಆತ್ಮಾವಲೋಕನ ಮಾಡಿಕೊಂಡು ಇಂದು ಮತ ಚಲಾಯಿಸಬೇಕಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಉದ್ಯಮಿ ಸದಾಶಿವ ಬುಟಾಳಿ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆಯವರ ಸಾಧನೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಶೂನ್ಯವಾಗಿದೆ. ಈಗ ಮೋದಿ ಹೆಸರಿನಲ್ಲಿ ಪ್ರಚಾರ ನಡೆಸಿ ಹೆಸರುವಾಸಿಯಾಗುತ್ತಿದ್ದಾರೆ ವಿನಃ ಅವರದ್ದೇನು ಇಲ್ಲ ಎಂದು ಲೇವಡಿ ಮಾಡಿದರು.
ಈ ವೇಳೆ ಕೆಪಿಸಿಸಿ ಸದಸ್ಯ ಚಿದಾನಂದ ಮುಕಣಿ, ವಕೀಲ ಧರೆಪ್ಪ ಠಕ್ಕಣ್ಣವರ, ಸುಶೀಲಕುಮಾರ ಪತ್ತಾರ ಮಾತನಾಡಿದರು. ಬಿ.ಬಿ.ಬಿಸಲಾಪುರ, ಮಹಾದೇವ ಗಲಗಲಿ, ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ, ಶ್ರೀಶೈಲ ಗಸ್ತಿ, ಮಲ್ಲಪ್ಪ ಅವಟಿ, ವಿವೇಕ ಯಲಗುದ್ದರಿ, ಮುರಗೇಪ್ಪ ಬಾವಿ, ಅಶೋಕ ಸನಾಳ, ಶ್ರೀಶೈಲ ದುಲಾರಿ, ಬಸಗೊಂಡ ಮುಗ್ಗನವರ, ಮೋಹನ ದೊಡಮನಿ, ಜಡೆಪ್ಪ ಕುಂಬಾರ, ರಾಹುಲ ಮಾಚಕನೂರ, ಅಶೋಕ ಚಿಟೆ, ಮಲ್ಲಪ್ಪ ಬ್ಯಾಳಿಗೌಡರ ಸೇರಿದಂತೆ ಹಲವರು ಇದ್ದರು.