ಬಂಟ್ವಾಳ: ಭೂ ಒಡೆತನ, ಹಕ್ಕುಪತ್ರ ನಿವೇಶನ ಸಹಿತ ಜನಪರವಾದ ಅನೇಕ ಯೋಜನೆಗಳನ್ನು ಆರಂಭ ಮಾಡಿದ್ದೇ ಕಾಂಗ್ರೇಸ್ ಪಕ್ಷ. ಆದರೆ ಸುಳ್ಳು ಆರೋಪಗಳಲ್ಲೇ ಮುಳುಗಿರುವ ಬಿಜೆಪಿ ಧರ್ಮ, ದೇಶ ಅಂತ ಹೇಳಿ ಹೀಗೆ ಬೇರೆ ರೀತಿಯಲ್ಲಿ ಜನರನ್ನು ಮೋಸ ಮಾಡಿ, ಸುಳ್ಳು ಹೇಳಿ ಅಧಿಕಾರಕ್ಕೆ ಬರುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ, ಬಿ.ಮೂಡ ವಲಯ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಗುರುವಾರ ನಡೆದ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಅವಧಿಯ ಚುನಾವಣಾ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಹಕ್ಕು ಪತ್ರ ನೀಡಿದೆ ಎಂದ ಅವರು, ಬಿಪಿಎಲ್ ಕಾರ್ಡ್ ರದ್ದುಮಾಡಿ ಜನರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಆರೋಪಿಸಿದರು.ಋಣಮುಕ್ತ ಕಾರ್ಯಕ್ರಮ ಮಾಡಿದ್ದೇ ಕಾಂಗ್ರೆಸ್ ಚರಿತ್ರೆಯಾಗಿದೆ. ಸರ್ಕಾರಗಳು ದಿವಾಳಿಯಾಗುವುದು ಬಡವರಿಗೆ ನೀಡುವ ಕಾರ್ಯಕ್ರಮಗಳಿಂದ ಅಲ್ಲ, ಬಂಡವಾಳ ಶಾಹಿಗಳಿಗೆ ಬ್ಯಾಂಕ್ ಸಾಲ ನೀಡಿ ಮನ್ನಾ ಮಾಡಿದ್ದೀರಿಲ್ಲ ನೀವು. ಅದರಿಂದ ದೇಶ ದಿವಾಳಿಯಾಗುವ ಸಾಧ್ಯತೆಗಳಿವೆ ಎಂದರು. ಹಿರಿಯ ಮುಖಂಡ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿ ಹುಟ್ಟಿದ್ದು ಸುಳ್ಳಿನಿಂದ ಪಕ್ಷವನ್ನು ಕಟ್ಟಲು ಹಿಂದುತ್ವದ ಸುಳ್ಳು, ಹೀಗೆ ಅದು ಬಿಜೆಪಿ ಪರಂಪರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ಬಿಜೆಪಿಯವರ ಕೋಮು ಅಂಗಡಿ ಬಂದ್ ಆಗಿದೆ, ಅಕ್ರಮ ದಂದೆಗಳಿಂದ ಬರುವ ದಾರಿಗಳನ್ನು ಮುಚ್ಚಿದೆ. ಸದ್ಯ ಕರಾವಳಿಯಲ್ಲಿ ಶಾಂತಿ ಇದೆ ಎಂದು ಅವರು ಹೇಳಿದರು.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಕೋಮು ಗಲಭೆಯಲ್ಲ, ಪರಸ್ಪರ ವಿರೋಧ ಭಾಷಣದ ಎರಡು ಸಂಘಟನೆಗಳ ನಡುವೆ ಗಲಾಟೆ ನಡೆಯುಯುತ್ತಿದೆ ಎಂದರು.ಕಳೆದ ಎರಡು ವರ್ಷಗಳಲ್ಲಿ ಕೆಡಿಪಿ ಸಭೆಯನ್ನು ಮಾಡದೆ, ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದಿರುವುದೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಾಧನೆ ಎಂದು ಅವರು ಟೀಕಿಸಿದರು.ಪ್ರಮುಖರಾದ ಅಶ್ವನಿಕುಮಾರ್ ರೈ, ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ತುಂಬೆ, ಅಬ್ಬಾಸ್ ಅಲಿ, ನವಾಜ್ ಬಡಕಬೈಲ್, ಜಯಂತಿ ಎಸ್.ಪೂಜಾರಿ, ಬಿ.ಆರ್.ಅಂಚನ್, ಐಡಾ ಸುರೇಶ್, ಸುಭಾಶ್ಚಂದ್ರ ಶೆಟ್ಟಿ, ವಾಸುಪೂಜಾರಿ, ಸುದರ್ಶನ ಜೈನ್, ಲವಿನಾ ಮೋರಾಸ್, ಸಜ್ವಾನ್, ವಿನಯಕುಮಾರ್ ಸಿಂದ್ಯಾ, ಬೇಬಿ ಕುಂದರ್, ಸುದೀಪ್ ಶೆಟ್ಟಿ, ಗಣೇಶ್ ಪೂಜಾರಿ, ಪದ್ಮಶೇಖರ್ ಜೈನ್,ಶ್ರೀಜಿತ್, ಸಂಜೀವ ಪೂಜಾರಿ, ವೆಂಕಪ್ಪ ಪೂಜಾರಿ ಪುರಸಭೆಯ ಸದಸ್ಯರು, ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿದರು. ಜಗದೀಶ್ ಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು.