ಬಿಜೆಪಿ ದಲಿತ, ಕಾರ್ಮಿಕ ವಿರೋಧಿ

KannadaprabhaNewsNetwork |  
Published : Jul 22, 2026, 03:00 AM IST
ಮದಮೆದಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆವಿದ್ಯಾರ್ಥಿಗಳು, ರೈತರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಬಿಜೆಪಿ ದಲಿತ ವಿರೋಧಿ, ಕಾರ್ಮಿಕ ವಿರೋಧಿ. ಮಹಿಳಾ ವಿರೋಧಿಗಳು ಅವರು ಮನುವಾದಿಗಳು ದಲಿತ ಕಾರ್ಮಿಕ ವಿರೋಧಿ ಜನವಿರೋಧಿ ಕಾನೂನು ತಂದಿದ್ದಾರೆ. ಆದರೆ, ಏನು ಮಾಡೋದು ಜನ ಯಾಮಾರಿ ಅವರಿಗೆ ಮತ ಹಾಕ್ತಾನೆ ಇರ್ತಾರೆ, ಇದು ನಮ್ಮ ದೇಶದ ದುರಂತ ಎಂದು ಜಲಸಂಪನ್ಮೂಲ ಖಾತೆ ಸಚಿವ ರಾಮಲಿಂಗಾರಡ್ಡಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾರ್ಥಿಗಳು, ರೈತರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಬಿಜೆಪಿ ದಲಿತ ವಿರೋಧಿ, ಕಾರ್ಮಿಕ ವಿರೋಧಿ. ಮಹಿಳಾ ವಿರೋಧಿಗಳು ಅವರು ಮನುವಾದಿಗಳು ದಲಿತ ಕಾರ್ಮಿಕ ವಿರೋಧಿ ಜನವಿರೋಧಿ ಕಾನೂನು ತಂದಿದ್ದಾರೆ. ಆದರೆ, ಏನು ಮಾಡೋದು ಜನ ಯಾಮಾರಿ ಅವರಿಗೆ ಮತ ಹಾಕ್ತಾನೆ ಇರ್ತಾರೆ, ಇದು ನಮ್ಮ ದೇಶದ ದುರಂತ ಎಂದು ಜಲಸಂಪನ್ಮೂಲ ಖಾತೆ ಸಚಿವ ರಾಮಲಿಂಗಾರಡ್ಡಿ ಕಿಡಿಕಾರಿದರು.

ನಗರದಲ್ಲಿ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಅಶ್ರುವಾಯು ಪ್ರಯೋಗದ ಕುರಿತು ಪ್ರತಿಕ್ರಿಯೆ ನೀಡಿ, ಈ ವಿಷಯದಲ್ಲಿ ಕೇಂದ್ರ ಬಿಜೆಪಿ ಅವರದ್ದು ಸರ್ವಾಧಿಕಾರಿ ಧೋರಣೆಯಲ್ಲ ಅವರು ಸರ್ವಾಧಿಕಾರಿ ಆಗಿಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ. ಎಲ್ಲಾ ಅಂಗಾಂಗಗಳೂ ವೈಫಲ್ಯವಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಮಾಡಿದ್ದಾರೆ. ಹಿಂದೆ 1 ವರ್ಷಕ್ಕೂ ಹೆಚ್ಚು ಕಾಲ ರೈತರು ಹೋರಾಟ ಮಾಡಿದರು. 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದರು. ಒಬ್ಬ ಸಣ್ಣ ಮಂತ್ರಿಯೂ ಮಾತನಾಡಿಸಲಿಲ್ಲ. ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ. ಅವರು ಸಾರ್ವಜನಿಕರ ಕೆಲಸ ಮಾಡಲ್ಲ. ನರೇಂದ್ರ ಮೋದಿ ಆದಿಯಾಗಿ ಯಾರೂ ಕೆಲಸ ಮಾಡಲ್ಲ. ವಿದ್ಯಾರ್ಥಿಗಳು ಅವರು ಹೇಳಿದಂತೆ ಕೇಳಬೇಕು. ವೋಟ್ ಹಾಕಬೇಕು ಅಷ್ಟೇ ಎಂದು ಹೇಳಿದರು.

ಜು.25ಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಜುಲೈ 25ಕ್ಕೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಸಚಿವ ಸಂಪುಟ ಕಗ್ಗಂಟು ಇದ್ದೇ ಇರುತ್ತದೆ. ಏಕೆಂದರೆ ಆಕಾಂಕ್ಷಿಗಳು ಜಾಸ್ತಿ ಅಲ್ವಾ. ಸಹಜವಾಗಿ ಕಗ್ಗಂಟು ಇರುತ್ತೆ. ಆದರೆ, ಎಲ್ಲದಕ್ಕೂ ಪರಿಹಾರ ಇದೆ ಅಲ್ವಾ. ಸಿಎಂ ದೆಹಲಿಗೆ ಹೋಗಿದಾರೆ ಜುಲೈ 25ಕ್ಕೆ ಆಗಬಹುದು. ನಿನ್ನೆ ಕ್ಯಾಬಿನೆಟ್‌ನಲ್ಲಿ ಸಿಎಂ ಹೇಳಿದಾರೆ. ಕ್ಲಿಯರೆನ್ಸ್ ಹಾಗೂ ಕ್ಲಾರಿಟಿ ಸಿಕ್ಕಿದ್ರೆ ಸಂಪುಟ ವಿಸ್ತರಣೆ ಮಾಡೋಣ ಅಂತ ಹೇಳಿದ್ದಾರೆ. ಹಿರಿಯರಿಗೂ ಹಾಗೂ ಹೊಸಬರಿಗೂ ಸಂಪುಟದಲ್ಲಿ ಅವಕಾಶವಿದೆ ಎಂದರು.

ನಾನು ಯಾವತ್ತೂ ಮಂತ್ರಿ ಮಾಡಿ ಅಂತಾನೂ ಕೇಳಿಲ್ಲ:

ತಮಗೆ ಕೊಟ್ಟಿರುವ ಖಾತೆ ಬಗ್ಗೆ ಮಾತನಾಡಿದ ಅವರು, ಖಾತೆ ಬಗ್ಗೆ ನಾನು ಮಾತನಾಡುವುದಿಲ್ಲ ನೀವು ಕೇಳಬೇಡಿ. ನಾನು ಆ ಬಗ್ಗೆ ಮಾತಾಡೋದೆ ಇಲ್ಲ. ವಿಸ್ತರಣೆ ವೇಳೆ ಬೇರೆ ಖಾತೆ ಕೇಳ್ತೀರಾ ಎಂಬ ಪ್ರಶ್ನೆಗೆ ನಾನು ಯಾವತ್ತೂ ಕೂಡ ಮಂತ್ರಿ ಮಾಡಿ ಅಂತಾನೂ ಕೇಳಿಲ್ಲ. ಆರು ಸಾರಿ ಆಗಿದ್ದೇನೆ. ಆದರೆ, ಯಾರನ್ನು ಯಾವತ್ತು ಮಂತ್ರಿ ಮಾಡಿ ಎಂದು ಕೇಳಿಲ್ಲ. ಖಾತೆನೂ ಕೇಳಲ್ಲ. ಆ ಬಗ್ಗೆ ನೀವು ಮಾತನಾಡಬೇಡಿ ಎಂದು ಹೇಳಿದರು.

ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಬೇಕಿದೆ:

ಆಲಮಟ್ಟಿ ಹಾಗೂ ನಾರಾಯಣಪುರ ಡ್ಯಾಮ್ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಲಿದ್ದೇನೆ. ಬೂದಿಹಾಳ ವೀರಾಪುರ ಎಡದಂಡೆ ಕಾಲುವೆ ವೀಕ್ಷಣೆ ಮಾಡುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗದ ನಿರೀಕ್ಷೆ ಇದೆ. ನಾನು ಸಿಎಂ ಅವರು ಕೇಂದ್ರ ಜಲಶಕ್ತಿ ಮಂತ್ರಿಗಳನ್ನ ಭೇಟಿ ಮಾಡಿದ್ದೇವೆ. ಅಕ್ಕಪಕ್ಕದ ರಾಜ್ಯಗಳು ನೀರಿನ ವ್ಯಾಜ್ಯವಾಗಿ ಜಗಳ ಮಾಡಿಕೊಂಡರೆ ಪರಿಹಾರ ಸಿಗಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಿಂದಿನ ಬಜೆಟ್‌ನಲ್ಲಿ ₹3 ಸಾವಿರ ಕೋಟಿ ಇಟ್ಟಿದ್ದಾರೆ. ಸಿಎಂ ಹಿಂದೆ ಇದೇ ಇಲಾಖೆ ನಿಭಾಯಿಸಿದ್ದಾರೆ. ಮೂರು ವರ್ಷದಲ್ಲಿ ಭೂಸ್ವಾಧೀನ ಮಾಡಲೇಬೇಕಿದೆ. ₹5 ಸಾವಿರ ಅಥವಾ ₹ 10 ಸಾವಿರ ಕೋಟಿ ಯಾವುದಕ್ಕೂ ಸಾಲಲ್ಲ. ಸಿಎಂ ಏನು ಮಾಡುತ್ತಾರೆ ನೋಡೋಣ. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಬೇಕಿದೆ ಎಂದರು.

ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವ ವಿಚಾರಲ್ಲಿ ಈಗಾಗಲೇ ರೈತರು ಸರ್ಕಾರದ ಪರಿಹಾರ ಹಣಕ್ಕೆ ಒಪ್ಪಿದ್ದಾರೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡುತ್ತೇವೆ ಎಂದಷ್ಟೇ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ
ರೈತ ವಿರೋಧ ನೀತಿ ಖಂಡಿಸಿ ಪ್ರತಿಭಟನೆ